ADVERTISEMENT
Thursday, February 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Devaraja Arasu – ಸರ್ವರಿಗೂ ಸಮಬಾಳು ನೀಡಿದ ಏಕೈಕ ಮುಖ್ಯಮಂತ್ರಿ ‘ದೇವರಾಜ ಅರಸು’ – ಡಾ.ಕೆ. ಸುಧಾಕರ್

ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಮಾತಿಗೆ ನೂರಕ್ಕೆ ನೂರರಷ್ಟು ಅರ್ಥ ನೀಡಿ ಆಡಳಿತ ನಡೆಸಿದ ಏಕೈಕ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರಾಗಿದ್ದು, ಅಂತಹ ಮಹನೀಯರಿಗೆ ಸಿಗಬೇಕಾದ ಗೌರವ ಸಿಗದಿರುವುದು ಖೇದಕರ  ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

Naveen Kumar B C by Naveen Kumar B C
August 20, 2022
in Newsbeat, State, ರಾಜ್ಯ
Share on FacebookShare on TwitterShare on WhatsappShare on Telegram

ಸರ್ವರಿಗೂ ಸಮಬಾಳು ನೀಡಿದ ಏಕೈಕ ಮುಖ್ಯಮಂತ್ರಿ ದೇವರಾಜ ಅರಸು – ಡಾ.ಕೆ. ಸುಧಾಕರ್

ದೇವನಹಳ್ಳಿ : ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಮಾತಿಗೆ ನೂರಕ್ಕೆ ನೂರರಷ್ಟು ಅರ್ಥ ನೀಡಿ ಆಡಳಿತ ನಡೆಸಿದ ಏಕೈಕ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರಾಗಿದ್ದು, ಅಂತಹ ಮಹನೀಯರಿಗೆ ಸಿಗಬೇಕಾದ ಗೌರವ ಸಿಗದಿರುವುದು ಖೇದಕರ  ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

Related posts

ರಾಜ್ಯಸಭೆ ಚುನಾವಣೆ ಘೋಷಣೆ… 10 ರಾಜ್ಯಗಳ 37 ಸದಸ್ಯರ ಅವಧಿ ಮುಕ್ತಾಯ

ರಾಜ್ಯಸಭೆ ಚುನಾವಣೆ ಘೋಷಣೆ… 10 ರಾಜ್ಯಗಳ 37 ಸದಸ್ಯರ ಅವಧಿ ಮುಕ್ತಾಯ

February 19, 2026
ರೈತ ಸಮುದಾಯಕ್ಕೆ ಗುಡ್ ನ್ಯೂಸ್: ದಶಕಗಳ ಜಮೀನು ದಾರಿ ವಿವಾದಕ್ಕೆ ಸಿಕ್ತು ಶಾಶ್ವತ ಮುಕ್ತಿ;ಕಾಲುದಾರಿ ಬಂಡಿದಾರಿ ಬಂದ್ ಮಾಡಿದರೆ ಹುಷಾರ್

ರೈತ ಸಮುದಾಯಕ್ಕೆ ಗುಡ್ ನ್ಯೂಸ್: ದಶಕಗಳ ಜಮೀನು ದಾರಿ ವಿವಾದಕ್ಕೆ ಸಿಕ್ತು ಶಾಶ್ವತ ಮುಕ್ತಿ;ಕಾಲುದಾರಿ ಬಂಡಿದಾರಿ ಬಂದ್ ಮಾಡಿದರೆ ಹುಷಾರ್

February 19, 2026

ದೇವನಹಳ್ಳಿಯಲ್ಲಿ ನಿರ್ಮಿಸಿರುವ ದೇವರಾಜ ಅರಸು ಭವನ ಉದ್ಘಾಟಿಸಿದ ನಂತರ ಅರಸು ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, ರಾಜ್ಯದ ಸಮಸ್ತ ಹಿಂದುಳಿದವರಿಗೂ ಸಮರ್ಪಕವಾಗಿ ನ್ಯಾಯ ಒದಗಿಸಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ ಎಂದರು.

 ಅವರ ಪಕ್ಷವೇ ಅವರಿಗೆ ಮುಳುವಾಯಿತು

ಅವರ ಪಕ್ಷದ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರು ಉತ್ತರದಲ್ಲಿ ಸೋತಾಗ ಚಿಕ್ಕಮಗಳೂರಿನಿಂದ ಮತ್ತೆ ರಾಜಕೀಯ ಮುಖ್ಯವಾಹಿನಿಗೆ ಬರಲು ಅರಸು ಅವರು ಶ್ರಮಿಸಿದರು. ಇಂತಹ ಅರಸು ಅವರನ್ನು ಅವರ ಪಕ್ಷ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿತು. ಅವರನ್ನು ಪಕ್ಷದಿಂದಲೂ ಉಚ್ಛಾಟಿಸಿತು. ಇದು ಒಬ್ಬ ಧೀಮಂತ ನಾಯಕ ಅನುಭವಿಸಿದ ನೋವು ಎಂದರು.

ಅವರ ಜೀವನ ಚರಿತ್ರೆ ಓದಿದರೆ ಭಾವನೆಗಳಿಂದ ಕೂಡಿದ ಚರಿತ್ರೆಯಾಗಿದೆ. ರಾಜಕೀಯ ಕ್ರಾಂತಿ, ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ಏಕೈಕ ಮುಖ್ಯಮಂತ್ರಿ  ಅರಸು. ಆ ಕಾಲಘಟ್ಟದಲ್ಲಿ ಜಾತಿ, ರಾಜಕೀಯ, ಆರ್ಥಿಕ ಶಕ್ತಿ ಇಲ್ಲದವರನ್ನು ಶಾಸಕರು, ಸಚಿವರನ್ನಾಗಿ ಮಾಡಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ ಎಂದರು.

 ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್, ವೀರಪ್ಪಮೊಯ್ಲಿ ಸೇರಿದಂತೆ ಅನೇಕ ನಾಯಕರನ್ನು ಬೆಳೆಸಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ. ರಾಜಕೀಯ ಕ್ರಾಂತಿ ಮಾಡಿದ ನಾಯಕ ಅರಸು. ತಾವು ಪ್ರತಿಪಾದಿಸಿದ್ದನ್ನು ಅಕ್ಷರಶಃ ಅನುಷ್ಠಾನ ಮಾಡುವ ಎದೆಗಾರಿಕೆ ತೋರಿಸಿದ ಅತ್ಯಂತ ವಿರಳ ಮುಖ್ಯಮಂತ್ರಿಗಳಲ್ಲಿ ಅರಸು ಅವರೂ ಒಬ್ಬರು. ಉಳುವವನೇ ಭೂ ಒಡೆಯ ಎಂಬ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ಜಾರಿಗೊಳಿಸಿದ ಕಾಯ್ದೆಯನ್ನು ಅನೇಕ ರಾಜ್ಯಗಳು ಅನುಷ್ಠಾನ ಮಾಡದಿದ್ದರೂ, ತಮ್ಮದೇ ಸಂಪುಟದ ಸಚಿವರು ವಿರೋಧ ವ್ಯಕ್ತಪಡಿಸಿದರೂ ಎದೆಗಾರಿಕೆಯಿಂದ ಕಾಯ್ದೆ ಅನುಷ್ಠಾನ ಮಾಡಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ ಎಂದು ಸಚಿವರು ಸ್ಮರಿಸಿದರು.

 ಹಿಂದುಳಿದವರ ಚಾಂಪಿಯನ್

ಉಳುವವನೇ ಭೂಮಿಯ ಒಡೆಯ ಕಾಯ್ದೆಯಿಂದ ಲಕ್ಷಾಂತರ ಮಂದಿ ಜೀತದಾಳುಗಳು ಜೀತ ವಿಮುಕ್ತರಾದರು. ಅಷ್ಟೇ ಅಲ್ಲದೆ ಜೀತದಾಳುಗಳೂ ಭೂಮಿಯ ಒಡೆಯರಾದರು. ದುಡಿಯುವ ಕೈಗಳಿಗೆ ಭೂಮಿ ನೀಡಿದ ಖ್ಯಾತಿ ಅರಸು ಅವರಿಗೆ ಸಲ್ಲುತ್ತದೆ. ಹಿಂದುಳಿದ ವರ್ಗಗಳ ಪರ ಯಾವುದೇ ಕೆಲಸ ಮಾಡದವರೂ ತಾವು ಚಾಂಪಿಯನ್ ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರು ಮಾಡಿದ್ದು ಏನೂ ಇಲ್ಲ. ಆದರೆ ನುಡಿದಂತೆ ನಡೆಯಲ್ಲಿ ತೋರಿಸಿದ ಅರಸು ಅವರು ಮಾತ್ರ ನಿಜವಾದ ಹಿಂದುಳಿದವರ ಚಾಂಪಿಯನ್ ಎಂದು ಬಣ್ಣಿಸಿದರು.

ಅರಸು ಅವರಿಗೆ ಸಿಗಬೇಕಾದ ಗೌರವ ಸಿಗುತ್ತಿಲ್ಲ ಎಂಬುದು ನೋವಿನ ಸಂಗತಿ. ಅವರಿಗೆ ಸಿಗಬೇಕಾದ ಪ್ರಾತಿನಿಧ್ಯ, ಮನ್ನಣೆ ಸಿಗದಿರುವುದು ಖೇದಕರ ಸಂಗತಿ. ಮನೆಯಿಲ್ಲದವರಿಗೆ ಜನತಾ ಮನೆ ವಿತರಣೆ ಯೋಜನೆ ಜಾರಿಗೊಳಿಸಿದ ಮೊದಲ ಮುಖ್ಯಮಂತ್ರಿ, ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಏಕೈಕ ಮುಖ್ಯಮಂತ್ರಿ, ಸ್ಥಿತಿವಂತರ ಸಮಾಜವಿದ್ದ ಕಾಲದಲ್ಲಿ ಇಂತಹ ಸುಧಾರಣೆ ಮಾಡಿದ್ದು ನಿಜಕ್ಕೂ ದೊಡ್ಡ ಸಾಧನೆ ಎಂದು ಹೇಳಿದರು.

ಅರಸು ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಎಲ್ಲರೂ ಸಾಗಿದರೆ ಸುಸ್ಥಿರ ಸಮಾಜ ನಿರ್ಮಿಸಲು ಸಾಧ್ಯ. ಹಾಗಾಗಿ ಅವರು ಎಂದೆಂದಿಗೂ ನಾಡಿನ ಜನರ ಮನದಲ್ಲಿ ಚಿರಸ್ಥಾಯಿಯಾಗಿರುತ್ತಾರೆ ಎಂದು ಸಚಿವರು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ರಂಗಸ್ವಾಮಿ, ಚಂದ್ರಶೇಖರ್, ವಿಜಯ್ ಕುಮಾರ್, ಅಮರನಾಥ್, ಆಂಜಿನಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags: devanahalliDevaraja ArasuDr. K Sudhakar
ShareTweetSendShare
Join us on:

Related Posts

ರಾಜ್ಯಸಭೆ ಚುನಾವಣೆ ಘೋಷಣೆ… 10 ರಾಜ್ಯಗಳ 37 ಸದಸ್ಯರ ಅವಧಿ ಮುಕ್ತಾಯ

ರಾಜ್ಯಸಭೆ ಚುನಾವಣೆ ಘೋಷಣೆ… 10 ರಾಜ್ಯಗಳ 37 ಸದಸ್ಯರ ಅವಧಿ ಮುಕ್ತಾಯ

by Shwetha
February 19, 2026
0

ಚುನಾವಣಾ ಆಯೋಗ ರಾಜ್ಯಸಭೆ ಚುನಾವಣೆಯ ದಿನಾಂಕವನ್ನು ಪ್ರಕಟಿಸಿದ್ದು, ಮಾರ್ಚ್ 16ರಂದು ಮತದಾನ ನಡೆಯಲಿದೆ. ಒಟ್ಟು 10 ರಾಜ್ಯಗಳ 37 ರಾಜ್ಯಸಭಾ ಸದಸ್ಯರ ಅವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ...

ರೈತ ಸಮುದಾಯಕ್ಕೆ ಗುಡ್ ನ್ಯೂಸ್: ದಶಕಗಳ ಜಮೀನು ದಾರಿ ವಿವಾದಕ್ಕೆ ಸಿಕ್ತು ಶಾಶ್ವತ ಮುಕ್ತಿ;ಕಾಲುದಾರಿ ಬಂಡಿದಾರಿ ಬಂದ್ ಮಾಡಿದರೆ ಹುಷಾರ್

ರೈತ ಸಮುದಾಯಕ್ಕೆ ಗುಡ್ ನ್ಯೂಸ್: ದಶಕಗಳ ಜಮೀನು ದಾರಿ ವಿವಾದಕ್ಕೆ ಸಿಕ್ತು ಶಾಶ್ವತ ಮುಕ್ತಿ;ಕಾಲುದಾರಿ ಬಂಡಿದಾರಿ ಬಂದ್ ಮಾಡಿದರೆ ಹುಷಾರ್

by Shwetha
February 19, 2026
0

ರಾಜ್ಯದ ರೈತ ಸಮುದಾಯಕ್ಕೆ ಇಲ್ಲಿದೆ ಒಂದು ಸಂತಸದ ಸುದ್ದಿ. ಜಮೀನುಗಳಿಗೆ ಹೋಗಲು ದಾರಿ ಇಲ್ಲದೆ ಪರದಾಡುತ್ತಿದ್ದ ಅನ್ನದಾತರ ಸಂಕಷ್ಟಕ್ಕೆ ಸ್ಪಂದಿಸಿರುವ ರಾಜ್ಯ ಸರ್ಕಾರ, ಐತಿಹಾಸಿಕ ಮತ್ತು ಮಹತ್ವದ...

ಬಂಗಾರದ ಬೆಲೆ ಅರ್ಧಕ್ಕರ್ಧ ಇಳಿಕೆಯಾಗುವ ಸಾಧ್ಯತೆ ಹೂಡಿಕೆದಾರರಿಗೆ ತಜ್ಞರು ನೀಡಿದ ಮಹತ್ವದ ಸಲಹೆ ಏನು ಗೊತ್ತಾ?

ಬಂಗಾರದ ಬೆಲೆ ಅರ್ಧಕ್ಕರ್ಧ ಇಳಿಕೆಯಾಗುವ ಸಾಧ್ಯತೆ ಹೂಡಿಕೆದಾರರಿಗೆ ತಜ್ಞರು ನೀಡಿದ ಮಹತ್ವದ ಸಲಹೆ ಏನು ಗೊತ್ತಾ?

by Shwetha
February 19, 2026
0

ಬಂಗಾರ ಎಂದರೆ ಭಾರತೀಯರಿಗೆ ಎಲ್ಲಿಲ್ಲದ ಪ್ರೀತಿ. ಶುಭ ಸಮಾರಂಭಗಳಿಗೆ, ಮದುವೆ ಮುಂಜಿಗಳಿಗೆ ಚಿನ್ನದ ಆಭರಣ ಕೊಳ್ಳುವುದು ಒಂದು ಸಂಪ್ರದಾಯವಾದರೆ, ಕಷ್ಟಕಾಲಕ್ಕೆ ಆಗಲಿ ಎಂದು ಹಳದಿ ಲೋಹದ ಮೇಲೆ...

ಮಾ.5ರಂದು ಸರ್ಕಾರದ ವಿರುದ್ಧ ಗುತ್ತಿಗೆದಾರರ ಪ್ರತಿಭಟನೆ… ಬಾಕಿ ಬಿಲ್ ಬಿಡುಗಡೆಗೆ ಆಗ್ರಹ

ಮಾ.5ರಂದು ಸರ್ಕಾರದ ವಿರುದ್ಧ ಗುತ್ತಿಗೆದಾರರ ಪ್ರತಿಭಟನೆ… ಬಾಕಿ ಬಿಲ್ ಬಿಡುಗಡೆಗೆ ಆಗ್ರಹ

by Shwetha
February 19, 2026
0

ರಾಜ್ಯ ಗುತ್ತಿಗೆದಾರರ ಸಂಘವು ಬಾಕಿ ಬಿಲ್‌ಗಳ ಬಿಡುಗಡೆಗೆ ಆಗ್ರಹಿಸಿ ಮಾರ್ಚ್ 5ರಂದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಈ ಕುರಿತು ಸಂಘದ ಅಧ್ಯಕ್ಷ ಆರ್. ಮಂಜುನಾಥ್...

ಪಂದ್ಯಕ್ಕೂ ಮುನ್ನ ಪಾತ್ರೆ ತೊಳೆಯಬೇಕಿತ್ತು: ಪಾಕ್ ಹಾಕಿ ತಂಡದ ನಾಯಕ ಗಂಭೀರ ಆರೋಪ

ಪಂದ್ಯಕ್ಕೂ ಮುನ್ನ ಪಾತ್ರೆ ತೊಳೆಯಬೇಕಿತ್ತು: ಪಾಕ್ ಹಾಕಿ ತಂಡದ ನಾಯಕ ಗಂಭೀರ ಆರೋಪ

by Shwetha
February 19, 2026
0

ಆಸ್ಟ್ರೇಲಿಯಾ ಪ್ರವಾಸದಿಂದ ಹಿಂದಿರುಗಿದ ಬಳಿಕ ಪಾಕಿಸ್ತಾನ ಹಾಕಿ ತಂಡದ ನಾಯಕ ಶಕೀಲ್ ಅಹ್ಮದ್ ಪಾಕಿಸ್ತಾನ ಹಾಕಿ ಫೆಡರೇಶನ್ (PHF) ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ತಂಡದ ನಿರ್ವಹಣೆಯಲ್ಲಿ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram