2 ವರ್ಷದ ಬಳಿಕ ಇಂದಿನಿಂದ ಅಮರನಾಥ ಯಾತ್ರೆಗ ಚಾಲನೆ…
ಸತತ 2 ವರ್ಷಗಳ ಸುದೀರ್ಘ ವಿರಾಮದ ನಂತರ ಅಮರನಾಥ ಯಾತ್ರೆ ಮತ್ತೆ ಪ್ರಾರಂಭವಾಗಿದ್ದು, ಸುಮಾರು 2,750 ಯಾತ್ರಿಕರ ಮೊದಲ ತಂಡ ಇಂದು ಯಾತ್ರೆಯನ್ನು ಪ್ರಾರಂಭಿಸಲಿದೆ.
ಹಿಮಾಲಯದಲ್ಲಿ ಮಂಜಿನಿಂದ ಸ್ವಾಭಾವಿಕವಾಗಿ ರೂಪುಗೊಂಡಿರು ಶಿವಲಿಂಗದ ರೂಪವನ್ನ ನೋಡಲು ಪ್ರತಿ ವರ್ಷ ಸಹಸ್ರಾರು ಮಂದಿ ತೆರಳುತ್ತಾರೆ. ಅನಂತನಾಗ್ ಜಿಲ್ಲೆಯ ಪಹಲ್ಗಾಮ್‍ನಲ್ಲಿರುವ ನುನ್ವಾನ್ ಬೇಸ್ ಕ್ಯಾಂಪ್‍ನಲ್ಲಿ ಜಿಲ್ಲಾಧಿಕಾರಿ ಪಿಯೂಷ್ ಸಿಂಗ್ಲಾ ಅವರು ಅಮರನಾಥ ಯಾತ್ರೆಗೆ ಚಾಲನೆ ನೀಡಿದರು.
ಪ್ರಯಾಣವು ಬಹುತೇಕ ಕಾಲ್ನಡಿಗೆಯಲ್ಲೇ ಪ್ರಯಾಣಿಸುತ್ತಾರೆ, ಮಾರ್ಗದುದ್ದಕ್ಕೂ ಶೀಷ್‍ನಾಗ್ ಮತ್ತು ಪಂಚತಾರ್ಣಿಯಲ್ಲಿ ರಾತ್ರಿ ವ್ಯವಸ್ಥೆ ಮಾಡಲಾಗಿದೆ. 43 ದಿನಗಳ ಯಾತ್ರೆಯನ್ನು ಸುಗಮವಾಗಿ ನಡೆಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದರು.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ವೇದ ಮಂತ್ರಗಳ ಪಠಣದ ನಡುವೆ ಜಮ್ಮು ಮೂಲ ಶಿಬಿರದಿಂದ 4,890 ಯಾತ್ರಾರ್ಥಿಗಳ ಮೊದಲ ಬ್ಯಾಚ್‌ಗೆ ಬುಧವಾರ ಚಾಲನೆ ನೀಡಿದರು. ಭಗವತಿ ನಗರ ಮೂಲ ಶಿಬಿರದಿಂದ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಯಾತ್ರಾರ್ಥಿಗಳು ತಮ್ಮ ಪ್ರಯಾಣ ಆರಂಭಿಸಿದರು.
ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ ಸಿಬ್ಬಂದಿಯನ್ನು ಹೊತ್ತ ಭದ್ರತಾ ವಾಹನಗಳ ಬೆಂಗಾವಲು ಪಡೆಯನ್ನು ಯಾತ್ರಾರ್ಥಿ ರಕ್ಷಣೆಗೆ ಬೆಂಗಾವಲು ಮಾಡಲಾಗಿದೆ.








