ADVERTISEMENT
Tuesday, March 10, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

“ವಿಧವೆಯರು ಮನೆಯಲ್ಲಿ ದೀಪ ಹಚ್ಚಬಹುದೇ” ಮನೆಯ ಹೊಸ್ತಿಲಿಗೆ ಪೂಜೆ ಮಾಡಬಹುದೇ… ತುಳಸಿಗೆ ದೀಪ ಹಚ್ಚಬಹುದೇ??

Mahesh M Dhandu by Mahesh M Dhandu
August 25, 2022
in Astrology, Newsbeat, ಜ್ಯೋತಿಷ್ಯ
Can widows light a lamp at home?

Can widows light a lamp at home?

Share on FacebookShare on TwitterShare on WhatsappShare on Telegram

“ವಿಧವೆಯರು ಮನೆಯಲ್ಲಿ ದೀಪ ಹಚ್ಚಬಹುದೇ” ಮನೆಯ ಹೊಸ್ತಿಲಿಗೆ ಪೂಜೆ ಮಾಡಬಹುದೇ… ತುಳಸಿಗೆ ದೀಪ ಹಚ್ಚಬಹುದೇ??

ಈ ಪ್ರಕಾರವಾಗಿ ಹಲವಾರು ಪ್ರಶ್ನೆಗಳು ಯಾವಾಗಲೂ ನಮ್ಮ ಮುಂದೆ ಸುಳಿಯುತ್ತವೆ. ಆದರೆ ಇದಕ್ಕೆ ಉತ್ತರ “ಇದಮಿತ್ತಂ” ಹೀಗೆಯೇ ಎಂದು ಯಾರು ನಿರ್ಧರಿಸಲು ಅಶಕ್ತರಾಗಿದ್ದಾರೆ. ಒಬ್ಬೊಬ್ಬರು ಒಂದು ರೀತಿಯಲ್ಲಿ ಇದನ್ನು ವಿಮರ್ಶೆ ಮಾಡಿ ತಮಗೆ ತಿಳಿದ ಮಟ್ಟಿಗೆ ಸಂಪ್ರದಾಯಗಳನ್ನು ಪಾಲಿಸುತ್ತಾರೆ. ಧರ್ಮವು ಸೂಕ್ಷ್ಮವಾದ ವಿಚಾರ.
ಕೆಲವೊಮ್ಮೆ ಉಪನಿಷತ್ತುಗಳು ಪುರಾಣಗಳು ನಮಗೆ ಇದರ ಬಗ್ಗೆ ಉತ್ತರಗಳನ್ನು ನೀಡಿವೆ. ಆದರೆ ಅದನ್ನು ಅರ್ಥಮಾಡಿಕೊಳ್ಳುವುದು ಅವರವರ ಭಾವನೆಗಳಿಗೆ ಬಿಟ್ಟದ್ದು..

Related posts

ಮಧ್ಯಪ್ರಾಚ್ಯ ಉದ್ವಿಗ್ನತೆ ಪರಿಣಾಮ: ತೈಲ ದರ ಬ್ಯಾರೆಲ್‌ಗೆ $120ಕ್ಕೆ ಏರಿಕೆ

ಮಧ್ಯಪ್ರಾಚ್ಯ ಉದ್ವಿಗ್ನತೆ ಪರಿಣಾಮ: ತೈಲ ದರ ಬ್ಯಾರೆಲ್‌ಗೆ $120ಕ್ಕೆ ಏರಿಕೆ

March 10, 2026
ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆ ಭಾರತೀಯರ ರಕ್ಷಣೆಗೆ ಸರ್ಕಾರ ಬದ್ಧ: ಜೈಶಂಕರ್

ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆ ಭಾರತೀಯರ ರಕ್ಷಣೆಗೆ ಸರ್ಕಾರ ಬದ್ಧ: ಜೈಶಂಕರ್

March 10, 2026

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

ಆದರೂ ಇದಕ್ಕೆ ಈ ಪಂಚಮವೇದ ವೆಂಬ ಪ್ರಸಿದ್ಧಿಪಡೆದ ಮಹಾಭಾರತದ ಕತೆಯ ಮೂಲಕ ಉತ್ತರ ಹೇಳಲು ಬಯಸುತ್ತೇನೆ…

ಮಹಾಭಾರತದ ಯುದ್ಧ ಮುಗಿದು ಈ ಸಂಗ್ರಾಮದಲ್ಲಿ ಅಳಿದುಹೋದವರ ಚಿತೆಗಳನ್ನು ಆಗಷ್ಟೇ ಅಗ್ನಿಯು ಬೂದಿ ಮಾಡಿಯಾಗಿತ್ತು. ಯುದ್ಧದಲ್ಲಿ ಮಡಿದವರಿಗೆ ತೃಪ್ತಿ ಕೊಡಲೆಂದು ಉಳಿದವರು ಗಂಗಾ ಪ್ರವಾಹದಲ್ಲಿ ನಿಂತು ತರ್ಪಣವನ್ನು ಬಿಡುವ ಒಂದು ಸುಸಂದರ್ಭ….
ಪಾಂಡವರು ತಮ್ಮ ಬಂಧು ದಾಯಾದಿಗಳಿಗೆ ತರ್ಪಣವನ್ನು ಬಿಡಲು ನೀರಿನಲ್ಲಿ ನಿಂತಿದ್ದಾರೆ.
ದಡದಲ್ಲಿ ನಿಂತ ತಾಯಿ ಕುಂತಿ ಮಾತೆ ಒಬ್ಬೊಬ್ಬರ ಹೆಸರನ್ನೇ ನೆನಪಿಸುತ್ತಿದ್ದಾಳೆ. ಧರ್ಮರಾಯನಿಗೆ ಈ ವಿಷಯ ತಿಳಿಯದ್ದೇನೂ ಅಲ್ಲ.
ಆದರೆ ಹಿಂದಿನ ದಿನ ನಡುರಾತ್ರಿಯಲ್ಲಿ ಯಾರೋ ಬಂದು ಅವಳ ಕಿವಿಯಲ್ಲಿ ಉಸುರಿದ ಮಾತು ಅವಳನ್ನು ಬಹಳವಾಗಿ ಕಾಡುತ್ತಿತ್ತು.
ಅಮ್ಮಾ…. ನನ್ನ ನೆನಪಿಲ್ಲವೇ…!
ನನಗಿಲ್ಲವೇ ತರ್ಪಣದಲ್ಲೊಂದು ಪಾಲು.ನನಗಿಲ್ಲವೇ ಸಂಬಂಧದಲ್ಲಿ ಒಂದು ಪಾಲು.

ಮಾತೃ ಹೃದಯವಲ್ಲವೇ ಕ್ಷಣಕಾಲ ನೆನಪಾಗಿ ಒಮ್ಮೆಗೆ
ಕುಂತಿಗೆ ಕಣ್ಣೀರು ಕಣ್ಣೊಳಗೆ ನಿಂತಿತ್ತು.
ತರ್ಪಣ ಇನ್ನೇನು ಮುಗಿಯುವ ಕಾಲದಲ್ಲಿ ಕುಂತಿ ಇನ್ನೊಂದು ಹೆಸರು ಬಿಟ್ಟಿರಲ್ಲವೇ ಎಂದು ಮಕ್ಕಳಲ್ಲಿ ಕೇಳುತ್ತಾಳೆ.
ಭೀಮಾರ್ಜುನರು ಧರ್ಮರಾಯ ನಲ್ಲಿ ಮತ್ತೆ ಎಲ್ಲ ಹೆಸರುಗಳನ್ನು ನೆನಪಿಸುತ್ತಾ ಬಂದರು. ಧರ್ಮರಾಯ ತಾಯಿಯಲ್ಲಿ ಇಂತೆಂದ… ಎಲ್ಲಾ ಹೆಸರುಗಳು ನೆನಪಿಸಿಕೊಂಡು ತರ್ಪಣವನ್ನು ನೀಡಿದ್ದೇವೆ. ಇನ್ನು ಯಾರನ್ನಾದರೂ ಮರೆತಿದ್ದರೆ ನೀನು ಹೇಳಮ್ಮ….

ಕ್ಷಣಕಾಲ ಕುಂತಿಯ ಕಂಠದಲ್ಲಿ ಸೆರೆಯಾಗಿದ್ದ ಹೆಸರು ಈಚೆ ಬರಲು ಮನಸ್ಸು ವಿಪರೀತ ಅಳುತ್ತಿತ್ತು…
‘ಜನಕಂಜಿ ನಡೆಯದೆ ಮನಕಂಜಿ ನಡೆಯಬೇಕೆಂದು…
ಆ ಕ್ಷಣದಲ್ಲಿ ಅವಳ ಸುಪ್ತ ಪ್ರಜ್ಞೆ ಜಾಗೃತವಾಯಿತು.
ಭೋರ್ಗರೆಯುವ ಕಣ್ಣೀರಿನ ಮಧ್ಯದಲ್ಲಿ ಕಂಠದಲ್ಲಿ ಸ್ವರವು ನಿಸ್ತೇಜವಾಗಿದ್ದರೂ ಪೂರ್ಣ ಪ್ರಯತ್ನ ಮಾಡಿ ಆ ಹೆಸರು ಬಂಧನವನ್ನು ಭೇದಿಸಿ ಪಾಂಡವರ ಕಿವಿಗಳಲ್ಲಿ ಒಮ್ಮೆಲೆ ಬಂದು ಅವರನ್ನು ದಿಗ್ಭ್ರಮೆಗೊಳಿಸಿತು. ಧರ್ಮರಾಯನ ಸಹಿತವಾಗಿ ಮತ್ತೆ ನಾಲ್ವರು ಕೂಡ ತಬ್ಬಿಬ್ಬಾದರು.
ಕರ್ಣ……. ಕರ್ಣಕಠೋರವಾಗಿ ಇರುವ ಈ ಹೆಸರು ನಮ್ಮ ಮಾತೆಯ ಬಾಯಲ್ಲಿ ಹೇಗೆ? ಏಕೆ ? ಬಂತು…!
ಕ್ಷಣಕಾಲ ಅವರೆಲ್ಲರ ಮುಖ ಗಂಗೆ ಹರಿಯುವ ನೀರಿನ ದಿಕ್ಕಿನತ್ತ ಸದ್ದಿಲ್ಲದೆ ಮುಜುಗರದಿಂದ ಪ್ರಶ್ನಾತೀತ ವಾಯಿತು. ಆ ಕ್ಷಣ… ಒಮ್ಮೆಲೇ
ಅದೋ ಬಂದ…. ಗೋವಿಂದ ಬಂದ…. ಕರೆಯದಿದ್ದರೂ ಮಾನ ರಕ್ಷಣೆಗೆ
ಕುಂತಿಗೆ ಚ್ಯುತಿ ಬರಬಾರದೆಂದು ಒಡನೆಯೇ ಓಡಿಬಂದ “ಗರುಡಧ್ವಜ”.

“ಕರೆಯಲೇ ಬೇಕೆಂಬ ನಿಯಮ ಅವಗಿಲ್ಲ
ಮನದೊಳಗೆ ಮನೆ ಮಾಡಿ ಇರುವವನಲ್ಲ”

ಸೋದರತ್ತೆ ಎಂದಲ್ಲ…
ತನ್ನ ಭಕ್ತರ ಕಣ್ಣೀರು ಧರಣಿಗೆ ತಾಕುವುದರೊಳಗೆ ಬಂದ …. ಧರಣಿಪತಿ

ಧರ್ಮಜನನ್ನ ನೋಡಿ ಇಂತೆಂದ…..
ಯಾರ ಧ್ವನಿ ಯನ್ನು ಸತ್ಯ ಮಾಡಲು ನೀವು ಐವರು ದ್ರೌಪದಿಯನ್ನು ಪತ್ನಿಯಾಗಿ ಸ್ವೀಕರಿಸಿದಿರೋ….
ಯಾವ ಮಾತೆಯ ಆಶೀರ್ವಾದವನ್ನು ಶಿರಸಿ ನಲ್ಲಿ ಧಾರಣೆ ಮಾಡಿ ಇಂದು ಈ ಮಹಾಭಾರತ ಸಂಗ್ರಾಮವನ್ನು ಜಯಿಸಿದಿರೋ…
ಅಂತಹ ಪಾವನೆಯಾದ ಕುಂತಿಯ ಬಾಯಿಂದ ಬಂದ ಈ ಹೆಸರು ಕೇಳಿ ನಿಮ್ಮ ಮುಖಗಳು ಮುಜುಗರಗೊಂಡಿವೆಯೋ…
ಅಂತಹ ನಿಮ್ಮ ಭಾವನೆಗೆ ಧಿಕ್ಕಾರವಿರಲಿ……
ಎಂದವನೇ ತಡಮಾಡದೆ
ಅನಂತ ಕಲ್ಯಾಣ ಗುಣ ಪರಿಪೂರ್ಣ… ಪರಮ ಪಾವನ ಪರಮಾತ್ಮ ಒಡನೆಯೇ ಕುಂತಿಯ ಸೀರೆಯ ಸೆರಗಿನ ತುದಿಯನ್ನು ತನ್ನ ಕೈಯಲ್ಲಿ ಹಿಡಿದು ಲೋಕಕ್ಕೆ ತಿಳಿಯುವಂತೆ ರಮಾಪತಿ ಇಂತೆಂದ….. ಇದೋ ಪರಮಪಾವನೆ ಯಾದ ಲೋಕಕಲ್ಯಾಣಕ್ಕಾಗಿ ತನ್ನನ್ನೇ ಸಮರ್ಪಣೆ ಮಾಡಿದ ಭಗವದ್ಭಕ್ತೆ ಈ ಕುಂತಿಯ ಸೀರೆಯ ಸೆರಗಿನ ತುದಿಯನ್ನು ಕೂಡ ಕೈಯಿಂದ ಮುಟ್ಟಬೇಕಾದರೆ
ಕೋಟಿ ಕೋಟಿ ವರ್ಷಗಳ ತಪಸ್ಸು ಸಿದ್ಧಿಸಿದ ಋಷಿ ಮುನಿಗಳಿಗೂ ಕೂಡ ಅಸಾಧ್ಯ. ನಾನು ಸತ್ಯದಲ್ಲಿ ನೆಲೆಗೊಂಡಿರುವುದರಿಂದ ನನಗೆ ಆ ಯೋಗ್ಯತೆ ಪ್ರಾಪ್ತಿ ಇದೆ.
ಅಂತಹ ಪವಿತ್ರವಾದ ಭಕ್ತಿಯಿಂದ ಲೋಕದಲ್ಲಿ
ಕರ್ಮಯೋಗದಿಂದ ಮನಸ್ಸಿನಲ್ಲಿಯೇ ನಿರಂತರ ನನ್ನನ್ನು ಆರಾಧನೆ ಮಾಡಿದ ಈ ಕುಂತಿಯ ಯೋಗ್ಯತೆ
ಅನುಮಾನಿಸಿದ ಪಾಂಡವರೇ ನಿಮ್ಮ ಕೆಲವು ಪುಣ್ಯಗಳು ಇದರಿಂದ ಕ್ಷೀಣವಾಯಿತು.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠ ದೈವಜ್ಞ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 8548998564

ಲೋಕದ ಲಜ್ಜೆಗೆ ಹೆದರಿದ ಕನ್ಯೆಯಾದ ಕುಂತಿಗೆ ಸಾಕ್ಷಾತ್ ಸೂರ್ಯದೇವ ರಿಂದ ದುರ್ವಾಸರ ಮಂತ್ರದಿಂದ ಪ್ರಸಾದಿತ ವಾದ ಕರ್ಣನನ್ನು ಗಂಗೆಯಲ್ಲಿ ತೇಲಿಬಿಡುವಾಗ ……. ಪಾಂಡು ಚಕ್ರವರ್ತಿಯ ಮರಣದ ನಂತರ ಚಿಕ್ಕವರಾದ ನಿಮ್ಮನ್ನು ಸಾಕಿ ಸಲಹುವಲ್ಲಿ ಮಾಡಿದ ಪ್ರತಿಯೊಂದು ತ್ಯಾಗದಲ್ಲಿ….. ಪಂಚಪಾಂಡವರನ್ನು ಲೋಕದಲ್ಲಿ ಧರ್ಮಾತ್ಮರು ಎನಿಸಿಕೊಳ್ಳುವಲ್ಲಿ…… ಅರಣ್ಯ ವಾಸದಲ್ಲಿ ನೀವು ಇರುವಾಗ ವಿದುರನ ಮನೆಯಲ್ಲಿ ಏಕಾಂಗಿಯಾಗಿ ಕಳೆದ ಕ್ಷಣ…. ಹೀಗೆ ಅವಳ ಜೀವನದ ಪ್ರತಿಯೊಂದು ಕಷ್ಟದ ಕ್ಷಣಗಳು ಕೂಡ ನಿತ್ಯ ನಿರಂತರ ನನ್ನ ನಾಮಸಂಕೀರ್ತನೆಯನ್ನು ಮನದೊಳಗೆ ಮಾಡುತ್ತಾ ತನ್ನ ಕರ್ಮದಿಂದ ತನ್ನ ಬದುಕನ್ನೇ ನನಗೆ ಕೃಷ್ಣಾರ್ಪಣ ಮಾಡಿದ ಈ ತಾಯಿಯ ಯೋಗ್ಯತೆ ಮೂರು ಲೋಕದೊಳಗೆ ಯಾರು ಬಲ್ಲರು…..

ಈ ಒಂದು ಮಾತು ಸಾಕಿತ್ತು.
ಕ್ಷಣಕಾಲ ಕುಂತಿಯ ಕಣ್ಣೀರು ಪರಮಾತ್ಮನ ಪಾದಕ್ಕೆ ಪಾದ್ಯವಾಯಿತು. ಸಾರ್ಥಕವಾಯಿತು ಕುಂತಿಯ ಜೀವನ.. ಹಗಲಿರುಳು ಕೃಷ್ಣನನ್ನೇ ನೆನೆದದ್ದು ಈ ದಿನಕ್ಕೆ ಸಾರ್ಥಕವಾಯಿತು.
ಬದುಕು ಪರಿಪೂರ್ಣ ವಾಯಿತು.
ಹೌದು ಒಮ್ಮೊಮ್ಮೆ ನಾವು ಮಾಡಿದ ಒಳ್ಳೆಯ ಕೆಲಸಕ್ಕೆ ಫಲ ಪರಮಾತ್ಮ ಯಾವ ರೀತಿಯಲ್ಲಿ ನಮಗೆ ಕೊಡುತ್ತಾನೆ ಎನ್ನುವುದು ತಿಳಿಯುವುದಿಲ್ಲ.
ಕುಂತಿಗೆ ದೇವರು ಕೊಟ್ಟ ಒಂದೇ ಒಂದು ಮಾತಿನ ಪಾರಿತೋಷಕ ಅವಳ ಮಾನಸ ಪೂಜೆಯ ಪರಿಪೂರ್ಣತೆಯನ್ನು ತಂದು ಕೊಟ್ಟದ್ದರಲ್ಲಿ ಸಂದೇಹವಿಲ್ಲ.
ಆಡಂಬರದ -ತೋರಿಕೆಯ ಪೂಜೆ ಮಾತ್ರ ಪೂಜೆಯಲ್ಲ.
ಮಂತ್ರ ಅಭಿಷೇಕ ಮಂಗಳಾರತಿಗಳು ಮಾತ್ರ ಪೂಜೆಯಲ್ಲ

*ಕೃಷ್ಣಾಯ ವಾಸುದೇವಾಯ
ಹರಯೇ ಪರಮಾತ್ಮನೇ
ಪ್ರಣತ ಕ್ಲೇಶನಾಶಾಯ
ಗೋವಿಂದಾಯ ನಮೋ ನಮಃ*

ನಾನು ವಿಧವೆ; ನಾನು ಮಹಿಳೆ ;ನನಗಾವ ಪೂಜೆ ;ನನಗೆ ಎಲ್ಲಿ ದೇವರು ನನಗೆ ಎಲ್ಲಿಯ ಸೌಭಾಗ್ಯ…. ಈ ರೀತಿಯ
ಮನಸ್ಥಿತಿಯನ್ನು ಬಿಟ್ಟುಬಿಡಿ. ಭಗವಂತನನ್ನು ಒಲಿಸಲು ಶ್ರದ್ಧೆ ; ನಿಷ್ಕಲ್ಮಶವಾದ ಭಕ್ತಿ ಮತ್ತು ಜ್ಞಾನವೇ
ಪ್ರಧಾನವಾದದ್ದು.

ಕಲ್ಪದ ಅಂತ್ಯಕಾಲದ ತನಕ ತಪಸ್ಸು ಮಾಡಿದ ಭಾಗವತೋತ್ತಮರಿಗೂ ದರ್ಶನಕ್ಕೂ ದುರ್ಲಭವಾದ – ಬಂಧನಕ್ಕೂ ಮೋಕ್ಷಕ್ಕೂ ಕಾರಣನಾದ ಪುರುಷೋತ್ತಮನ ಮುಖದಲ್ಲಿ ವಿಧವೆಯೊಬ್ಬಳ ಮಾನಸಿಕ ಅನುಷ್ಠಾನದ ಶಕ್ತಿಗೆ ಸಿಕ್ಕ ಪಾರಿತೋಷಕ ಕ್ಕೆ
ಎಣೆಯುಂಟೆ.
*ಪ್ರತಿಯೊಂದು ದೇವರ ವಿಷಯದಲ್ಲಿ ಸಂಬಂಧಪಟ್ಟ ಆಚರಣೆಗಳು ಭಕ್ತಿ ಜ್ಞಾನವನ್ನು ಹೊಂದುವುದಕ್ಕೆ ಮತ್ತು ದೇವರ ಅನುಗ್ರಹ ಪಡೆಯುವುದಕ್ಕೆ ಹೊರತು
ಭಯಪಟ್ಟು ಕೊಳ್ಳುವುದಕ್ಕೆ ಅಲ್ಲ*

ಕೆಲವೊಮ್ಮೆ ನಮ್ಮ ಒಳಗಿನಿಂದಲೇ ಮೂಡಬಹುದಾದ ಸಚ್ಚಿಂತನೆಗಳೇ ನಮ್ಮ ಜೀವನದ ಮಾರ್ಗದರ್ಶಕ ಗಳಾಗಬಹುದು
ಪ್ರಕೃತಿಯಲ್ಲಿನ ಪ್ರತಿಯೊಂದು ಜೀವ ಜಡದಲ್ಲಿ ಚೈತನ್ಯದ ರೂಪದಲ್ಲಿ ಒಮ್ಮೊಮ್ಮೆ ನಮಗೆ ಕೆಲವು ಸೂಚನೆಗಳನ್ನು ನೀಡುತ್ತಲೇ ಇರುತ್ತವೆ.ಎಚ್ಚರದಿಂದ ಗಮನಿಸಿದರೆ ಪ್ರತಿಯೊಂದು ಕೂಡ ಪರಮಾತ್ಮನ ಮಾತುಗಳೇ ಆಗಿವೆ. ಗಮನಿಸುವ ಕಣ್ಣುಗಳನ್ನು ಮಾತ್ರ ನಾವು ತೆರೆಯಬೇಕಾಗಿದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠ ದೈವಜ್ಞ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 8548998564

ನ ಜಾನೇ ಕರ್ಮ ಯತ್ಕಿಂಚಿತ್ ನಾಪಿ ಲೌಕಿಕ ವೈದಿಕೇ
ನ ನಿಷೇಧ ವಿಧೀ ವಿಷ್ಣೋಃ ತವ ದಾಸೋಸ್ಮಿ ಕೇವಲಮ್ ॥
ದೇವರಲ್ಲಿ ಪರಿಪೂರ್ಣ ಭಕ್ತಿ ಪ್ರೀತಿ ಇರುವವರಿಗೆ ವಿಧಿ ನಿಷೇಧ ಗಳು ಎಲ್ಲಿ…??!
ಅವರ ಎಲ್ಲ ಲೌಕಿಕ ಮತ್ತು ಆಧ್ಯಾತ್ಮ ಕೆಲಸ ಕಾರ್ಯಗಳು ದೇವರ ಭಕ್ತಿಗಾಗಿ. ಅವರ ಜೀವನವೇ ಭಗವಂತನಿಗಾಗಿ…

ಮನೆಯಲ್ಲಿ ನಿತ್ಯನೈಮಿತ್ತಿಕ ದೈವಿಕ ಆರಾಧನೆಗೆ ಸಂಬಂಧಪಟ್ಟ ಜಿಜ್ಞಾಸೆ ಗಳಿದ್ದರೆ ಪ್ರಶ್ನೋತ್ತರದ ಮೂಲಕ ಪರಿಹಾರ ಕಂಡುಕೊಳ್ಳೋಣ.
ಮುಂದುವರೆಯುವುದು

Tags: #Saaksha TVhomeLampwidows
ShareTweetSendShare
Join us on:

Related Posts

ಮಧ್ಯಪ್ರಾಚ್ಯ ಉದ್ವಿಗ್ನತೆ ಪರಿಣಾಮ: ತೈಲ ದರ ಬ್ಯಾರೆಲ್‌ಗೆ $120ಕ್ಕೆ ಏರಿಕೆ

ಮಧ್ಯಪ್ರಾಚ್ಯ ಉದ್ವಿಗ್ನತೆ ಪರಿಣಾಮ: ತೈಲ ದರ ಬ್ಯಾರೆಲ್‌ಗೆ $120ಕ್ಕೆ ಏರಿಕೆ

by Shwetha
March 10, 2026
0

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಒಂದೇ ದಿನದಲ್ಲಿ ಕಚ್ಚಾ ತೈಲದ ಬೆಲೆ ಸುಮಾರು 29% ಏರಿಕೆ ಕಂಡಿದ್ದು, ಜಾಗತಿಕ...

ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆ ಭಾರತೀಯರ ರಕ್ಷಣೆಗೆ ಸರ್ಕಾರ ಬದ್ಧ: ಜೈಶಂಕರ್

ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆ ಭಾರತೀಯರ ರಕ್ಷಣೆಗೆ ಸರ್ಕಾರ ಬದ್ಧ: ಜೈಶಂಕರ್

by Shwetha
March 10, 2026
0

ಇಸ್ರೇಲ್–ಅಮೆರಿಕಾ ಮತ್ತು ಇರಾನ್ ನಡುವಿನ ಸಂಘರ್ಷದ ಹಿನ್ನೆಲೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭಾರತೀಯರ ಸುರಕ್ಷತೆ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ. ಅರಬ್ ರಾಷ್ಟ್ರಗಳಲ್ಲಿ ವಾಸಿಸುತ್ತಿರುವ ಭಾರತೀಯರ...

ದಾವಣಗೆರೆ ದಕ್ಷಿಣ ಟಿಕೆಟ್ ದಂಗಲ್ : ಎಲ್ಲಿಂದಲೋ ಬಂದ ಜಮೀರ್ ಗೆ ದಾವಣಗೆರೆ ಬಗ್ಗೆ ಮಾತಾಡಲು ಹಕ್ಕಿಲ್ಲ ಸಚಿವ ಮಲ್ಲಿಕಾರ್ಜುನ್ ಆಕ್ರೋಶ

ದಾವಣಗೆರೆ ದಕ್ಷಿಣ ಟಿಕೆಟ್ ದಂಗಲ್ : ಎಲ್ಲಿಂದಲೋ ಬಂದ ಜಮೀರ್ ಗೆ ದಾವಣಗೆರೆ ಬಗ್ಗೆ ಮಾತಾಡಲು ಹಕ್ಕಿಲ್ಲ ಸಚಿವ ಮಲ್ಲಿಕಾರ್ಜುನ್ ಆಕ್ರೋಶ

by Shwetha
March 10, 2026
0

ಕರ್ನಾಟಕ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಅಧಿಕಾರ ಹಂಚಿಕೆ ಹಾಗೂ ನಾಯಕತ್ವದ ವಿಚಾರವಾಗಿ ನಡೆಯುತ್ತಿರುವ ಮುಸುಕಿನ ಗುದ್ದಾಟಗಳ ನಡುವೆಯೇ, ಇದೀಗ ನಾಯಕರ ನಡುವಿನ ಬಹಿರಂಗ ಕಚ್ಚಾಟ ತಾರಕಕ್ಕೇರಿದೆ. ಸಚಿವರು...

ಎಚ್ಚರಿಕೆ : ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ ನಡೆಸಿದರೆ ಕಠಿಣ ಜೈಲು ಶಿಕ್ಷೆ!

ಶಿಕ್ಷಣಕ್ಕೆ ಮೊದಲ ಆದ್ಯತೆ: ವರ್ಗಾವಣೆಗೊಂಡ ಶಿಕ್ಷಕರನ್ನು ಗಣತಿ ಕಾರ್ಯಗಳಿಗೆ ಬಳಸದಿರಲು ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಆದೇಶ

by Shwetha
March 10, 2026
0

ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರುವ ಹಾಗೂ ಮಕ್ಕಳ ಭವಿಷ್ಯವನ್ನು ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ದಿಟ್ಟ ಹೆಜ್ಜೆಯನ್ನಿಟ್ಟಿದೆ. 2024-25ನೇ ಸಾಲಿನಲ್ಲಿ ವರ್ಗಾವಣೆಗೊಂಡಿರುವ ಸರ್ಕಾರಿ...

ಮಾ.11ರಂದು ಫ್ರೀಡಂ ಪಾರ್ಕ್‌ನಲ್ಲಿ ವಿದ್ಯುತ್ ಗುತ್ತಿಗೆದಾರರ ಬೃಹತ್ ಪ್ರತಿಭಟನೆ

ಮಾ.11ರಂದು ಫ್ರೀಡಂ ಪಾರ್ಕ್‌ನಲ್ಲಿ ವಿದ್ಯುತ್ ಗುತ್ತಿಗೆದಾರರ ಬೃಹತ್ ಪ್ರತಿಭಟನೆ

by Shwetha
March 10, 2026
0

ಕರ್ನಾಟಕ ರಾಜ್ಯದ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾರ್ಚ್ 11ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಇದರ ಭಾಗವಾಗಿ ಬೆಂಗಳೂರಿನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram