ಶ್ರಾವಣ ಮಾಸದ ಶ್ರಾವಣ ಶುಕ್ರವಾರದ ಪೂಜೆ ಮಾಡುವುದು ಹೇಗೆ?
ಒಂದೊಂದು ದಿನವೂ ಒಂದೊಂದು ದೇವರ ಆರಾಧನೆ ಮಾಡ್ತಾರೆ. ಅದರಲ್ಲೂ ಮದುವೆಯಾದ ಹೆಣ್ಣು ಮಕ್ಕಳಿಗೆ ಮಂಗಳವಾರ, ಶುಕ್ರವಾರ ತುಂಬಾ ಒಳ್ಳೆಯ ದಿನಗಳಾಗಿವೆ. ಗಂಡನ ಅಭಿವೃದ್ಧಿ, ಆಯಸ್ಸು ಹೆಚ್ಚಲು ವ್ರತಗಳನ್ನು ಮಾಡುತ್ತಾರೆ. ಶ್ರಾವಣ ಮಾಸದ ಶುಕ್ರವಾರಕ್ಕೂ ತುಂಬಾ ಮಹತ್ವ ಇದೆ. ಶ್ರಾವಣ ಶುಕ್ರವಾರವನ್ನು ಸಂಪತ್ತಿನ ಶುಕ್ರವಾರ ಎಂದು ಕೂಡ ಕರೆಯುತ್ತಾರೆ. ಲಕ್ಷ್ಮೀ ದೇವಿಯನ್ನು ಪೂಜಿಸುವುದರಿಂದ ಆರ್ಥಿಕ ಬಿಕ್ಕಟ್ಟು ಪರಿಹಾರ ಆಗುವ ನಂಬಿಕೆ ಇದೆ.
ಶ್ರಾವಣ ಶುಕ್ರವಾರ ಸಂಪತ್ತಿನ ಶುಕ್ರವಾರ
ಶ್ರಾವಣ ಶುಕ್ರವಾರವನ್ನು ಸಂಪತ್ತಿನ ಶುಕ್ರವಾರ ಎಂದು ಸಹ ಕರೆಯುತ್ತಾರೆ. ಶುಕ್ರವಾರದಂದು ಲಕ್ಷ್ಮೀ ವ್ರತವನ್ನು ಮುತ್ತೈದೆಯರು ಮಾಡುತ್ತಾರೆ. ಈ ವ್ರತ ಮಾಡುವುದರಿಂದ ಗಂಡನ ಆಯುಸ್ಸು ಹೆಚ್ಚುವುದು ಹಾಗೂ ಲಕ್ಷ್ಮಿಯ ಕೃಪೆಯಿಂದ ಸಂಪತ್ತು ಕೂಡ ವೃದ್ಧಿಯಾಗುವುದು. ಹಣದ ಸಮಸ್ಯೆಯೂ ಬರುವುದಿಲ್ಲವಂತೆ. ಲಕ್ಷ್ಮಿ ಸಂಪನ್ನಳಾಗಿ ಆರೈಸುತ್ತಾಳಂತೆ. ಅದಕ್ಕೆ ಇದನ್ನು ಸಂಪತ್ತಿನ ಶುಕ್ರವಾರ ಎಂದು ಕರೆಯುತ್ತಾರೆ.
ಶ್ರಾವಣ ಶುಕ್ರವಾರದ ಪೂಜೆ ಮಾಡುವುದು ಹೇಗೆ?
ಮುತ್ತೈದೆಯರು ಮಡಿಯಾಗಿ, 5 ಗಡಿಗೆಗಳನ್ನು ರೆಡಿ ಮಾಡಬೇಕು. ಅದರಲ್ಲಿ ಶಂಖ, ಚಕ್ರ, ಎರಡು ಲಕ್ಷ್ಮಿಯ ಚಿತ್ರ, ಹಸು ಹಾಗೂ ಕರುವಿನ ಚಿತ್ರ, ಆನೆಯ ಚಿತ್ರ ಬಿಡಿಸಬೇಕು. ನಂತರ ಗಡಿಗೆಯನ್ನು ಮುಚ್ಚಬೇಕು. ಅದರ ಮುಚ್ಚಳದ ಮೇಲೆ ಹೂವಿನ ಚಿತ್ರ ಬಿಡಿಸಿ ಬೇಕು. ಇದನ್ನು ಸಂಪತ್ತು ಗೌರಿ ಗಡಿಗೆಯೆಂದು ಹೇಳಲಾಗುವುದು.
ಸುಮಂಗಲಿಯರಿಗೆ ತಾಂಬೂಲ ನೀಡಬೇಕು
ರೆಡಿ ಮಾಡಿದ 5 ಗಡಿಗೆಗಳಲ್ಲಿ ಅಕ್ಕಿ, ಅರಿಶಿಣ ಕೊಂಬು, ವೀಳ್ಯೆದೆಲೆ, ಅಡಿಕೆ ಇಟ್ಟು ಅವುಗಳನ್ನು ಪೂಜಾ ಸ್ಥಾನದಲ್ಲಿ ಇಡಬೇಕು. ಹಿಟ್ಟಿನಿಂದ ಹಣತೆಯನ್ನು ಮಾಡಿ ತುಪ್ಪದ ದೀಪ ಹಚ್ಚಬೇಕು. ನಂತರ ಲಕ್ಷ್ಮೀ ದೇವಿಯ ಹಾಡು ಹೇಳಿ, ಲಕ್ಷ್ಮೀಯನ್ನು ಆಹ್ವಾನಿಸಬೇಕು. ಆನಂತರ ಸುಮಂಗಲಿಯರನ್ನು ಕರೆದು ತಾಂಬೂಲ ಕೊಟ್ಟು ಆಶೀರ್ವಾದ ಪಡೆಯಬೇಕು.
ಶುಕ್ರವಾರ ಲಕ್ಷ್ಮೀ ಮಂತ್ರ ಪಠಿಸಿ
ಪೂಜೆಯ ನಂತರ ಲಕ್ಷ್ಮಿಯ ಮಂತ್ರವನ್ನು ಜಪಿಸಬೇಕು. ಆನಂತರ ಶಿವನಿಗೆ ಆರತಿ ಮಾಡಿ. ಬಳಿಕ ತಾಯಿ ಲಕ್ಷ್ಮಿದೇವಿಗೆ ಆರತಿ ಮಾಡಿ. ಸಂಪತ್ತನ್ನು ಪಡೆಯಲು ಶಿವ ಮತ್ತು ತಾಯಿ ಲಕ್ಷ್ಮಿಯನ್ನು ಭಕ್ತಿಯಿಂದ ಪ್ರಾರ್ಥಿಸಬೇಕು.
ಈ ಬಾರಿ ಎಷ್ಟು ಶ್ರಾವಣ ಶುಕ್ರವಾರ ಬಂದಿದೆ?

2022ರಲ್ಲಿ ಅಂದ್ರೆ ಈವರ್ಷ ಐದು ಶ್ರಾವಣ ಶುಕ್ರವಾರಗಳು ಬಂದಿವೆ.
29-07-2022, ಶುಕ್ರವಾರ
05-08-2022, ಶುಕ್ರವಾರ
12-08-2022, ಶುಕ್ರವಾರ
19-08-2022, ಶುಕ್ರವಾರ
26-08-2022, ಶುಕ್ರವಾರ
ಈ ಬಾರಿ ಐದು ಶುಕ್ರವಾರಗಳು ಬಂದಿರೋದ್ರಿಂದ ಹೆಚ್ಚು ಶುಭ. ಎಲ್ಲಾ ವಾರ ಕಟ್ಟುನಿಟ್ಟಿನಿಂದ ಲಕ್ಷ್ಮಿಯನ್ನು ಆರಾಧಿಸಿದ್ರೆ ತುಂಬಾ ಒಳ್ಳೆಯದಾಗುತ್ತೆ. ನೀವು ಅಂದುಕೊಂಡ ಕೆಲಸಗಳು ಆಗಲಿವೆ. ನಿಮ್ಮ ಕಷ್ಟಗಳೆಲ್ಲವೂ ದೂರ ಆಗುದವುದು.
ಶ್ರಾವಣ ಶುಕ್ರವಾರದಂದು ಸಂಜೆ ಏನು ಮಾಡಬೇಕು?
ಶ್ರಾವಣ ಶುಕ್ರವಾರ ಬೆಳಗ್ಗೆ ಮನೆಯಲ್ಲಿ ಪೂಜೆ ಮಾಡಿದ ನಂತರ, ಸಂಜೆ ಶಿವನ ದೇವಸ್ಥಾನಕ್ಕೆ ಹೋಗಿ ಶಿವನಿಗೆ ನೀರನ್ನು ಅರ್ಪಿಸಬೇಕು. ಅಲ್ಲಿ ಕುಳಿತು ಶಿವನ ಪಂಚಾಕ್ಷರಿ ಮಂತ್ರವನ್ನು ಕನಿಷ್ಠ 108 ಬಾರಿಯಾದರೂ ಜಪಿಸಬೇಕು. ನಂತರ ಲಕ್ಷ್ಮಿ ದೇವಿಯ ಮಂತ್ರವನ್ನು ಪಠಿಸಿಬೇಕು. ಮೊದಲು ಶಿವನ ಆರತಿ ಮಾಡಿ ನಂತರ ತಾಯಿ ಲಕ್ಷ್ಮಿಯ ಆರತಿ ಮಾಡಿದ್ರೆ. ಸಂಪತ್ತು ಲಭಿಸುತ್ತದೆ.
ಲಕ್ಷ್ಮಿ ದೇವಿಯ ಮಂತ್ರ
‘ಓಂ ಶ್ರೀ ಹ್ರೀಂ ಕಮಲೇ ಪ್ರಸೀದ್ ಪ್ರಸೀದ್ ಶ್ರೀಂ ಹ್ರೀಂ ಶ್ರೀ ಓಂ ಮಹಾಲಕ್ಷ್ಮಯೈ ನಮಃ’. ಈ ಮತ್ರವನ್ನು ಪಠಿಸಬೇಕು. ಆಗ ಲಕ್ಷ್ಮೀ ದೇವಿ ಕೃಪೆಗೆ ಪಾತ್ರರಾಗುತ್ತೀರಿ.
ಸಾಲದ ಸಮಸ್ಯೆಯಿಂದ ದೂರವಾಗುವುದಕ್ಕೆ ಈ ರೀತಿ ಮಾಡಿ
ಶ್ರಾವಣ ಮಾಸದಲ್ಲಿ ಪ್ರತಿದಿನ ಶಿವಲಿಂಗದ ಮೇಲೆ ಕೆಂಪು ಹೂವುಗಳನ್ನು ಅರ್ಪಿಸಬೇಕು. ಶಿವನ ಮಂತ್ರ ಪಠಿಸುತ್ತಾ, ಶಿವಲಿಂಗಕ್ಕೆ ನೀರನ್ನು ಅರ್ಪಿಸಬೇಕು. ಇದರ ನಂತರ ಲಕ್ಷ್ಮಿ ದೇವಿಗೆ ಕೆಂಪು ಗುಲಾಬಿ ಹೂವನ್ನು ಅರ್ಪಿಸಿ ಮತ್ತು ಸಿಹಿ ನೈವೇದ್ಯ ಅರ್ಪಿಸಬೇಕು. ನಂತರ ಶಿವಲಿಂಗಕ್ಕೆ ಪ್ರದಕ್ಷಿಣೆಯನ್ನು ಮಾಡಿ, ಶಿವ ಹಾಗೂ ಲಕ್ಷ್ಮಿ ದೇವಿಯನ್ನು ಪ್ರಾರ್ಥಿಸಬೇಕು. ಆಗ ನೀವು ಸಾಲದ ಸಮಸ್ಯೆಯಿಂದ ದೂರ ಉಳಿಯುತ್ತಾರೆ.
ಶ್ರಾವಣ ಶುಕ್ರವಾರದ ಕಥೆ ಏನು?
ಒಂದು ಕಾಲದಲ್ಲಿ ಓರ್ವ ಬಡ ಬ್ರಾಹ್ಮಣನಿದ್ದನು. ಆತನಿಗೆ ಅವನ ಪತ್ನಿ, ಅವನ ನಾಲ್ಕು ಗಂಡು ಮಕ್ಕಳು ಮತ್ತು 4 ಸೊಸೆಯಂದಿರಿದ್ದರು. ಪ್ರತಿನಿತ್ಯದಂತೆ ಆ ದಿನವೂ ಕೂಡ ಬಡ ಬ್ರಾಹ್ಮಣ ಭಿಕ್ಷೆಗೆಂದು ಹೋಗುತ್ತಾನೆ. ಆಗ ಒಂದು ಮನೆಯಲ್ಲಿ ಅದ್ಧೂರಿ ಆಚರಣೆಯೊಂದು ನಡೆಯುತ್ತಿರುತ್ತದೆ. ಇದನ್ನು ಕಂಡು ಬ್ರಾಹ್ಮಣ ಆ ಮನೆಯವರಲ್ಲಿ ಪೂಜೆಯ ಬಗ್ಗೆ ಕೇಳುತ್ತಾನೆ. ಅವರು ಆತನಿಗೆ ಸಂಪತ್ ಶುಕ್ರವಾರದ ಪೂಜೆಯ ಬಗ್ಗೆ ಹೇಳಿ ಸಂಪತ್ ಗೌರಿ ಗಡಿಗೆಯನ್ನು ನೀಡಿ ಕಳುಹಿಸುತ್ತಾರೆ. ಆತನ ಕೈಗೆ ಗಡಿಗೆ ಬರುತ್ತಿದ್ದಂತೆ ಎಲ್ಲರೂ ಅವನಿಗೆ ಭಿಕ್ಷೆ ನೀಡುತ್ತಾರೆ. ಇದರಿಂದ ಆಶ್ಚರ್ಯಗೊಂಡ ಬಡ ಬ್ರಾಹ್ಮಣ ಮನೆಗೆ ಬಂದು ಹೆಂಡತಿಯ ಬಳಿ ನಡೆದ ಘಟನೆಯನ್ನು ವಿವರಿಸುತ್ತಾನೆ.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಬ್ರಾಹ್ಮಣ ಮನೆಯಲ್ಲೂ ಅಂದಿನಿಂದ ಪೂಜೆ
ಬಡ ಬ್ರಾಹ್ಮಣ ಮತ್ತು ಆತನ ಪತ್ನಿ ಕೂಡ ಹಬ್ಬದ ಮಹಿಮೆಯನ್ನು ತಿಳಿದು ತಾವೂ ಆಚರಿಸಲು ಮುಂದಾಗುತ್ತಾರೆ. ಸುಮಾರು ಮೂರರಿಂದ ನಾಲ್ಕು ವಾರಗಳ ಆಚರಣೆಯ ನಂತರ ಲಕ್ಷ್ಮಿ ದೇವಿಯು ಸುಮಂಗಲಿಯ ವೇಷದಲ್ಲಿ ಅವರ ಮನೆಯ ಪೂಜೆಗೆ ಬರುತ್ತಾಳೆ. ಅಂದಿನಿಂದ ಆ ಮನೆಯಲ್ಲಿ ಸಿರಿ, ಸಂಪತ್ತು ವೃದ್ಧಿಯಾಗುತ್ತದೆ. ಬಡವನಾಗಿದ್ದ ಬ್ರಾಹ್ಮಣನ ಮನೆಯಲ್ಲಿ ದಿನಕಳೆದಂತೆ ಹಣ ಹೆಚ್ಚಾಗುತ್ತಾ ಹೋಗುತ್ತದೆ.
ಈ ವ್ರತ ಮಾಡಿದವರಿಗೂ, ಕೇಳಿದವರಿಗೂ ಲಕ್ಷ್ಮೀ ದೇವಿ ಕರುಣೆ ತೋರುತ್ತಾಳೆ. ಆರ್ಥಿಕ ಬಿಕ್ಕಟ್ಟಿನಿಂದ ದೂರ ಮಾಡುತ್ತಾಳೆ ಎಂಬ ನಂಬಿಕೆ ಇದೆ.








