zim-vs-ind-1st-odi | ಭಾರತ – ಜಿಂಬಾಬ್ವೆ ಏಕದಿನ ಸರಣಿ : ಟಾಸ್ ಗೆದ್ದ ಟೀಂ ಇಂಡಿಯಾ
ಭಾರತ ಹಾಗೂ ಜಿಂಬಾಬ್ವೆ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ಕೆ.ಎಲ್.ರಾಹುಲ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಸಾಕಷ್ಟು ಸಮಯದ ಬಳಿಕ ಆಲ್ ರೌಂಡರ್ ದೀಪಕ್ ಚಹಾರ್ ಟೀಂ ಇಂಡಿಯಾ ಕಣಕ್ಕಿಳಿದಿದ್ದಾರೆ.
ಇನ್ನು ಎಲ್ಲರ ನಿರೀಕ್ಷೆಗಳನ್ನು ಹುಸಿ ಮಾಡುವಂತೆ ಕೆ.ಎಲ್.ರಾಹುಲ್ ಆರಂಭಿಕರಾಗಿ ಅಲ್ಲದೇ ಮಿಡಲ್ ಆರ್ಡರ್ ನಲ್ಲಿ ಬ್ಯಾಟ್ ಬೀಸಲು ಮುಂದಾಗಿದ್ದಾರೆ.
ಶಿಖರ್ ಧವನ್, ಶುಭ್ ಮನ್ ಗಿಲ್ ಭಾರತದ ಆರಂಭಕಾರಿದ್ದಾರೆ. ಮಿಡಲ್ ಆರ್ಡರ್ ನಲ್ಲಿ ಇಶಾನ್ ಕಿಶನ್, ಕೆ.ಎಲ್.ರಾಹುಲ್, ದೀಪಕ್ ಹೂಡಾ ಹಾಗೂ ಸಂಜು ಸ್ಯಾಮ್ ಸನ್ ಸ್ಥಾನ ಪಡೆದಿದ್ದಾರೆ.

ಅಕ್ಷರ್ ಪಟೇಲ್, ದೀಪಕ್ ಚಹರಾ ಆಲ್ ರೌಂಡರ್ ಕೋಟದಲ್ಲಿ ಸ್ಥಾನಪಡೆದಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಕುಲ್ ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಮೊಹ್ಮದ್ ಸಿರಾಜ್ ಅವಕಾಶ ಪಡೆದುಕೊಂಡಿದ್ದಾರೆ.
ಭಾರತ ಕ್ರಿಕೆಟ್ ತಂಡ ಹೀಗಿದೆ
ಶಿಖರ್ ಧವನ್, ಶುಭ್ ಮನ್ ಗಿಲ್, ಇಶಾನ್ ಕಿಶನ್, ಕೆ.ಎಲ್.ರಾಹುಲ್, ದೀಪಕ್ ಹೂಡಾ, ಸಂಜು ಸ್ಯಾಮ್ ಸನ್, ಅಕ್ಷರ್ ಪಟೇಲ್, ದೀಪಕ್ ಚಹರ್, ಕುಲ್ ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಮೊಹ್ಮದ್ ಸಿರಾಜ್
ಜಿಂಬಾಬ್ವೆ ತಂಡ ಹೀಗಿದೆ
ತಡಿವಾನ್ಸೆ ಮರುಮನಿ, ಇನೋಸೆಂಟ್ ಕೈಯಾ, ಸೀನ್ ವಿಲಿಯಮ್ಸ್, ವೆಸ್ಲೆ ಮಡೆವೆರೆ, ಸಿಕಂದರ್ ರಾಜಾ, ರೆಗಿಸ್ ಚಕಬ್ವಾ, ರಯಾನ್ ಬುರ್ಲ್, ಲೂಕ್ ಜೋಗ್ವೆ, ಬ್ರಾಡ್ಲೆ ಎವಾನ್ಸ್, ವಿಕ್ಟ್ ನ್ಯುವಾಚಿ, ರಿಚರ್ಡ್ ನಗರವ.








