Asia Cup 2022 : ಕೊಹ್ಲಿಗೆ ಜಿಂಬಾಂಬೆ ಟಿಕೆಟ್ ನೀಡಬಹುದಿತ್ತು
ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕಳೆದ ಕೆಲವು ದಿನಗಳಿಂದ ಬ್ಯಾಡ್ ಫಾರ್ಮ್ ನಲ್ಲಿರುವ ವಿಚಾರ ಗೊತ್ತಿರುವುದೇ.
ಒಂದು ಕಾಲದಲ್ಲಿ ಸೆಂಚೂರಿಗಳ ಮೇಲೆ ಸೆಂಚೂರಿಗಳನ್ನ ಬಾರಿಸುತ್ತಾ ಅಬ್ಬರಿಸಿದ ವಿರಾಟ್ ಕೊಹ್ಲಿ ಇದೀಗ ಹಾಫ್ ಸೆಂಚೂರಿ ಕೂಡ ಮುಟ್ಟುತ್ತಿಲ್ಲ.
ತನ್ನ ಪ್ರದರ್ಶನದಿಂದ ಸಾಕಷ್ಟು ಟೀಕೆಗೆ ಒಳಗಾಗುತ್ತಿರುವ ವಿರಾಟ್ ಕೊಹ್ಲಿ ಅವರನ್ನ ವಿಶ್ರಾಂತಿ ಹೆಸರಲ್ಲಿ ತಂಡದಿಂದ ದೂರ ಇಡುವ ಕೆಲಸ ನಡೆಯುತ್ತಿದೆ.
ಇತ್ತೀಚೆಗೆ ಇಂಗ್ಲೆಂಡ್ ಪ್ರವಾಸದಲ್ಲಿ ಮಿಂಚದ ವಿರಾಟ್ ಕೊಹ್ಲಿ ಅವರನ್ನ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ, ಟಿ 20 ಸರಣಿಯಿಂದ ದೂರ ಇಡಲಾಗಿದೆ.
ಇನ್ನು ಕೊಹ್ಲಿ ಅವರನ್ನ ಜಿಂಬಾಬೆ ಟೂರಿಗೆ ಸೆಲೆಕ್ಟ್ ಮಾಡುತ್ತಾರೆ ಅಂತಾ ಎಲ್ಲರೂ ಭಾವಿಸಿದ್ದರು.
ಆದ್ರೆ ಶನಿವಾರ ಪ್ರಕಟಿಸಿದ ತಂಡದಲ್ಲಿ ವಿರಾಟ್ ಕೊಹ್ಲಿಯ ಹೆಸರೇ ಇಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ತಿಳಿಸಿದೆ.
ಈ ನಡುವೆ ವಿರಾಟ್ ಕೊಹ್ಲಿ ಬಗ್ಗೆ ಪಾಕಿಸ್ತಾನ ತಂಡದ ಮಾಜಿ ಆಟಗಾರ ದಾನೀಶ್ ಕನೇರಿಯಾ ಕೆಲವು ಆಸಕ್ತಿದಾಯಕ ಕಮೆಂಟ್ ಗಳನ್ನು ಮಾಡಿದ್ದಾರೆ.
ಏಷ್ಯಾ ಕಪ್ 2022ಗೆ ವಿರಾಟ್ ಕೊಹ್ಲಿ ಅವರನ್ನ ಆಯ್ಕೆ ಮಾಡದಿರಬಹುದು ಎಂದು ಭವಿಷ್ಯ ನುಡಿದ್ದಾರೆ.
ಅಲ್ಲದೇ ಜಿಂಬಾಬೆ ವಿರುದ್ಧದ ಏಕದಿನ ಸರಣಿಗೆ ಯುವ ಆಟಗಾರ ಇಶನ್ ಕಿಶನ್ ಬದಲು ವಿರಾಟ್ ಕೊಹ್ಲಿಗೆ ಅವಕಾಶ ನೀಡಬೇಕಾಗಿತ್ತು ಎಂದು ಅಭಿಪ್ರಾಯಟ್ಟಿದ್ದಾರೆ.

ಜಿಂಬಾಬೆ ಸಿರೀಸ್ ಗೆ ಇಶಾನ್ ಕಿಶನ್ ಅವರನ್ನ ಯಾಕೆ ಆಯ್ಕೆ ಮಾಡಲಾಗಿದೆ ಎಂದು ನನಗೆ ಅರ್ಥವೇ ಆಗುತ್ತಿಲ್ಲ. ತಂಡದಲ್ಲಿ ಮತ್ತೊಬ್ಬ ವಿಕೆಟ್ ಕೀಪರ್ ಸಂಜು ಸ್ಯಾಮ್ ಸನ್ ಅದ್ಭುತವಾಗಿ ಮಿಂಚುತ್ತಿದ್ದಾರೆ.
ಹೀಗಿದ್ದಾಗ ಕಿಶನ್ ಅವರನ್ನ ಆಯ್ಕೆ ಮಾಡುವ ಅವಶ್ಯಕತೆ ಏನಿತ್ತು..? ಕಿಶನ್ ಬದಲಿಗೆ ಕೊಹ್ಲಿ ತಂಡದಲ್ಲಿರಬೇಕಾಗಿತ್ತು.
ವಿರಾಟ್ ಕೊಹ್ಲಿ ಈ ಸೀಸನ್ ಭಾಗವಾಗಿ ಇದ್ದಿದ್ದರೇ ಚೆನ್ನಾಗಿ ಇರುತ್ತಿತ್ತು. ಕೊಹ್ಲಿ ಅವರನ್ನು ಕೇವಲ ಪ್ರಧಾನ ಟೂರ್ನಿಗಳಲ್ಲಿ ಆಡಿಸಬೇಕು ಎಂದು ಬಿಸಿಸಿಐ ಭಾವಿಸಿದೆ. ಕೊಹ್ಲಿ ಅಲ್ಲಿ ವಿಫಲವಾದ್ರೆ ಮತ್ತೆ ಆತನ ಫಾರ್ಮ್ ಬಗ್ಗೆ ಚರ್ಚೆ ನಡೆಯುತ್ತದೆ.
ಈ ವಿಷಯದಲ್ಲಿ ಬಿಸಿಸಿಐ ಕೊಹ್ಲಿಗೆ ಅನ್ಯಾಯ ಮಾಡುತ್ತಿದೆ ಎಂದು ನಾನು ಭಾವಿಸುತ್ತೇನೆ.
ಕೊಹ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಸಂಪೂರ್ಣವಾಗಿ ವಿಶ್ರಾಂತಿ ಪಡೆದಿದ್ದಾಗ ಖಂಡಿತವಾಗಿ ಜಿಂಬಾಬೆ ಸರಣಿಗೆ ಆಯ್ಕೆ ಮಾಡಬೇಕಾಗಿತ್ತು.
ಆತ ಜಿಂಬಾಬೆ ಪ್ರವಾಸದಲ್ಲಿ ಮತ್ತೆ ಫಾರ್ಮ್ ಕಂಡುಕೊಳ್ಳುವ ಅವಕಾಶಗಳಿದ್ದವು ಎಂದು ಕನೇರಿಯಾ ಹೇಳಿದ್ದಾರೆ.








