BJP | ಸಿಎಂ ಬದಲಾವಣೆ ಬಗ್ಗೆ ಸುಳಿವು ಕೊಟ್ರಾ ಸುರೇಶ್ ಗೌಡ
ತುಮಕೂರು : ಈಗಿರುವ ಮುಖ್ಯಮಂತ್ರಿ ಒಳ್ಳೆ ಕೆಲಸ ಮಾಡುತಿದ್ದಾರೆ. ಅವರ ಒಂದು ವರ್ಷದ ಅವಧಿಯಲ್ಲಿ ಕೆರೆ ಕಟ್ಟೆಗಳು ತುಂಬಿವೆ. ಆದರೆ ಪಾರ್ಟಿ ಏನ್ ನಿರ್ಧಾರ ತೆಗೆದುಕೊಳ್ಳುತ್ತದೋ ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಹೇಳಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತಂತೆ ಚರ್ಚೆಗಳು ನಡೆಯುತ್ತಿವೆ. ಇದರ ಬಗ್ಗೆ ತುಮಕೂರಿನ ಹಾಲಗೊಂಡನಹಳ್ಳಿಯಲ್ಲಿ ಮಾತನಾಡಿದ ಸುರೇಶ್ ಗೌಡ, ಈಗಿರುವ ಮುಖ್ಯಮಂತ್ರಿ ಒಳ್ಳೆ ಕೆಲಸ ಮಾಡುತಿದ್ದಾರೆ. ಅವರ ಒಂದು ವರ್ಷದ ಅವಧಿಯಲ್ಲಿ ಕೆರೆ ಕಟ್ಟೆಗಳು ತುಂಬಿವೆ.
ಆದರೆ ಪಾರ್ಟಿ ಏನ್ ನಿರ್ಧಾರ ತೆಗೆದುಕೊಳ್ಳುತ್ತದೋ ಅದಕ್ಕೆ ನಾವು ಬದ್ದರಾಗಿದ್ದೇವೆ. ಶೋಭಾ ಕರಂದ್ಲಾಜೆ ಮುಖ್ಯಮಂತ್ರಿ ಆಗ್ತಾರೆ ಅನ್ನೋದು ನನಗೆ ಗೊತ್ತಿಲ್ಲ.
ನಾನು ಅವರನ್ನು ಭೇಟಿಯಾಗಿದ್ದೆ. ಅವರು ಅದರ ಬಗ್ಗೆ ಮಾತನಾಡಿಲ್ಲ..ಅದು ಮಾಧ್ಯಮದ ಸೃಷ್ಟಿ. ಆದರೆ ಅವರು ಮುಖ್ಯಮಂತ್ರಿ ಆದರೆ ಸಂತೋಷ.

ಬಿಜೆಪಿ ವಿಧಾನಸಭಾ ಚುನಾವಣೆ 6-8 ತಿಂಗಳು ಇರಬೇಕಾದರೂ ಮುಖ್ಯಮಂತ್ರಿ ಬದಲಾವಣೆ ಮಾಡಿದ ಉದಾಹರಣೆ ಇದೆ.
ಆಗಸ್ಟ್ 15ರ ಒಳಗೆ ಎಲ್ಲವೂ ಆಗಬಹುದು ಎನ್ನುವ ಅಭಿಪ್ರಾಯ ನನ್ನದು, ಬಿಜೆಪಿ 2023 ರಲ್ಲಿ ಮತ್ತೆ ಅಧಿಕಾರ ಹಿಡಿಯುವ ಉದ್ದೇಶದಿಂದ ಪಕ್ಷದಲ್ಲಿ ಕೆಲ ಬದಲಾವಣೆ ಆಗಬಹುದು ಎಂದು ಹೇಳಿದ್ದಾರೆ.
ಗೌರಿಶಂಕರ ಲೆಕ್ಕದಲ್ಲಿ ಅಭಿವೃದ್ಧಿ ಎಂದರೆ ಯುವಕರಿಗೆ ಎಣ್ಣೆ ಕುಡಿಸೋದು ಮಾಂಸ ತಿನ್ನಿಸೋದು. 18-20 ವರ್ಷದ ಯುವಕರನ್ನು ದುರ್ಬಳಕೆ ಮಾಡಿಕೊಳ್ಳುತಿದ್ದಾರೆ.
ಗೋವಾ ಮತ್ತು ಥೈಲ್ಯಾಂಡ್ ಗೆ ಕರೆದುಕೊಂಡು ಹೋಗಿ ಹಾಳು ಮಾಡುತಿದ್ದಾರೆ. ಯುವಕರು ಥೈಲ್ಯಾಂಡ್ ಹಾಗೂ ಗೋವಾದಲ್ಲಿ ನೋಡೋದು ಏನಿದೆ ಎಂದು ಜನರಿಗೆ ಗೊತ್ತು.
ಯುವಕರನ್ನು ಹಾಳು ಮಾಡುತ್ತಿರುವ ಗೌರಿಶಂಕರಗೆ ಜನ ಪಾಠ ಕಲಿಸ್ತಾರೆ ಎಂದು ಶಾಸಕ ಗೌರಿಶಂಕರ ವಿರುದ್ದ ವಾಗ್ದಾಳಿ ನಡೆಸಿದರು.








