ಬಂಗಾಳದಲ್ಲಿ ನಿರ್ಮಾಣವಾಗುತ್ತಿದೆ ವಿಶ್ವದ ಅತಿದೊಡ್ಡ ದೇವಾಲಯ – ಸಾವಿರ ಕೋಟಿಯ ಕೃಷ್ಣ ದೇವಸ್ಥಾನ…
ವಿಶ್ವದ ಅತಿದೊಡ್ಡ ದೇವಸ್ಥಾನದ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿರುವ ಮಾಯಾಪುರದಲ್ಲಿರುವ ಇಸ್ಕಾನ್ ಪ್ರಧಾನ ಕಛೇರಿಯಲ್ಲಿ 2009 ರಿಂದ ದೇವಾಲಯದ ಕೆಲಸಗಳು ನಡೆಯುತ್ತಿದೆ. ಸುಮಾರು 700 ಎಕೆರೆ ವಿಸ್ತೀರ್ಣ ದೇವಸ್ಥಾನದ ನಿಮಾಣ ಜರುಗುತ್ತಿದೆ. ಇಲ್ಲಿಯವರೆಗೆ ಅತಿದೊಡ್ಡ ದೇವಾಲಯ ಎಂಬ ಬಿರುದು ಕಾಂಬೋಡಿಯಾದ ಅಂಕೋರ್ ವಾಟ್ ಬಳಿಯ ದೇವಸ್ಥಾನದಲ್ಲಿ ಇತ್ತು.
ಮಾಯಾಪುರದಲ್ಲಿ ನಿರ್ಮಿಸಲಾಗುತ್ತಿರುವ ದೇವಾಲಯದ 2023ಕ್ಕೆ ಉದ್ಘಾಟನೆಯಾಗಬೇಕಿತ್ತು. ಆದರೆ ಕರೋನಾ ಕಾರಣಾಂತರದಿಂದಾಗಿ ನಿರ್ಮಾಣ ವಿಳಂಬವಾಗಿದೆ. ಹಾಗಾಗಿ ದೇವಸ್ಥಾನದ ಉದ್ಘಾಟನೆ 2024ಕ್ಕೆ ಮುಂದೂಡಿಕೆಯಾಗಿದೆ. ದೇವಸ್ಥಾನದ ಅಡಿಪಾಯವೇ 100 ಅಡಿ ಆಳದಲ್ಲಿದೆ. ಇದರಿಂದ ದೇವಸ್ಥಾನದ ಗಾತ್ರ ಎಷ್ಟು ದೊಡ್ಡದು ಎಂಬುದನ್ನ ನೀವು ಅಂದಾಜಿಸಬಹುದು.
ದೇವಸ್ಥಾನದ ನಿರ್ಮಾಣ ಕಾರ್ಯಗಳು ಪೂರ್ಣಗೊಂಡ ನಂತರ ಹತ್ತು ಸಾವಿರ ಜನರು ಎಕಕಾಲಕ್ಕೆ ಶ್ರೀಕೃಷ್ಣನ ದರ್ಶನ ಪಡೆಯಬಹುದು, ಈ ಬಾರಿಯ ಜನ್ಮಾಷ್ಟಮಿಯನ್ನ ಆಗಸ್ಟ್ 19 ರಂದು ಇಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಇಸ್ಕಾನ್ ಸಂಸ್ಥಾಪಕ ಪ್ರಭುಪಾದರು 1971 ರಲ್ಲಿ ಮಾಯಾಪುರದಲ್ಲಿ ಮೂರು ಎಕರೆ ಜಮೀನು ಖರೀದಿಸಿದ್ದರು. 1972 ರಲ್ಲಿ ಭೂಮಿಪೂಜೆ ನಡೆದಿದ್ದು, 2009ರಲ್ಲಿ ದೇವಾಲಯದ ನಿರ್ಮಾಣ ಕಾರ್ಯ ಆರಂಭವಾಯಿತು. ದೇವಾಲಯದ ನಿರ್ಮಾಣಕ್ಕೆ ಆರಂಭಿಕ ಬಜೆಟ್ 600 ಕೋಟಿ, ಆದರೆ ಕರೋನಾ ಮತ್ತು ಅದರ ನಂತರ, ಬಜೆಟ್ 1000 ಕೋಟಿ ರೂಪಾಯಿಗಳನ್ನು ತಲುಪಿದೆ. ಕಾರು ತಯಾರಕ ಕಂಪನಿ ಫೋರ್ಡ್ನ ಮಾಲೀಕ ಆಲ್ಫ್ರೆಡ್ ಫೋರ್ಡ್ 300 ಕೋಟಿ ರೂ. ದೇಣಿಗೆ ನೀಡಿದ್ದಾರೆ.
ವಿಶ್ವದ ಅತಿ ದೊಡ್ಡ ವೈದಿಕ ದೇವಾಲಯ
ಇದು ವಿಶ್ವದ ಅತಿದೊಡ್ಡ ವೈದಿಕ ದೇವಸ್ಥಾನವಾಗಿದೆ. ಮೂರು ವಿಶಾಲ ಬೃಹತ್ ಶಿಖರಗಳನ್ನ ನಿರ್ಮಿಸಲಾಗಿದೆ ಮುಖ್ಯ ಗೋಪುರದಲ್ಲಿ ರಾಧಾ ಕೃಷ್ಣ ಮತ್ತು ಪೂರ್ವ ಗೋಪುರದಲ್ಲಿ ನರಸಿಂಹ ದೇವಾಲಯವಿರಲಿದೆ. ಗಾಳಿ ಬೆಳಕಿಗೆ ನೈಸರ್ಗಿಕ ವ್ಯವಸ್ಥೆ ಇರುತ್ತದೆ. 350 ಅಡಿ ಎತ್ತರದ ದೇವಸ್ಥಾನದಲ್ಲಿ 14 ಲಿಫ್ಟ್ಗಳನ್ನು ಅಳವಡಿಸಲಾಗಿದೆ. ಇಲ್ಲಿ ಸ್ಥಾಪಿಸಲಾಗಿರುವ ಸುದರ್ಶನ ಚಕ್ರ 20 ಅಡಿಗಳಷ್ಟು ಇದೆ. ಕಲಶ 40 ಅಡಿ ಎತ್ತರವಿದೆ. ಈ ದೇವಾಲಯದಲ್ಲಿ ಅಳವಡಿಸಲಾಗಿರುವ ಟೈಲ್ಸ್ಗಳು ರಾಜಸ್ಥಾನದ ಧೋಲ್ಪುರ ಹಾಗೂ ವಿಯೆಟ್ನಾಂ, ಫ್ರಾನ್ಸ್, ದಕ್ಷಿಣ ಅಮೆರಿಕಾದಿಂದ ಆಮದು ಮಾಡಿಕೊಳ್ಳಲಾಗಿದೆ.








