Vijay Deverakonda : ಮಿಸ್ಟರ್ ವಿಜಯ್, ನೀನು ಕೊಂಡ ಅಲ್ಲ ಅನಕೊಂಡ
ಮಿಸ್ಟರ್ ವಿಜಯ್, ನೀನು ಕೊಂಡ ಅಲ್ಲ ಅನಕೊಂಡ. ಅನಕೊಂಡ ರೀತಿಯಲ್ಲೇ ಮಾತನಾಡುತ್ತೀಯಾ. ವಿನಾಶಕಾಲೆ ವಿಪರೀತಬುದ್ಧಿ ಎನ್ನುತ್ತಾರೆ. ಆದ್ರೂ ನಾಶವಾಗುವ ಸಮಮದಲ್ಲಿಯೇ ಬಾಯಿಂದ ಇಂತಹ ಮಾತುಗಳೇ ಬರುತ್ತವೆ ಎಂದು ನಟ ವಿಜಯ್ ದೇವರಕೊಂಡ ಮೇಲೆ ಥಿಯೇಟರ್ ಮಾಲೀಕರು ಫೈರ್ ಆಗಿದ್ದಾರೆ.
ಭಾರಿ ನಿರೀಕ್ಷೆಗಳೊಂದಿಗೆ ರಿಲೀಸ್ ಆದ ವಿಜಯ್ ದೇವರಕೊಂಡ, ಪುರಿ ಜಗನ್ನಾಥ್ ಕಾಂಬೋದ ಲೈಗರ್ ಸಿನಿಮಾ ಫ್ಲಾಪ್ ಟಾಕ್ ಪಡೆದುಕೊಂಡಿದೆ. ಇದಕ್ಕೆ ಸಿನಿಮಾ ರಿಲೀಸ್ ಗೂ ಮುನ್ನಾ ವಿಜಯ್ ದೇವರಕೊಂಡ ನೀಡಿದ ಹೇಳಿಕೆಗಳೇ ಕಾರಣ ಎಂದು ಥಿಯೇಟರ್ ಮಾಲೀಕರು ಅಭಿಪ್ರಾಯಪಡುತ್ತಿದ್ದಾರೆ.

ಮುಂಬೈನ ಥಿಯೇಟರ್ ಮಾಲೀಕರೊಬ್ಬರು ನಟ ವಿಜಯ್ ದೇವರಕೊಂಡ ಮೇಲೆ ಫೈರ್ ಆಗಿದ್ದಾರೆ. ಒಂದು ಇಂಟರ್ ವಿವ್ಯೂನಲ್ಲಿ ನಟ ವಿಜಯ್ ಮಾತನಾಡುತ್ತಾ ನನ್ನ ಸಿನಿಮಾವನ್ನು ಬಾಯ್ ಕಾಟ್ ಮಾಡಿಕೊಳ್ಳಿ ಅಂತಾ ಹೇಳಿದ್ರು. ಆದ್ರೆ ಓಟಿಟಿ ಯಲ್ಲೂ ಕೂಡ ಈ ಸಿನಿಮಾವನ್ನು ಯಾರೂ ನೋಡಲ್ಲ. ನಿನ್ನ ನಡುವಳಿಕೆಯಿಂದಲೇ ನಾವು ನಷ್ಟ ಅನುಭವಿಸುತ್ತಿದ್ದೇವೆ. ಅಡ್ವಾನ್ಸ್ ಬುಕಿಂಗ್ ಮೇಲೆ ಅದರ ಎಫೆಕ್ಟ್ ಬಿದ್ದಿದೆ. ಮಿಸ್ಟರ್ ವಿಜಯ್, ನೀನು ಕೊಂಡ ಅಲ್ಲ ಅನಕೊಂಡ. ಅನಕೊಂಡ ರೀತಿಯಲ್ಲೇ ಮಾತನಾಡುತ್ತೀಯಾ. ವಿನಾಶಕಾಲೆ ವಿಪರೀತಬುದ್ಧಿ ಎನ್ನುತ್ತಾರೆ. ಆದ್ರೂ ನಾಶವಾಗುವ ಸಮಮದಲ್ಲಿಯೇ ಬಾಯಿಂದ ಇಂತಹ ಮಾತುಗಳೇ ಬರುತ್ತವೆ.
ವಿಜಯ್ ನೀನು ತುಂಬಾ ಅಹಂಕಾರಿ. ಇಷ್ಟ ಇದ್ದರೇ ನೋಡಿ, ಇಷ್ಟವಿಲ್ಲದಿದ್ದೇ ನೋಡಬೇಡಿ ಅಂತಾ ಹೇಳುತ್ತೀಯಾ, ಅದರ ಎಫೆಕ್ಟ್ ನಿನಗೆ ಗೊತ್ತಿಲ್ಲವೇ. ಅಮಿರ್ ಖಾನ್, ತಾಪ್ಸಿ, ಅಕ್ಷಯ್ ಕುಮಾರ್ ಸಿನಿಮಾಗಳು ಹೇಗೆ ಧೂಳಿಪಟವಾದವು ಅಂತಾ ನಿನಗೆ ಗೊತ್ತಿಲ್ಲವೇ? ಲೈಗರ್ ಸಿನಿಮಾದ ಮೇಲೆ ಅದೆಷ್ಟೋ ಆಸೆಗಳನ್ನು ಇಟ್ಟುಕೊಂಡಿದ್ದೆ. ಆದ್ರೆ ನೀನು ಬಾಯಿಗೆ ಬಂದಂತೆ ಮಾತನಾಡಿದ ಕಾರಣ ನಾವು ನಷ್ಟಕ್ಕೆ ತುತ್ತಾಗಿದ್ದೇವೆ ಎಂದು ಹೇಳಿದ್ದಾರೆ.








