Kalaburagi | ಭೀಮಾ ನದಿಗೆ ನೀರು ಬಿಡುಗಡೆ – ದೇಗುಲ ಜಲಾವೃತ
ಕಲಬುರಗಿ : ಮಹಾರಾಷ್ಟ್ರದಲ್ಲಿ ಮಳೆರಾಯನ ಅಬ್ಬರ ಮುಂದುವರೆದಿದೆ.
ಇದರಿಂದಾಗಿ ಮಹಾರಾಷ್ಟ್ರದ ಉಜನಿ ಡ್ಯಾಮ್ ಗೆ ಅಪಾರ ಪ್ರಮಾಣದ ನೀರು ಬಂದು ಸೇರುತ್ತಿದ್ದು, ಡ್ಯಾಮ್ ನಿಂದ 1 ಲಕ್ಷ ಕ್ಯೂಸೆಕ್ಸ್ ನೀರು ಹೊರ ಹರಿಸಲಾಗಿದೆ.

ಹೀಗಾಗಿ ಕಲಬುರಗಿಯ ಸೊನ್ನ ಬ್ಯಾರೇಜ್ ನಿಂದ ಭೀಮಾ ನದಿಗೆ ನೀರು ಬಿಡುಗಡೆ ಮಾಡಲಾಗಿದೆ.
ಇದರಿಂದ ಯಲ್ಲಮ್ಮ ದೇಗುಲ ಜಲಾವೃತಗೊಂಡಿದೆ.
ನೀರು ಹೆಚ್ಚಾದರೇ ಮಣ್ಣೂರಿನ ಯಲ್ಲಮ್ಮ ದೇಗುಲ ಮುಳುಗುವ ಸಾಧ್ಯತೆ ಇದೆ.
ಇತ್ತ ಜನರು ನದಿ ದಡಕ್ಕೆ ಹೋಗದಂತೆ ಜಿಲ್ಲಾಡಳಿತ ಜನರಿಗೆ ಸೂಚನೆ ನೀಡಿದೆ.








