Rishabh Pant : ಟೀಕಾಗಾರರಿಗೆ ರಿಷಬ್ ಪಂತ್ ತಿರುಗೇಟು
ಒಬ್ಬ ಆಟಗಾರನಾಗಿ, ನಾಯಕನಾಗಿ ನೂರಕ್ಕೆ ನೂರರಷ್ಟು ನ್ಯಾಯ ಮಾಡುವುದಕ್ಕೆ ನಾನು ಕೃಷಿಸುತ್ತಿದ್ದೇನೆ. ಅದನ್ನ ಬಿಟ್ಟು ಯಾರು ಏನ್ ಹೇಳಿದ್ರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಟೀಂ ಇಂಡಿಯಾದ ಸ್ಟಾಂಡಿಂಗ್ ಕ್ಯಾಪ್ಟನ್ ರಿಷಬ್ ಪಂತ್ ಹೇಳಿದ್ದಾರೆ.
ದಿನದಿಂದ ದಿನಕ್ಕೆ ನಾನು ಆಟವನ್ನು ಸುಧಾರಿಸುತ್ತಾ ಗಮನ ಹರಿಸುತ್ತೇನೆ ಎಂದು ಟೀಕಕಾರರಿಗೆ ಪಂತ್ ಟಾಂಗ್ ನೀಡಿದ್ದಾರೆ.
ತವರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಪಂತ್ ಇದೇ ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಮುನ್ನಡೆಸಿದರು. ಆದ್ರೆ ಮೊದಲೆರಡು ಪಂದ್ಯಗಳಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಅನುಭವಿಸಿತ್ತು.
ಅದರಲ್ಲೂ ನಾಯಕರಾಗಿ ಪಂತ್ ಬ್ಯಾಟಿಂಗ್ ನಲ್ಲಿ ಮಿಂಚಲೇ ಇಲ್ಲ. ಮೊದಲ ಪಂದ್ಯದಲ್ಲಿ 29 ರನ್ ಗಳಿಸಿದ್ರೆ ಎರಡನೇ ಪಂದ್ಯದಲ್ಲಿ ಐದು ರನ್ ಗಳಿಸಿದರು.

ಈ ಹಿನ್ನೆಲೆಯಲ್ಲಿ ಪಂತ್ ಶಾಟ್ ಸೆಲೆಕ್ಷನ್ ಬಗ್ಗೆ ಹಿರಿಯ ಆಟಗಾರರು ಟೀಕೆ ಮಾಡಿದರು. ಅಲ್ಲದೇ ನೀನು ಹಂಗಾಮಿ ನಾಯಕನಷ್ಟೆ ನಾಯಕತ್ವ ಒತ್ತಡ ಬಿಟ್ಟು ಬ್ಯಾಟಿಂಗ್ ಕಡೆ ಗಮನ ಹರಿಸು ಎಂದು ಸಲಹೆ ನೀಡಿದ್ದರು.
ಈ ಬಗ್ಗೆ ಮಾತನಾಡಿರುವ ರಿಷಬ್ ಪಂತ್, ಈ ಸರಣಿಯಲ್ಲಿ ಹಲವು ಸಕಾರಾತ್ಮಕ ಅಂಶಗಳಿವೆ.
ಮೊದಲೆರಡು ಪಂದ್ಯಗಳಲ್ಲಿ ಸೋತು 0-2ರಿಂದ ಹಿನ್ನಡೆಯಲ್ಲಿದ್ದಾಗ.. ಸತತ ಪರಿಶ್ರಮದಿಂದ ಗೆದ್ದ ರೀತಿ ಅದ್ಭುತವಾಗಿತ್ತು.
ಒಬ್ಬ ಆಟಗಾರನಾಗಿ, ನಾಯಕನಾಗಿ ನಾನು ಯಾವಾಗಲೂ ಸಂಪೂರ್ಣ ನ್ಯಾಯ ಸಲ್ಲಿಸಲು ಪ್ರಯತ್ನಿಸುತ್ತೇನೆ.
ಈಗ ನೀವು ನನ್ನ ಆಟದ ಶೈಲಿ ಮತ್ತು ನಾಯಕನಾಗಿ ನನ್ನ ತಂತ್ರಗಳ ಬಗ್ಗೆ ಹೇಳಬೇಕು! ನನ್ನ ಗಮನವು ಕೇವಲ ಆಟದ ಮೇಲಿತ್ತು. ಅದು ಮೈದಾನದಲ್ಲಿರಲಿ ಅಥವಾ ಮೈದಾನದ ಹೊರಗಿರಲಿ!” ಎಂದು ಪಂತ್ ಹೇಳಿದ್ದಾರೆ.








