Congress | ಹಿರಿಯರನ್ನು ಮರೆಯುವುದೇ ಬಿಜೆಪಿ ಸಂಸ್ಕೃತಿ
ಬೆಂಗಳೂರು : ಯಡಿಯೂರಪ್ಪರಂತೆ ಅವರ ಸರ್ಕಾರದ ಯೋಜನೆಗಳನ್ನು ಮೂಲೆಗುಂಪು ಮಾಡುತ್ತಿರುವುದು ಯಾರ‘ಸಂತೋಷ‘ಕ್ಕಾಗಿ ಬಿಜೆಪಿ? ಇದೂ ಕೂಡ ಬಿಎಸ್ ವೈ ಮುಕ್ತ ಬಿಜೆಪಿ ಅಭಿಯಾನದ ಮುಂದುವರೆದ ಭಾಗವೇ?ಬಡವರಿಗಾಗಿ ಇದ್ದ ಅಟಲ್ ಸಾರಿಗೆಯನ್ನ ನಿರ್ಲಕ್ಷಿಸುವಷ್ಟು ಬಿ.ಎಸ್.ಯಡಿಯೂರಪ್ಪ & ವಾಜಪೇಯಿಯವರ ಮೇಲೆ ಅಸಹನೆಯೇ ಬಸವರಾಜ ಬೊಮ್ಮಾಯಿ ಅವರೇ ಹಿರಿಯರನ್ನು ಮರೆಯುವುದೇ ಬಿಜೆಪಿ ಸಂಸ್ಕೃತಿ ಎಂದು ರಾಜ್ಯ ಕಾಂಗ್ರೆಸ್ ಘಟಕ ಕುಟುಕಿದೆ.
ಬಿಜೆಪಿ ಟ್ವಿಟ್ಟರ್ ನಲ್ಲಿ ಸರಣಿ ಟ್ವೀಟ್ ಗಳನ್ನು ಮಾಡಿರುವ ಕಾಂಗ್ರೆಸ್, ಸಚಿವರು ಕೆಲಸವನ್ನೇ ಮಾಡ್ತಿಲ್ಲ. ವ್ಯಾಪಾರಸೌಧದ 3ನೇ ಮಹಡಿಗೆ ಸೀಮಿತರಾಗಿದ್ದಾರೆ. ತಮ್ಮ ಕ್ಷೇತ್ರ ಬಿಟ್ಟು ಮಂತ್ರಿಗಿರಿಯ ಜವಾಬ್ದಾರಿ ನಿರ್ವಹಿಸುತ್ತಿಲ್ಲ. ಸಚಿವರು ರಾಜೀನಾಮೆ ಕೊಡಬೇಕು. ಇದು ಬಿಜೆಪಿ ಶಾಸಕ ರೇಣುಕಾಚಾರ್ಯರ ಮಾತುಗಳು. ಅವರ ಮಾತನ್ನು ಒಪ್ಪುವಿರಾ ಅಥವಾ ಅವರ ವಿರುದ್ಧ ಕ್ರಮ ಕೈಗೊಳ್ಳುವಿರಾ ಬಿಜೆಪಿ ನಾಯಕರೇ ?
ಸಿರಿವಂತರಿಗೆ ಕಾರ್ಪೊರೇಟ್ ಟ್ಯಾಕ್ಸ್ – 30% ನಿಂದ 22% ಇಳಿಕೆ
ಜನಸಾಮಾನ್ಯರಿಗೆ – ಆಹಾರ ಧಾನ್ಯಗಳ ಟ್ಯಾಕ್ಸ್ 0% ನಿಂದ 5% ಹೇರಿಕೆ
ಸಿರಿವಂತರ 6.17 ಟ್ರಿಲಿಯನ್ ಮೊತ್ತ
NPA ಮನ್ನಾರೈತರ ಪಂಪ್‌ಸೆಟ್ ಮೇಲೆ 12%ರಿಂದ 18% ತೆರಿಗೆ ಗುನ್ನಾ!
ಬಿಜೆಪಿ ಆಡಳಿತದಲ್ಲಿ ಮೋದಿ ಗೆಳೆಯರದ್ದೇ ಪೂರಾ ದುನಿಯಾ, ಜನಸಾಮಾನ್ಯರಿಗೆ #ದುಬಾರಿದುನಿಯಾ!
— Karnataka Congress (@INCKarnataka) July 19, 2022
ಬಿಜೆಪಿಗೆ ಉತ್ಸವ ಮಾಡುವ ಉತ್ಸಾಹವಿಲ್ಲ, ಮಾಡುವುದಾದರೆ ‘ಕಲಹೊತ್ಸವ‘ ಮಾಡಬಹುದು, ಆ ಮಟ್ಟಿಗಿದೆ #BJPvsBJP ಕಲಹ!ಮಂತ್ರಿಗಳು ಕೆಲಸ ಮಾಡ್ತಿಲ್ಲ ಎಂದು ಸ್ವತಃ ಬಿಜೆಪಿಯ ರೇಣುಕಾಚಾರ್ಯ ಅವರೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ.ಮಂತ್ರಿಗಳ ಮೇಲೆ #ಬೊಂಬೆಬೊಮ್ಮಾಯಿ ಅವರಿಗೆ ಹಿಡಿತವಿಲ್ಲದಿರುವುದೇ ಈ ನಿಷ್ಕ್ರೀಯತೆಗೆ ಕಾರಣವಲ್ಲವೇ ಬಿಜೆಪಿ ಎಂದು ಪ್ರಶ್ನೆಗಳನ್ನು ಮಾಡಿದೆ.
ಸಿರಿವಂತರಿಗೆ ಕಾರ್ಪೊರೇಟ್ ಟ್ಯಾಕ್ಸ್ – 30% ನಿಂದ 22% ಇಳಿಕೆ ಜನಸಾಮಾನ್ಯರಿಗೆ – ಆಹಾರ ಧಾನ್ಯಗಳ ಟ್ಯಾಕ್ಸ್ 0% ನಿಂದ 5% ಹೇರಿಕೆ ಸಿರಿವಂತರ 6.17 ಟ್ರಿಲಿಯನ್ ಮೊತ್ತ NPA ಮನ್ನಾ, ರೈತರ ಪಂಪ್‌ಸೆಟ್ ಮೇಲೆ 12%ರಿಂದ 18% ತೆರಿಗೆ ಗುನ್ನಾ! ಬಿಜೆಪಿ ಆಡಳಿತದಲ್ಲಿ ಮೋದಿ ಗೆಳೆಯರದ್ದೇ ಪೂರಾ ದುನಿಯಾ, ಜನಸಾಮಾನ್ಯರಿಗೆ
ಬಿಜೆಪಿಗೆ ಉತ್ಸವ ಮಾಡುವ ಉತ್ಸಾಹವಿಲ್ಲ, ಮಾಡುವುದಾದರೆ 'ಕಲಹೊತ್ಸವ' ಮಾಡಬಹುದು, ಆ ಮಟ್ಟಿಗಿದೆ #BJPvsBJP ಕಲಹ!
ಮಂತ್ರಿಗಳು ಕೆಲಸ ಮಾಡ್ತಿಲ್ಲ ಎಂದು ಸ್ವತಃ ಬಿಜೆಪಿಯ ರೇಣುಕಾಚಾರ್ಯ ಅವರೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ.
ಮಂತ್ರಿಗಳ ಮೇಲೆ #ಬೊಂಬೆಬೊಮ್ಮಾಯಿ ಅವರಿಗೆ ಹಿಡಿತವಿಲ್ಲದಿರುವುದೇ ಈ ನಿಷ್ಕ್ರೀಯತೆಗೆ ಕಾರಣವಲ್ಲವೇ @BJP4Karnataka?
— Karnataka Congress (@INCKarnataka) July 19, 2022
ಪ್ರಧಾನಿ ಮೋದಿಯವರು ತಮ್ಮ ‘ನಾ ಖಾನೆದುಂಗಾ‘ ಮಾತನ್ನು ನಿಜ ಮಾಡಿದ್ದಾರೆ. ಅಕ್ಕಿ, ಬೇಳೆ, ಗ್ಯಾಸ್, ಹಾಲು, ಮೊಸರುಗಳ ಬೆಲೆ ಏರಿಸುವ ಮೂಲಕ ಅವರ ‘ನಾ ಖಾನೆದುಂಗಾ‘ ಮಾತನ್ನು ಸಾಕಾರಗೊಳಿಸಿದ್ದಾರೆ! ಹಾಗೆಯೇ 40% ಕಮಿಷನ್, PSI ಹಗರಣಗಳಂತಹ ಭ್ರಷ್ಟಾಚಾರಗಳಿಗೆ ಮೌನದ ಸಮ್ಮತಿ ಮೂಲಕ ‘ನಾ ಖಾನೆದುಂಗಾ‘ ಮಾತನ್ನ ಸುಳ್ಳಾಗಿಸಿದ್ದಾರೆ ಎಂದು ಕಿಡಿಕಾರಿದೆ.








