Rahul Tewatia | ಟ್ವಿಟ್ಟರ್ ಮೇಲೆ ಅಲ್ಲ ಆಟದ ಮೇಲೆ ದೃಷ್ಠಿಯನ್ನಿಡು
ಐರ್ಲೆಂಡ್ ವಿರುದ್ಧ ನಡೆಯಲಿರುವ ಟಿ 20 ಸರಣಿಗೆ ಭಾರತ ತಂಡಕ್ಕೆ ತಮ್ಮನ್ನು ಆಯ್ಕೆ ಮಾಡದಿದ್ದಕ್ಕೆ ರಾಹುಲ್ ಟೆವಾಟಿಯಾ ಅಸಮಾಧಾನ ಹೊರಹಾಕಿದ್ದಾರೆ.
ಟ್ವಿಟ್ಟರ್ ನಲ್ಲಿ ನಿರೀಕ್ಷೆಗಳು ಬಾಧಿಸುತ್ತವೆ ಎಂದು ತಮ್ಮ ಬೇಸರ ಹೊರಹಾಕಿದ್ದಾರೆ.
ಈ ಕ್ರಮದಲ್ಲಿ ತೆವಾಟಿಯಾ ಬಗ್ಗೆ ದಕ್ಷಿಣ ಆಫ್ರಿಕಾ ಮಾಜಿ ಕ್ಯಾಪ್ಟನ್ ಗ್ರೇಮ್ ಸ್ಮಿತ್ ಆಸಕ್ತಿದಾಯಕ ಹೇಳಿಕೆಗಳನ್ನು ನೀಡಿದ್ದಾರೆ.
ಟ್ವಿಟ್ಟರ್ ಬದಲಿಗೆ ಆಟದ ಮೇಲೆ ಹೆಚ್ಚು ಗಮನ ಕೊಡು ಅಂತಾ ಸೂಚಿಸಿದ್ದಾರೆ.
ಪ್ರಸ್ತುತ ತುಂಬಾ ಮಂದಿ ಪ್ರತಿಭಾವಂತ ಆಟಗಾರರಿದ್ದಾರೆ.
ಹೀಗಾಗಿ ಭಾರತ ತಂಡದಲ್ಲಿ ಸ್ಥಾನ ಸಿಗೋದು ತುಂಬಾ ಕಷ್ಟ.

ಕೋಚ್ ರಾಹುಲ್ ದ್ರಾವಿಡ್, ಕ್ಯಾಪ್ಟನ್ ರೋಹಿತ್ ಶರ್ಮಾ ಟಿ 20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ಆಯ್ಕೆ ಮಾಡಿದ್ದಾರೆ ಎಂದು ಭಾವಿಸುತ್ತೇನೆ.
ನೀವು ಟ್ವಿಟ್ಟರ್ ಬದಲಿಗೆ ಆಟದ ಮೇಲೆ ದೃಷ್ಠಿಯನ್ನಿಟ್ಟು ಅದ್ಭುತ ಪ್ರದರ್ಶನ ನೀಡು ಎಂದು ಸಲಹೆ ನೀಡಿದ್ದಾರೆ.
ಕಳೆದ ವರ್ಷ ಸ್ವದೇಶದಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಗೆ ರಾಹುಲ್ ತೆವಾಟಿಯಾ ಆಯ್ಕೆ ಆಗಿದ್ದರು.
ಆದ್ರೆ ಗಾಯದ ಕಾರಣದಿಂದಾಗಿ ಅವರು ಸರಣಿಯಿಂದ ಹೊರಗುಳಿದರು.
ಇನ್ನು ಇಂಡಿಯನ್ ಪ್ರಿಮಿಯರ್ ಲೀಗ್ 2022ರಲ್ಲಿ ಗುಜರಾತ್ ಟೈಟಾನ್ಸ್ ಪರ ತೆವಾಟಿಯಾ ಮಿಂಚು ಹರಿಸಿದ್ದರು.
16 ಪಂದ್ಯಗಳಲ್ಲಿ ತೆವಾಟಿಯಾ, 147.62 ಸ್ಟ್ರೈಕ್ ರೇಟ್ ನೊಂದಿಗೆ 217 ರನ್ ಗಳಿಸಿದ್ದಾರೆ.








