Chitradurga | ಭೀಕರ ರಸ್ತೆ ಅಪಘಾತಕ್ಕೆ ಮೂರು ಬಲಿ
ಚಿತ್ರದುರ್ಗದ ಸೀಬಾರ ಬಳಿ ಘಟನೆ
ಮನೀಷ್, ಸಿಂಚನಾ, ಭೂಮಿಕಾ ಮೃತರು
ಗಿರಿಧರ್, ಕಿರಣ್ ಗಾಯಗೊಂಡವರು
ನಿಯಂತ್ರಣ ತಪ್ಪಿ ಲಾರಿಗೆ ಕಾರು ಡಿಕ್ಕಿ
ಚಿತ್ರದುರ್ಗ : ಲಾರಿಗೆ ಕಾರು ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಚಿತ್ರದುರ್ಗ ಚಿಲ್ಲೆಯ ಸೀಬಾರ ಬಳಿ ನಡೆದಿದೆ.
ಮನೀಷ್, ಸಿಂಚನಾ, ಭೂಮಿಕಾ ಮೃತ ದುರ್ದೈವಿಗಳಾಗಿದ್ದಾರೆ.
ಇವರನ್ನ ಬೆಂಗಳೂರಿನ ರಾಜಾಜಿನಗರದ ನಿವಾಸಿಗಳು ಎಂದು ಗುರುತಿಸಲಾಗಿದೆ.

ಇನ್ನ ಘಟನೆಯಲ್ಲಿ ಕನಗುಮುತ್ತು, ಗಿರಿಧರ್ ಹಾಗೂ ಕಿರಣ್ ಎಂಬುವವರಿಗೆ ಗಂಭೀರವಾದ ಗಾಯಗಳಾಗಿವೆ.
ನಿನ್ನೆ ರಾತ್ರಿ 9.30 ರ ಸುಮಾರಿಗೆ ಈ ಘಟನೆ ನಡೆದಿದೆ.
ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕ್ಕೆ ಡಿಕ್ಕಿಯಾಗಿ ಲಾರಿಗೆ ಗುದ್ದಿದೆ.
ಪರಿಣಾಮ ಮೂವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಇನ್ನು ಗಾಯಾಗಳನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.








