Bangalore | ಆನ್ ಲೈನ್ ನಲ್ಲಿ ಜನರನ್ನ ವಂಚಿಸುತ್ತಿದ್ದವರ ಬಂಧನ
ಬೆಂಗಳೂರು : ಗೂಗಲ್ ವೆಬ್ ಸೈಟ್ ಅನ್ನೇ ಬಂಡವಾಳ ಮಾಡಿಕೊಂಡು ಜನರನ್ನು ವಂಚಿಸುತ್ತಿದ್ದ ನಾಲ್ವರನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಪರನ್ ಸಿಂಗ್ ಚೌಹಾಣ್(25), ನರೇಂದ್ರ(32), ಧರ್ಮೇಂದರ್(21), ಧರ್ಮವೀರ್ (24) ಬಂಧಿತ ಆರೋಪಿಗಳಾಗಿದ್ದಾರೆ.
ಈ ಖದೀಮರು ಪ್ರತಿಷ್ಠಿತ ಕೊರಿಯರ್ ಕಂಪನಿಗಳ ಹೆಸರಲ್ಲಿ ಜಾಹಿರಾತು ನೀಡುತ್ತಿದ್ದರು.
ಜಾಹೀರಾತಿನಲ್ಲಿ ತಮ್ಮ ಫೋನ್ ನಂಬರ್ ಹಾಕಿಕೊಳ್ಳುತ್ತಿದ್ದರು. ವಾಹನ ಟ್ರಾನ್ಸ್ ಪೋರ್ಟ್ ಮಾಡಲು ಹಣ ಪಡೆಯುತ್ತಿದ್ದರು.

ವಾಹನ ತೆಗೆದುಕೊಂಡು ತಮ್ಮ ಅಸಲಿ ಆಟ ಶುರು ಮಾಡ್ತಿದ್ರು.
ತಿಂಗಳು ಕಳೆದ್ರೂ ವಾಹನ ಡಿಲವರಿ ಕೊಡದೇ ಕಳ್ಳಾಟವಾಡುತ್ತಿದ್ದರು.
ಇದನ್ನ ಪ್ರಶ್ನೆ ಮಾಡಿದ್ದಕ್ಕೆ ಹೆಚ್ಚಿನ ಹಣ ನೀಡುವಂತೆ ಪೀಡಿಸುತ್ತಿದ್ದರು.
ಇದರಿಂದ ಬೇಸತ್ತ ವಂಚನೆಗೊಳಗಾದ ವ್ಯಕ್ತಿ, ಈಶಾನ್ಯ ವಿಭಾಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರು ಆಧರಿಸಿ ಇದೀಗ ಪೊಲೀಸರು ನಾಲ್ವರು ಆರೋಪಿಗಳ ಬಂಧನ ಮಾಡಿದ್ದಾರೆ.
ಇದನ್ನೂ ಓದಿ : Nupur Sharma – ಸುಪ್ರೀಂ ಕೋರ್ಟ್ ನಿಂದ ಬಿಗ್ ರಿಲೀಫ್ ಪಡೆದ ನೂಪುರ್ ಶರ್ಮಾ…








