ಹಿಮಾಲಯದಲ್ಲಿ ದಾರಿ ತಪ್ಪಿದ ಹಂಗೇರಿ ಚಾರಣಿಗನನ್ನ ರಕ್ಷಿಸಿದ ಭಾರತೀಯ ಸೇನೆ….
ಹಿಮಾಲಯದಲ್ಲಿ ದಾರಿ ತಪ್ಪಿದ ಹಂಗೇರಿ ದೇಶದ ಚಾರಣಿಗನನ್ನ ಭಾರತೀಯ ಸೇನೆ ರಕ್ಷಿಸಿದೆ.
ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಉಮಾಸಿ ಪಾಸ್‌ನಲ್ಲಿ ಸುಮಾರು 30 ಗಂಟೆಗಳ ಹುಡುಕಾಟದ ನಂತರ ಟ್ರೆಕ್ಕಿಯನ್ನ ಪತ್ತೆ ಹಚ್ಚಿ, ರಕ್ಷಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಉಧಮ್‌ಪುರಕ್ಕೆ ಕರೆದೊಯ್ಯಲಾಗಿದೆ.
ಭಾರತೀಯ ಸೇನೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಹಂಗೇರಿಯ ಪ್ರಜೆ ಅಕ್ಕೋಸ್ ವರ್ಮ್ಸ್ ನ್ನ ಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆ ಗುರುತಿಸಿ ರಕ್ಷಿಸಿದೆ. ಹಿಮಾಲಯದ ಉಮಾಸಿ ಪಾಸ್‌ನಲ್ಲಿ ದಾರಿ ತಪ್ಪಿದ್ದಾರೆ ಎಂದು ಹೇಳಲಾಗುತ್ತದೆ. ಐಎಎಫ್ ಅವರನ್ನು ಚಿಕಿತ್ಸೆಗಾಗಿ ಉಧಂಪುರಕ್ಕೆ ಸ್ಥಳಾಂತರಿಸಲಾಗಿದೆ.
ಕಿಶ್ತ್ವಾರ್‌ನ ದುಲ್‌ನಿಂದ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸೇನೆ ವಿವರಿಸಿದೆ. ಕಿಶ್ತ್ವಾರ್-ಝನ್ಸ್ಕಾರ್ ನಡುವೆ ಉಮಾಸಿ ಪಾಸ್ ಇದೆ.