BJP vs Congress | ಬಿಲದಲ್ಲಿ ಗೆಣಸು ಕೆರೆಯುತ್ತಿದ್ರಾ..? ಸಿಎಂಗೆ `ಕೈ’ ಪ್ರಶ್ನೆ
ಬೆಂಗಳೂರು : ಬಸವರಾಜ ಬೊಮ್ಮಾಯಿ ಅವರೇ, ಅ ಸಂದರ್ಭದಲ್ಲಿ ನಿಮ್ಮ ಪಕ್ಷದವರು ಬಿಲದಲ್ಲಿ ಗೆಣಸು ಕೆರೆಯುತ್ತಿದ್ರಾ ಅಥವಾ ಸದನದಲ್ಲಿ ಬ್ಲೂ ಫಿಲ್ಮ್ ನೋಡ್ತಿದ್ರಾ ಎಂದು ರಾಜ್ಯ ಕಾಂಗ್ರೆಸ್ ಘಟಕ ಪ್ರಶ್ನಿಸಿದೆ.
ನಿಮ್ಮದು ಮುಚ್ಚಿ ಹಾಕುವ ಸರ್ಕಾರವಾಗಿತ್ತು ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ರಾಜ್ಯ ಕಾಂಗ್ರೆಸ್ ಘಟಕ ಟಾಂಗ್ ನೀಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಮಾನ್ಯ ಮುಖ್ಯಮಂತ್ರಿಗಳೇ, ನಿಮ್ಮ ಸರ್ಕಾರದ ಅಕ್ರಮಗಳು, ಅವಾಂತರಗಳು ಬಯಲಾದಾಗ ಕಾಂಗ್ರೆಸ್ ಮೇಲೆ ಆಪಾದಿಸುವ ಖಯಾಲಿ ಬೆಳಸಿಕೊಂಡಿದ್ದೀರಿ. ಈಗ ಅನಗತ್ಯವಾಗಿ ಆರೋಪಿಸುತ್ತಿದ್ದೀರಲ್ಲ ಬಸವರಾಜ ಬೊಮ್ಮಾಯಿ ಅವರೇ, ಅ ಸಂದರ್ಭದಲ್ಲಿ ನಿಮ್ಮ ಪಕ್ಷದವರು ಬಿಲದಲ್ಲಿ ಗೆಣಸು ಕೆರೆಯುತ್ತಿದ್ರಾ ಅಥವಾ ಸದನದಲ್ಲಿ ಬ್ಲೂ ಫಿಲ್ಮ್ ನೋಡ್ತಿದ್ರಾ ಎಂದು ಪ್ರಶ್ನೆ ಮಾಡಿದೆ.
https://twitter.com/INCKarnataka/status/1544980266740883457?s=20&t=czWhKp_CX9crgHDHl8etIA
ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಿದವರು ಯಾರು? ನ್ಯಾಯಾಂಗವನ್ನೇ ಬೆದರಿಸುವ ಮಟ್ಟಿಗೆ ಭ್ರಷ್ಟಾಚಾರಕ್ಕೆ ಬೆಂಬಲ ಸಿಕ್ಕಿದ್ದು ಹೇಗೆ? ಬೆದರಿಕೆ ಹಾಕಿದ ಪ್ರಕರಣದ ತನಿಖೆಯ ಮಾಡುವ ಬಗ್ಗೆ ಚಕಾರವೆತ್ತುತ್ತಿಲ್ಲ ಏಕೆ? ‘ಪ್ರಾಮಾಣಿಕತೆ’ಯನ್ನು ಮೈಕಿನ ಮುಂದೆ ಹೇಳುವುದಲ್ಲ ಬಸವರಾಜ ಬೊಮ್ಮಾಯಿ ಅವರೇ, ಕೃತಿಯಲ್ಲಿ ತೋರಿಸಬೇಕು.
ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಅವರು RSSನ ಶೋಷಣೆ ಸಿದ್ಧಾಂತದ ವಕ್ತಾರರಂತೆ ವರ್ತಿಸುತ್ತಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಕಲಿಯುವ ಬಹುತೇಕ ತಳ ಸಮುದಾಯದ ಮಕ್ಕಳನ್ನು ಶಿಕ್ಷಣ ವಂಚಿತರಾಗಿಸಲು ನಾಗಪುರದ ಕೇಂದ್ರ ಕಚೇರಿಯಿಂದ ಸುಪಾರಿ ಪಡೆದಿದ್ದಾರೆ. ಅವರ ಹುನ್ನಾರದಿಂದಲೇ ರಾಜ್ಯದ 10 ಲಕ್ಷ ಮಕ್ಕಳು ಶಿಕ್ಷಣದಿಂದ ದೂರ ಉಳಿಯುವಂತಾಗಿದೆ ಎಂದು ಕಿಡಿಕಾರಿದೆ.








