Viral Video | ಸಮುದ್ರದಲ್ಲಿ ಬಿಳಿ ಚುಕ್ಕೆಗಳಂತೆ ಜೆಲ್ಲಿಫಿಶ್ ಸಮೂಹ viral-video-massive-jellyfish-swarm
ಜೆಲ್ಲಿ ಫಿಶ್ ಗಳ ಬಗ್ಗೆ ಎಲ್ಲರೂ ಕೇಳಿಯೇ ಇರುತ್ತೀರಾ. ವಾಸ್ತವಕ್ಕೆ ಅವರು ಮಹಾ ಸಮುದ್ರದ ಆಳದಲ್ಲಿ ಸಂಚರಿಸುವ ಒಂದು ರೀತಿಯ ಜೀವಿಗಳು.
ಈ ಅಕಶೇರುಕಗಳಿಗೆ ಮೆದುಳು ಇರೋದಿಲ್ಲ. ಅವುಗಳ ಶರೀರದಲ್ಲಿ ಸರಾಸರಿ 95% ನೀರು ಇರುತ್ತದೆ.
ನಾವು ಮಹಾ ಎಂದರೇ ಒಂದೆರಡು ಜೆಲ್ಲಿಫಿಶ್ ಗಳು ಅಪರೂಪಕ್ಕೆ ಕಾಣಿಸಿಕೊಳ್ಳುತ್ತವೆ.
ಆದ್ರೆ ಇಸ್ರೇಲ್ನಲ್ಲಿರುವ ನೇಷನ್ಸ್ ಪಾರ್ಕ್ಸ್ ಮತ್ತು ನೇಚರ್ ಅಥಾರಿಟಿ ಅದ್ಭುತ ವೀಡಿಯೊವನ್ನು ಪೋಸ್ಟ್ ಮಾಡಿದೆ.
ವೀಡಿಯೊದಲ್ಲಿ, ದೋಣಿಯ ಸುತ್ತಲೂ ಕೆಲವು ಲಕ್ಷ ಜೆಲ್ಲಿ ಮೀನುಗಳಿವೆ.
ಅದು ನೋಡುವುದಕ್ಕೆ ಸಮುದ್ರದಲ್ಲಿ ಬಿಳಿ ಚುಕ್ಕೆಗಳಂತೆ ಸುಂದರವಾಗಿ ಕಾಣಿಸುತ್ತಿತ್ತು.
ಆದರೆ ಜೆಲ್ಲಿ ಮೀನುಗಳ ಸಂಖ್ಯೆ ಹೆಚ್ಚಾಗಲು ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯೇ ಕಾರಣ ಎನ್ನುತ್ತಾರೆ ವಿಜ್ಞಾನಿಗಳು.
ಇವು ಸಾಮಾನ್ಯವಾಗಿ ಹಿಂದೂಮಹಾಸಮುದ್ರದಲ್ಲಿ ಹುಟ್ಟುತ್ತವಂತೆ. ಆದರೆ ಇದು ಸೂಯೆಜ್ ಕಾಲುವೆಯ ಮೂಲಕ ಪೂರ್ವ ಮೆಡಿಟರೇನಿಯನ್ ತಲುಪುತ್ತದೆ ಎಂದು ನಂಬಲಾಗಿದೆ. viral-video-massive-jellyfish-swarm







