ಚುನಾವಣಾ ಹಿಂದು ರಾಹುಲ್ ಗಾಂಧಿ : BJP ಟ್ವೀಟ್
ಬೆಂಗಳೂರು : ಚುನಾವಣಾ ಹಿಂದು ರಾಹುಲ್ ಗಾಂಧಿಯವರಿಗೆ ಇಂದು ಜನ್ಮ ದಿನದ ಸಂಭ್ರಮ. ಹಿಂದೂಗಳ ಭಾವನೆಗೆ ದಕ್ಕೆ ತರುವ ಇಂಥ ಕಾರ್ಯಕ್ರಮಗಳನ್ನು ರಾಗಾ ಹುಟ್ಟುಹಬ್ಬದ ಉಡುಗೊರೆಯ ರೂಪದಲ್ಲಿ ಕಾಂಗ್ರೆಸ್ ಪ್ರಾಯೋಜಿಸುತ್ತಿದೆಯೇ? ಪ್ರಭು ಶ್ರೀರಾಮಚಂದ್ರನ ಮೇಲೆ ಗೌರವ ಇದ್ದರೆ ಡಿಕೆಶಿ ರಾಜೀನಾಮೆ ಪಡೆಯಿರಿ ಎಂದು ರಾಜ್ಯ ಬಿಜೆಪಿ ಆಗ್ರಹಿಸಿದೆ.
ಜೂ.15ರಂದು ರಾತ್ರಿ 9ಗಂಟೆಗೆ ಕ್ಲಬ್‌ಹೌಸ್‌ನಲ್ಲಿ ‘ಸಂಡೇ ಅಂಕಲ್ಸ್ ಆರ್ ಮಂಡೇ ನರ್ಸ್’ಎಂಬ ಕಾರ್ಯಕ್ರಮವನ್ನು ತಂಡವೊಂದು ನಡೆಸಿತ್ತು. ಅದರಲ್ಲಿ ಶೈಲಜಾ ಅಮರನಾಥ್ ಸಹಿತ ಮುಂತಾದವರು ಭಾಗವಹಿಸಿದ್ದರು. ಈ ವೇಳೆ ಹಿಂದೂ ದೇವರು ದೇವತೆಗಳಿಗೆ ಅವಮಾನ ಮಾಡಿದ್ದಾರೆ ಎನ್ನಲಾದ ಆಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ರಾಜ್ಯ ಬಿಜೆಪಿ ಘಟಕ ಆಕ್ರೋಶ ಹೊರಹಾಕಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಅಧಿಕಾರದಲ್ಲಿದ್ದಾಗ ರಾಮನ ಅಸ್ತಿತ್ವಕ್ಕೆ ಪುರಾವೆ ಇಲ್ಲವೆಂದವರು, ಅಧಿಕಾರದಲ್ಲಿ ಇಲ್ಲದಾಗ ರಾಮ ಮಂದಿರ ನಾವೇ ಕಟ್ಟಿಸಬೇಕು ಎಂದು ಕೊಂಡಿದ್ದೆವು ಎಂದು ಹೇಳಿದ್ದರು. ರಾಮನನ್ನು ರಾಜಕೀಯಕ್ಕೆ ಬಳಸಿಕೊಳ್ಳುವಷ್ಟು ನೀಚ ರಾಜಕಾರಣ ಮಾಡುವವರು ಎಂದರೆ ಅದು ಕಾಂಗ್ರೆಸ್ಸಿಗರು.
ಚುನಾವಣಾ ಹಿಂದು ರಾಹುಲ್ ಗಾಂಧಿಯವರಿಗೆ ಇಂದು ಜನ್ಮ ದಿನದ ಸಂಭ್ರಮ. ಹಿಂದೂಗಳ ಭಾವನೆಗೆ ದಕ್ಕೆ ತರುವ ಇಂಥ ಕಾರ್ಯಕ್ರಮಗಳನ್ನು ರಾಗಾ ಹುಟ್ಟುಹಬ್ಬದ ಉಡುಗೊರೆಯ ರೂಪದಲ್ಲಿ ಕಾಂಗ್ರೆಸ್ ಪ್ರಾಯೋಜಿಸುತ್ತಿದೆಯೇ? ಪ್ರಭು ಶ್ರೀರಾಮಚಂದ್ರನ ಮೇಲೆ ಗೌರವ ಇದ್ದರೆ ಡಿಕೆಶಿ ರಾಜೀನಾಮೆ ಪಡೆಯಿರಿ.
ಕರಾವಳಿ ಭಾಗದಲ್ಲಿ ಕೋಮು-ಸೌಹಾರ್ದತೆ ಕದಡುವುದಕ್ಕೆ ಡಿಕೆಶಿ ಅವರ ದಂಡು ಸಂಚು ರೂಪಿಸುತ್ತಿದೆ.
ನಿಮ್ಮ ಆಶಾಡಭೂತಿತನ ಇನ್ನು ನಡೆಯದು.#ಹಿಂದೂವಿರೋಧಿಡಿಕೆಶಿ ಅವರೇ ಮೊದಲು ರಾಜೀನಾಮೆ ನೀಡಿ.#ResignDKS
— BJP Karnataka (@BJP4Karnataka) June 19, 2022
√ ಸೋನಿಯಾ ಗಾಂಧಿ ಓಲೈಕೆಗಾಗಿ ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ಸ್ಥಾಪನೆ √ ಮತದಾರ “ಬಾಂಧವರ” ಪರವಾಗಿ ಗಲಭೆಗಳ ಸಮರ್ಥನೆ √ ಪಠ್ಯಪುಸ್ತಕ ಹರಿದು ಶಾರದಾ ಮಾತೆಗೆ ಅಪಮಾನ √ ಈಗ ಶೈಲಜಾ ಹಾಗೂ ಕಾಂಗ್ರೆಸ್ ಐಟಿ ಸೆಲ್ ಮೂಲಕ ಹಿಂದು ಧರ್ಮಕ್ಕೆ ಅಪಮಾನ. ಡಿಕೆಶಿ ಅವರೇ, ಚುನಾವಣಾ ವರ್ಷದಲ್ಲಿ ನಿಮ್ಮ ಅಸಲಿಯತ್ತು ಬಯಲಾಗುತ್ತಿದೆ.
ಡಿಕೆಶಿ ಅವರೇ ಅನ್ಯ ಧರ್ಮದವರನ್ನು ಅಪಮಾನಿಸಿದ್ದರೆ ನೀವು ಸಹಿಸಿಕೊಳ್ಳುತ್ತಿದ್ದಿರಾ? ಹಿಂದೂಗಳ ಹಾಗೂ ಹಿಂದೂಗಳ ಧಾರ್ಮಿಕ ಭಾವನೆಗೆ ಕಾಂಗ್ರೆಸ್ ಪದಾಧಿಕಾರಿ ಧಕ್ಕೆ ತಂದರೂ ದಿವ್ಯ ಮೌನವೇಕೆ?
√ ಸೋನಿಯಾ ಗಾಂಧಿ ಓಲೈಕೆಗಾಗಿ ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ಸ್ಥಾಪನೆ
√ ಮತದಾರ "ಬಾಂಧವರ" ಪರವಾಗಿ ಗಲಭೆಗಳ ಸಮರ್ಥನೆ
√ ಪಠ್ಯಪುಸ್ತಕ ಹರಿದು ಶಾರದಾ ಮಾತೆಗೆ ಅಪಮಾನ
√ ಈಗ ಶೈಲಜಾ ಹಾಗೂ ಕಾಂಗ್ರೆಸ್ ಐಟಿ ಸೆಲ್ ಮೂಲಕ ಹಿಂದು ಧರ್ಮಕ್ಕೆ ಅಪಮಾನ
ಡಿಕೆಶಿ ಅವರೇ, ಚುನಾವಣಾ ವರ್ಷದಲ್ಲಿ ನಿಮ್ಮ ಅಸಲಿಯತ್ತು ಬಯಲಾಗುತ್ತಿದೆ.#ResignDKS
— BJP Karnataka (@BJP4Karnataka) June 19, 2022
ಡಿಕೆಶಿ ಅವರೇ ನೀವು ಕೆಪಿಸಿಸಿ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಕಾಂಗ್ರೆಸ್ ಪಕ್ಷದ ನಾನಾ ಘಟಕಗಳಿಗೆ ಎರಡು ವರ್ಗದ ಜನರನ್ನು ಮಾತ್ರ ನೇಮಕ ಮಾಡಿದ್ದೀರಿ. ಮೊದಲನೆಯದು ಶೈಲಜಾ ಅಮರನಾಥ್ ಅವರಂಥ ಹಿಂದು ವಿರೋಧಿಗಳು. ಎರಡನೆಯದು ನಲಪಾಡ್ ಅವರಂತಹ ರೌಡಿಗಳು. ಇಂಥ ಆಯ್ಕೆಗಾಗಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ಎಂದು ಬಿಜೆಪಿ ಬರೆದುಕೊಂಡಿದೆ.








