ಸಣ್ಣ ಬಟ್ಟಲಿನಲ್ಲಿ, ¼ ಕಪ್ ಬೆಚ್ಚಗಿನ ನೀರನ್ನು ತೆಗೆದುಕೊಳ್ಳಿ. 3 ಟೇಬಲ್ಸ್ಪೂನ್ ಕೋಕೋ ಪೌಡರ್ ಸೇರಿಸಿ.
ನಂತರ ¼ ಕಪ್ ಸಕ್ಕರೆ ಸೇರಿಸಿ. ನೀವು ರುಚಿಗೆ ತಕ್ಕಂತೆ ಸಕ್ಕರೆಯನ್ನು ಕಡಿಮೆ ಅಥವಾ ಹೆಚ್ಚು ಸೇರಿಸಬಹುದು.
ಚೆನ್ನಾಗಿ ಮಿಶ್ರಣ ಮಾಡಿ ಇದರಿಂದ ಸಕ್ಕರೆ ಮತ್ತು ಕೋಕೋ ಪೌಡರ್ ಬೆಚ್ಚಗಿನ ನೀರಿನಲ್ಲಿ ಕರಗುತ್ತದೆ.
ಈಗ ಈ ಕೋಕೋ ದ್ರಾವಣವನ್ನು ಬ್ಲೆಂಡರ್ ಅಥವಾ ಮಿಕ್ಸರ್ನಲ್ಲಿ ಸುರಿಯಿರಿ.
ಕೆಲವು ಐಸ್ ಕ್ಯೂಬ್ ಗಳನ್ನ ಸೇರಿಸಿ.
2.5 ಕಪ್ ಕೋಲ್ಡ್ ಹಾಲು ಸೇರಿಸಿ.
ನಯವಾಗಿ ಬ್ಲೆಂಡ್ ಮಾಡಿ.
ಗ್ಲಾಸ್ ಗಳ ಬದಿಯಲ್ಲಿ ಸ್ವಲ್ಪ ಚಾಕೊಲೇಟ್ ಸಿರಪ್ ಅನ್ನು ಸ್ಪ್ರೆಡ್ ಮಾಡಿ ಇದು ಆಪ್ಷನಲ್.
ಗ್ಲಾಸ್‌ಗಳಲ್ಲಿ ಚಾಕೊಲೇಟ್ ಮಿಲ್ಕ್‌ಶೇಕ್ ಸುರಿಯಿರಿ.
ನಂತರ ಒಂದು ಚಮಚ ಚಾಕೊಲೇಟ್ ಐಸ್ ಕ್ರೀಮ್ ಸೇರಿಸಿ ( ಆಪ್ಷನಲ್ ).. ಈಗ ಚಾಕೊಲೇಟ್ ಮಿಲ್ಕ್ ಶೇಕ್ ಸವಿಯಲು ಸಿದ್ಧ








