ADVERTISEMENT
Saturday, June 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Siddaramaiah | ನಿಮ್ಮ ಸರ್ಕಾರದ ಸಾಧನೆ ಏನು ಬಿ.ಸಿ.ನಾಗೇಶ್?

Mahesh M Dhandu by Mahesh M Dhandu
July 8, 2022
in Newsbeat, Politics, ರಾಜಕೀಯ
BJP

BJP

Share on FacebookShare on TwitterShare on WhatsappShare on Telegram

Siddaramaiah | ನಿಮ್ಮ ಸರ್ಕಾರದ ಸಾಧನೆ ಏನು ಬಿ.ಸಿ.ನಾಗೇಶ್?

ಬೆಂಗಳೂರು : ನಾವು ಕೈಗೊಂಡ ಕ್ರಮಗಳಿಂದಾಗಿ ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಮತ್ತು ಎನ್‍ಸಿಇಆರ್‌‌ಟಿ ಯು ರಾಜ್ಯದ ಶಾಲೆಗಳಲ್ಲಿ 3,5,8 ನೇ ತರಗತಿಗಳಲ್ಲಿ ಕಲಿಯುತ್ತಿದ್ದ 1.29 ಲಕ್ಷ ವಿದ್ಯಾರ್ಥಿಗಳಿಗೆ ನಡೆಸಿದ ರಾಷ್ಟ್ರೀಯ ಸಾಧನೆ ಸಮೀಕ್ಷೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿತ್ತು. ನಿಮ್ಮ ಸರ್ಕಾರದ ಸಾಧನೆ ಏನು ಬಿ.ಸಿ.ನಾಗೇಶ್ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Related posts

ಭಾರತಕ್ಕೆ FATFನಲ್ಲಿ ಐತಿಹಾಸಿಕ ಗೆಲುವು: IAS ಅಧಿಕಾರಿ ವಿವೇಕ್ ಅಗರ್ವಾಲ್ ಉಪಾಧ್ಯಕ್ಷರಾಗಿ ಆಯ್ಕೆ

ಭಾರತಕ್ಕೆ FATFನಲ್ಲಿ ಐತಿಹಾಸಿಕ ಗೆಲುವು: IAS ಅಧಿಕಾರಿ ವಿವೇಕ್ ಅಗರ್ವಾಲ್ ಉಪಾಧ್ಯಕ್ಷರಾಗಿ ಆಯ್ಕೆ

June 20, 2026
TMC ಯಲ್ಲಿ ಭಾರೀ ರಾಜಕೀಯ ಬಿಕ್ಕಟ್ಟು..20 ಸಂಸದರನ್ನು(MP) ಅನರ್ಹಗೊಳಿಸಲು ಸ್ಪೀಕರ್‌ಗೆ ಮನವಿ

TMC ಯಲ್ಲಿ ಭಾರೀ ರಾಜಕೀಯ ಬಿಕ್ಕಟ್ಟು..20 ಸಂಸದರನ್ನು(MP) ಅನರ್ಹಗೊಳಿಸಲು ಸ್ಪೀಕರ್‌ಗೆ ಮನವಿ

June 20, 2026

ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಅವಧಿಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಎಷ್ಟು ಒತ್ತು ಕೊಟ್ಟಿದ್ದರು? ಆ ಸರ್ಕಾರ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಶೂ, ಸಾಕ್ಸ್ ಮತ್ತು ಸೈಕಲ್ ಗಳನ್ನು ವಿತರಿಸುತ್ತಿದ್ದರು. ಅವರ ಸರ್ಕಾರದಲ್ಲಿ ಎಷ್ಟು ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡಿದ್ದರು ಎಂದು ಸಚಿವ ಬಿ.ಸಿ.ನಾಗೇಶ್ ಹೇಳಿಕೆ ನೀಡಿದ್ದರು.

ಇದಕ್ಕೆ ಟ್ವಿಟ್ಟರ್ ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ಮಕ್ಕಳು ಶಾಲೆಗೆ ಬರೋದು ಶೂ, ಸಾಕ್ಸ್ ಗಳಿಗಲ್ಲ ಎಂಬ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಹೇಳಿಕೆ  ಅಮಾನವೀಯ ಮತ್ತು ಕ್ರೂರತನದ್ದಾಗಿದೆ. ನಾಲ್ಕಾರು ಮೈಲು ಬರಿಗಾಲಲ್ಲಿ ನಡೆದು ಶಾಲೆಗೆ ಬರುವ ಬಡ ಮಕ್ಕಳ ಕಷ್ಟ ತಿಳಿದಿದ್ದರೆ ಶಿಕ್ಷಣ ಸಚಿವರು ಇಷ್ಟೊಂದು ಸಂವೇದನಾರಹಿತರಾಗಿ ಮಾತನಾಡುತ್ತಿರಲಿಲ್ಲ.

siddaramaiah-questioned What is the achievement of your government BC Nagesh Saaksha Tv
siddaramaiah-questioned What is the achievement of your government BC Nagesh Saaksha Tv

ದಲಿತರು, ಅಲೆಮಾರಿಗಳು, ಹಿಂದುಳಿದವರು ಹಾಗೂ ಎಲ್ಲ ಜಾತಿಯ ಬಡವರ ಮಕ್ಕಳಿಗೆ ಸಣ್ಣ ಸ್ವಾಭಿಮಾನ ಇರಲಿ, ಕಲಿಯುವ, ಶಾಲೆಗೆ ಹೋಗುವ ಹುಮ್ಮಸ್ಸು ಬರಲಿ ಎಂಬ ಕಾರಣಕ್ಕೆ ನಾವು ಮಕ್ಕಳ ಸ್ನೇಹಿಯಾದ ಯೋಜನೆಗಳನ್ನು ಜಾರಿಗೆ ತಂದಿದ್ದೆವು. ಬಿ.ಸಿ.ನಾಗೇಶ್ ಅವರೇ, ಭ್ರಷ್ಟಾಚಾರದಲ್ಲಿ ಮುಳುಗಿರುವ ನಿಮಗೆ ಇದೆಲ್ಲಿ ಅರ್ಥವಾದೀತು ಎಂದು ಪ್ರಶ್ನಿಸಿದ್ದಾರೆ.

ನಮ್ಮ ಸರ್ಕಾರದ ಅವಧಿಯಲ್ಲಿ 7905 ಪ್ರಾಥಮಿಕ ಶಾಲಾ ಶಿಕ್ಷಕರು, 1689 ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಮಾಡಿದ್ದೆವು. 10,000 ಪಧವೀಧರ ವಿಷಯವಾರು ಶಿಕ್ಷಕರು, ದೈಹಿಕ ಶಿಕ್ಷಕರು ಹಾಗೂ ಗ್ರಂಥಪಾಲಕರ ನೇಮಕಾತಿ ಪ್ರಕ್ರಿಯೆಯು ಅಂತಿಮ ಹಂತಕ್ಕೆ ಬಂದಿತ್ತು.ಇದರಿಂದಾಗಿ ಒಟ್ಟು 20,000 ಶಿಕ್ಷಕರ ನೇಮಕಾತಿ ಮಾಡಿದಂತಾಗಿತ್ತು.

ನಮ್ಮ ಅವಧಿಯಲ್ಲಿ 20,000 ಅತಿಥಿ ಶಿಕ್ಷಕರು, 1,763 ಪಿಯು ಕಾಲೇಜುಗಳ ಉಪನ್ಯಾಸಕರನ್ನು ನೇಮಕಾತಿ ಮಾಡಿದ್ದೆವು. ನಮ್ಮ ಸರ್ಕಾರ 47 ಲಕ್ಷ ಮಕ್ಕಳಿಗೆ ಸಮವಸ್ತ್ರ, ಶೂ, ಸಾಕ್ಸ್ ಹಾಗೂ 5 ಲಕ್ಷ ಮಕ್ಕಳಿಗೆ ಬೈಸಿಕಲ್ ನೀಡಿತ್ತು.

ಮಕ್ಕಳ ಕಲ್ಯಾಣಕ್ಕಾಗಿ ಇರುವ ಹಿಂದಿನ ಎಲ್ಲಾ ಯೋಜನೆಗಳನ್ನು ಮುಂದುವರೆಸಬೇಕು, ಶೂ, ಸಾಕ್ಸ್, ಸೈಕಲ್, ಹಾಲು, ಸಮವಸ್ತ್ರ, ಪುಸ್ತಕ, ವ್ಯವಸ್ಥಿತ ಕೊಠಡಿಗಳನ್ನು ಕೂಡಲೆ ಒದಗಿಸಬೇಕು, ಶಾಲಾ ಕೊಠಡಿಗಳ ದುರಸ್ತಿ ಮತ್ತು ಖಾಲಿಯಿರುವ ಶಿಕ್ಷಕ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮವಹಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ. 11/11#SaveSchools

— Siddaramaiah (@siddaramaiah) July 7, 2022

ನಾವು ಮಕ್ಕಳ ಪೌಷ್ಟಿಕತೆ ಹೆಚ್ಚಿಸುವುದಕ್ಕಾಗಿಯೆ ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೆ ತಂದು ವಾರದಲ್ಲಿ 5 ದಿನ ಕೆನೆಭರಿತ ಹಾಲನ್ನು ನೀಡಿದ್ದೆವು.

ನಾವು ಗುಣಮಟ್ಟದ ಶಿಕ್ಷಣಕ್ಕಾಗಿಯೆ 1400 ಕ್ಕೂ ಹೆಚ್ಚು ಹಾಸ್ಟೆಲ್‍ಗಳು, ಆಶ್ರಮ ಶಾಲೆಗಳು ಮತ್ತು ವಸತಿ ಶಾಲೆಗಳನ್ನು ನಿರ್ಮಿಸಿದ್ದೆವು. ನನಗಿರುವ ಮಾಹಿತಿ ಪ್ರಕಾರ 71,279 ಕೊಠಡಿಗಳ ನವೀಕರಣ, ಪುನರ್ ನವೀಕರಣ ಕಾರ್ಯಗಳನ್ನು ಪೂರ್ಣಗೊಳಿಸಿದ್ದೇವೆ ಬಿ.ಸಿ.ನಾಗೇಶ್.

ಶಿಕ್ಷಣ ಸಚಿವ  ಬಿ.ಸಿ.ನಾಗೇಶ್  ಅವರೇ, ಬಿಜೆಪಿ ಸರ್ಕಾರ ಎಷ್ಟು ಜನ ಶಿಕ್ಷಕರನ್ನು ನೇಮಕ ಮಾಡಿದೆ? ಎಷ್ಟು ಜನ ಮಕ್ಕಳಿಗೆ ಸೈಕಲ್ ನೀಡಿದೆ? ಎಷ್ಟು ಶಾಲೆಗಳನ್ನು, ವಸತಿ ಶಾಲೆಗಳನ್ನು ನಿರ್ಮಿಸಿದೆ? ಎಂಬ ಲೆಕ್ಕವನ್ನು ರಾಜ್ಯದ ಜನರ ಮುಂದಿಡಿ.  

ಸರ್ಕಾರವೆ ಹೈ ಕೋರ್ಟಿಗೆ ಸಲ್ಲಿಸಿರುವ ವರದಿ ಪ್ರಕಾರ ಸುಮಾರು 10.12 ಲಕ್ಷ ಮಕ್ಕಳು ಶಾಲೆಯಿಂದ ಹೊರಗೆ ಇದ್ದಾರೆ. ಬಿ.ಸಿ.ನಾಗೇಶ್ ಅವರೇ, ಈ ಮಕ್ಕಳ ಭವಿಷ್ಯ ಹಾಳಾದರೆ ಅದಕ್ಕೆ  ಬಿಜೆಪಿ ಸರ್ಕಾರದ ಬೇಜವಾಬ್ದಾರಿ ಮತ್ತು ನಿಮ್ಮ ಉಡಾಫೆತನವೇ ಕಾರಣವಾಗಲಿದೆ.

ಶಿಕ್ಷಣ ಸಚಿವ @BCNagesh_bjp ಅವರೇ, ನಿಮಗೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿ, ಬದ್ಧತೆ ಇದ್ದರೆ ಪ್ರಾಥಮಿಕ & ಪ್ರೌಢ ಶಿಕ್ಷಣ ಇಲಾಖೆಯಲ್ಲಿ 2008ರಿಂದ ಈವರೆಗೆ ಏನೇನಾಗಿದೆ? ಯಾವ ಸಾಧನೆಗಳಾಗಿವೆ? ಹಾಗೂ ಈ 14 ವರ್ಷಗಳಲ್ಲಿ ಸದರಿ ಇಲಾಖೆಯಲ್ಲಿ ಖರ್ಚು ಮಾಡಿದ ಪ್ರತಿ ಪೈಸೆಗೂ ಸಂಬಂಧಿಸಿದಂತೆ ಶ್ವೇತ ಪತ್ರ ಹೊರಡಿಸಿ. 10/11#SaveSchools

— Siddaramaiah (@siddaramaiah) July 7, 2022

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರೇ, ನಿಮಗೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿ, ಬದ್ಧತೆ ಇದ್ದರೆ ಪ್ರಾಥಮಿಕ & ಪ್ರೌಢ ಶಿಕ್ಷಣ ಇಲಾಖೆಯಲ್ಲಿ 2008ರಿಂದ ಈವರೆಗೆ ಏನೇನಾಗಿದೆ? ಯಾವ ಸಾಧನೆಗಳಾಗಿವೆ? ಹಾಗೂ ಈ 14 ವರ್ಷಗಳಲ್ಲಿ ಸದರಿ ಇಲಾಖೆಯಲ್ಲಿ ಖರ್ಚು ಮಾಡಿದ ಪ್ರತಿ ಪೈಸೆಗೂ ಸಂಬಂಧಿಸಿದಂತೆ ಶ್ವೇತ ಪತ್ರ ಹೊರಡಿಸಿ.

ಮಕ್ಕಳ ಕಲ್ಯಾಣಕ್ಕಾಗಿ ಇರುವ ಹಿಂದಿನ ಎಲ್ಲಾ ಯೋಜನೆಗಳನ್ನು ಮುಂದುವರೆಸಬೇಕು, ಶೂ, ಸಾಕ್ಸ್, ಸೈಕಲ್, ಹಾಲು, ಸಮವಸ್ತ್ರ, ಪುಸ್ತಕ, ವ್ಯವಸ್ಥಿತ ಕೊಠಡಿಗಳನ್ನು ಕೂಡಲೆ ಒದಗಿಸಬೇಕು, ಶಾಲಾ ಕೊಠಡಿಗಳ ದುರಸ್ತಿ ಮತ್ತು ಖಾಲಿಯಿರುವ ಶಿಕ್ಷಕ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮವಹಿಸಬೇಕು ಎಂದು ಸರ್ಕಾರವನ್ನು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

Tags: #Saaksha TVB C NageshBJPCongressSiddaramaiah
ShareTweetSendShare
Join us on:

Related Posts

ಭಾರತಕ್ಕೆ FATFನಲ್ಲಿ ಐತಿಹಾಸಿಕ ಗೆಲುವು: IAS ಅಧಿಕಾರಿ ವಿವೇಕ್ ಅಗರ್ವಾಲ್ ಉಪಾಧ್ಯಕ್ಷರಾಗಿ ಆಯ್ಕೆ

ಭಾರತಕ್ಕೆ FATFನಲ್ಲಿ ಐತಿಹಾಸಿಕ ಗೆಲುವು: IAS ಅಧಿಕಾರಿ ವಿವೇಕ್ ಅಗರ್ವಾಲ್ ಉಪಾಧ್ಯಕ್ಷರಾಗಿ ಆಯ್ಕೆ

by admin
June 20, 2026
0

ಭಾರತಕ್ಕೆ FATFನಲ್ಲಿ ಐತಿಹಾಸಿಕ ಗೆಲುವು: IAS ಅಧಿಕಾರಿ ವಿವೇಕ್ ಅಗರ್ವಾಲ್ ಉಪಾಧ್ಯಕ್ಷರಾಗಿ ಆಯ್ಕೆ ಭಾರತಕ್ಕೆ ಜಾಗತಿಕ ಹಣಕಾಸು ಮತ್ತು ಭದ್ರತಾ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಸಾಧನೆ ದೊರೆತಿದ್ದು,...

TMC ಯಲ್ಲಿ ಭಾರೀ ರಾಜಕೀಯ ಬಿಕ್ಕಟ್ಟು..20 ಸಂಸದರನ್ನು(MP) ಅನರ್ಹಗೊಳಿಸಲು ಸ್ಪೀಕರ್‌ಗೆ ಮನವಿ

TMC ಯಲ್ಲಿ ಭಾರೀ ರಾಜಕೀಯ ಬಿಕ್ಕಟ್ಟು..20 ಸಂಸದರನ್ನು(MP) ಅನರ್ಹಗೊಳಿಸಲು ಸ್ಪೀಕರ್‌ಗೆ ಮನವಿ

by admin
June 20, 2026
0

TMC ಯಲ್ಲಿ ಭಾರೀ ರಾಜಕೀಯ ಬಿಕ್ಕಟ್ಟು..20 ಸಂಸದರನ್ನು(MP) ಅನರ್ಹಗೊಳಿಸಲು ಸ್ಪೀಕರ್‌ಗೆ ಮನವಿ ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ಸಂಭವಿಸಿದ್ದು, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ...

SRA (Slum Rehabilitation Authority) ಯೋಜನೆಗೆ ಬೆದರಿಕೆ…ಕೋಟಿ ಕೋಟಿ ಲೂಟಿ..?

SRA (Slum Rehabilitation Authority) ಯೋಜನೆಗೆ ಬೆದರಿಕೆ…ಕೋಟಿ ಕೋಟಿ ಲೂಟಿ..?

by admin
June 20, 2026
0

SRA (Slum Rehabilitation Authority) ಯೋಜನೆಗೆ ಬೆದರಿಕೆ ಹಾಕಿ ಕೋಟ್ಯಂತರ ರೂಪಾಯಿ ವಸೂಲಿ..? ಮುಂಬೈ Crime Branch ಭರ್ಜರಿ ಕಾರ್ಯಾಚರಣೆ ಮುಂಬೈ (Mumbai) ನಗರದಲ್ಲಿ ನಡೆಯುತ್ತಿರುವ ಮಹತ್ವದ...

TRAFFIC FINE ಕಟ್ಟಲು ಮತ್ತೆ 50% ರಿಯಾಯಿತಿ (DISCOUNT)…ಮುಖ್ಯವಾದ ದಿನಾಂಕಗಳನ್ನ ತಿಳಿಯಿರಿ

TRAFFIC FINE ಕಟ್ಟಲು ಮತ್ತೆ 50% ರಿಯಾಯಿತಿ (DISCOUNT)…ಮುಖ್ಯವಾದ ದಿನಾಂಕಗಳನ್ನ ತಿಳಿಯಿರಿ

by admin
June 20, 2026
0

ಜೂನ್ 21ರಿಂದ ಜುಲೈ 10ರವರೆಗೆ ವಾಹನ ಸವಾರರಿಗೆ ಸುವರ್ಣಾವಕಾಶ ರಾಜ್ಯದ ವಾಹನ ಸವಾರರಿಗೆ ಮತ್ತೊಮ್ಮೆ ಭಾರೀ ರಿಯಾಯಿತಿ ಘೋಷಣೆ ಮಾಡಲಾಗಿದ್ದು, ಬಾಕಿ ಉಳಿದಿರುವ ಟ್ರಾಫಿಕ್ ಇ-ಚಲನ್‌ಗಳನ್ನು ಪಾವತಿಸಲು...

ರಾಮಮಂದಿರ ಹಗರಣ ಆರೋಪ -500 ವರ್ಷ ಕಾದಿದ್ದೀರಿ ಇನ್ನೊಂದು 15 ದಿನ ಕಾಯಿರಿ:ರಾಮಭಕ್ತರ ಮೇಲೆ ಗುಂಡು ಹಾರಿಸಿದವರು ಈಗ ಧರ್ಮೋಪದೇಶ ಮಾಡುತ್ತಿದ್ದಾರೆ ಕಾಂಗ್ರೆಸ್ ಮತ್ತು ಎಸ್‌ಪಿ ವಿರುದ್ಧ ಯೋಗಿ ಆಕ್ರೋಶ

ರಾಮಮಂದಿರ ಹಗರಣ ಆರೋಪ -500 ವರ್ಷ ಕಾದಿದ್ದೀರಿ ಇನ್ನೊಂದು 15 ದಿನ ಕಾಯಿರಿ:ರಾಮಭಕ್ತರ ಮೇಲೆ ಗುಂಡು ಹಾರಿಸಿದವರು ಈಗ ಧರ್ಮೋಪದೇಶ ಮಾಡುತ್ತಿದ್ದಾರೆ ಕಾಂಗ್ರೆಸ್ ಮತ್ತು ಎಸ್‌ಪಿ ವಿರುದ್ಧ ಯೋಗಿ ಆಕ್ರೋಶ

by Shwetha
June 20, 2026
0

ಅಯೋಧ್ಯಾ ರಾಮಮಂದಿರ ದೇಣಿಗೆ ವಿಚಾರದಲ್ಲಿ ಕೇಳಿಬರುತ್ತಿರುವ ಹಗರಣದ ಆರೋಪಗಳಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರೋಧ ಪಕ್ಷಗಳ ವಿರುದ್ಧ ಅಬ್ಬರಿಸಿದ್ದಾರೆ. ಅಯೋಧ್ಯೆಯ ಅಭಿವೃದ್ಧಿಯನ್ನು ಸಹಿಸಲಾಗದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram