ಮೈಸೂರು : ತಾವು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಕೋತಿ ಮರಿ ಚಿಂಟು ನೆನಪಿಗಾಗಿ ಮಾಜಿ ಸಚಿವ ಸಾ.ರಾ. ಮಹೇಶ್ ತಮ್ಮ ಫಾರ್ಮ್ ಹೌಸ್ ನಲ್ಲಿ ಸುಮಾರು 20 ಲಕ್ಷ ವೆಚ್ಚದಲ್ಲಿ ದೇವಾಲಯ ನಿರ್ಮಿಸಿದ್ದಾರೆ. ಕುರಿ ಮರಿಯ ಮೇಲೆ ಚಿಂಟು ಕುಳಿತಿರುವ ಏಕಶಿಲಾ ಸ್ಮಾರಕವನ್ನು ನಿರ್ಮಸಲಾಗಿದ್ದು, ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಲಿದ್ದಾರೆ.
ಜನವರಿ 1ರಂದು ತೋಟದಲ್ಲಿ ವಿದ್ಯುತ್ ತಂತಿ ತಗುಲಿ ಸಾ.ರಾ ಅವರ ಪ್ರೀತಿಯ ಕೋತಿ ಚಿಂಟು ಸಾವನ್ನಪ್ಪಿತ್ತು. ಇನ್ನು ಮೇಕೆ ಎರಡು ತಿಂಗಳ ಹಿಂದೆಯೇ ಸಾವನ್ನಪ್ಪಿತ್ತು. ಇವೆರಡೂ ಸ್ನೇಹಿತರಾಗಿಯೂ ಇದ್ದವು. ಹೀಗಾಗಿ ಕುರಿ ಮೇಲೆ ಕೋತಿ ಕುಳಿತಿರುವಂತೆ ಶಿಲ್ಪ ನಿರ್ಮಾಣ ಮಾಡಲಾಗಿದೆ. ಚಿಂಟು ಜೊತೆ ಆತ್ಮೀಯತೆ ಹೊಂದಿದ್ದ ಶಾಸಕ ಸಾ.ರಾ ಮಹೇಶ್, ಚಿಂಟು ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ವಿದೇಶ ಪ್ರವಾಸ ಮೊಟಕುಗೊಳಿಸಿ ತವರಿಗೆ ಓಡಿ ಬಂದಿದ್ದರು. ನಂತರ ಅಂತ್ಯಕ್ರಿಯೆ ನೆರವೇರಿಸಿದರು. ಅಲ್ಲದೆ ಜನವರಿ 11ರಂದು ಶಾಸ್ತ್ರೋಕ್ತವಾಗಿ ಚಿಂಟುವಿನ ತಿಥಿಯನ್ನು ಕೂಡ ನೆರವೇರಿಸಿದ್ದರು.
ನಾಲ್ಕು ವರ್ಷಗಳ ವನವಾಸ ಮುಗಿಸಿ ಮರಳಿದ ಸ್ವಿಂಗ್ ಸುಲ್ತಾನ್ ಭುವನೇಶ್ವರ್ ಕುಮಾರ್ :ಭುವನೇಶ್ವರ್ ಕುಮಾರ್ ಪುನರಾಗಮನಕ್ಕೆ ಅಜಿತ್ ಅಗರ್ಕರ್ ಅಡ್ಡಗಾಲು ಹಾಕಿದ್ದರಾ? ಆಯ್ಕೆ ಸಮಿತಿಯ ಒಳಗಿನ ಗುಟ್ಟು ರಟ್ಟು?
ಮುಂಬೈ: ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಒಂದು ಕಡೆ ಸಂತಸದ ಸುದ್ದಿ ಸಿಕ್ಕಿದ್ದರೆ, ಮತ್ತೊಂದು ಕಡೆ ಆಯ್ಕೆ ಸಮಿತಿಯ ಒಳಗಿನ ಅಸಲಿ ಆಟ ಈಗ ಬಯಲಾಗಿದೆ. ಮುಂಬರುವ ನ್ಯೂಜಿಲೆಂಡ್...








