Heavy Rain | ವಿಜಯಪುರದಲ್ಲಿ ಭಾರಿ ಮಳೆ – ಪ್ರವಾಹದ ಭೀತಿ
ವಿಜಯಪುರ : ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಿನ್ನೆ ರಾತ್ರಿ ಭಾರಿ ಮಳೆಯಾಗಿದೆ.
ಇದರಿಂದ ಡೋಣಿ ನದಿ ತಟದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ.
ಜೊತೆಗೆ ಮತ್ತೆ ತಾಳಿಕೋಟೆ ತಾಲೂಕಿನ ಭಾಗದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಗಳು ಕೂಡ ಇದೆ.
ಈ ಹಿಂದೆ ಜಲಾವೃತವಾಗಿದ್ದ ತಾಳಿಕೋಟೆ ಬಳಿಯ ಡೋಣಿ ನದಿಯ ಹಳೆಯ ಸೇತುವೆ ಇದೀಗ ಸಂಚಾರಕ್ಕೆ ಮುಕ್ತವಾಗಿದೆ.
ಮಳೆಯಿಂದಾಗಿ ಹೊಸ ಸೇತುವೆ ಬಿರುಕು ಬಿಟ್ಟು ಶಿಥಲವಾಗಿದ್ದು, ಸಂಚಾರ ಸ್ಥಗಿತವಾಗಿದೆ.

ಹಳೆಯ ಸೇತುವೆ ನಿನ್ನೆ ಜಲಾವೃತವಾದ ಕಾರಣ ವಿಜಯಪುರ ತಾಳಿಕೋಟೆ ಸಂಪರ್ಕಕ್ಕೆ ಸಮಸ್ಯೆ ಎದುರಾಗಿತ್ತು, ಪ್ರಯಾಣಿಕರು ಪರದಾಡುವಂತಾಗಿತ್ತು.
ಮನಗೂಳಿ ದೇವಾಪೂರ ರಾಜ್ಯ ಹೆದ್ದಾರಿ 61 ಸಂಚಾರ ಬಂದ್ ಆಗಿತ್ತು. 50 ಕಿಲೋ ಮೀಟರ್ ಸುತ್ತು ಹಾಕಿ ಸಂಚರಿಸೋ ಅನಿವಾರ್ಯತೆ ಎದುರಾಗಿತ್ತು.
ಡೋಣಿ ನದಿಯಲ್ಲಿ ಪ್ರಸ್ಥುತ ನೀರಿನ ಹರಿವಿನಲ್ಲಿ ಇಳಿಮುಖವಾದ ಕಾರಣ ಹಳೆಯ ಸೇತುವೆ ಸಂಚಾರಕ್ಕೆ ಮುಕ್ತವಾಗಿದ್ದು, ಪ್ರಯಾಣಿಕರು ನಿರಾಳವಾಗಿದ್ದಾರೆ.








