ADVERTISEMENT
Wednesday, March 18, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಪ್ರಾಣಪ್ರತಿಷ್ಠೆಯಿಂದ ವಿಸರ್ಜನೆಯವರೆಗೂ ಸಂಪೂರ್ಣ ಶ್ರೀ ಗಣೇಶ ಪೂಜೆ ಅರ್ಥಪೂರ್ಣ ಆಚರಣೆಯ ಮಾಹಿತಿ..

‘ಹೇ ಶ್ರೀ ಸಿದ್ಧಿವಿನಾಯಕಾ, ನಿನ್ನ ಪೂಜೆಯು ನನ್ನಿಂದ ಭಾವಪೂರ್ಣವಾಗಿ ಆಗಲಿ. ಪೂಜೆ ಮಾಡುವಾಗ ನನ್ನ ಮನಸ್ಸು ಸತತವಾಗಿ ನಿನ್ನ ಚರಣಗಳಲ್ಲಿ ಲೀನವಾಗಿರಲಿ. ನೀನು ಪ್ರತ್ಯಕ್ಷ ನನ್ನೆದುರು ಆಸೀನನಾಗಿ? ಮತ್ತು ನಾನು ನಿನ್ನ ಪೂಜೆ ಮಾಡು ತ್ತಿದ್ದೇನೆ, ಎಂಬ ಭಾವವು ನನ್ನಲ್ಲಿ ಸತತವಾಗಿರಲಿ. ಪೂಜೆಯಲ್ಲಿ ಬರಬಹುದಾದ ವಿಘ್ನಗಳು ದೂರವಾಗಲಿ. ಪೂಜೆಯಲ್ಲಿನ ಚೈತನ್ಯವು ನನಗೆ ಮತ್ತು ಉಪಸ್ಥಿತರೆಲ್ಲರಿಗೂ ದೊರಕಲಿ.’

Mahesh M Dhandu by Mahesh M Dhandu
September 1, 2022
in Astrology, Newsbeat, ಎಸ್ ಸ್ಪೆಷಲ್, ಜ್ಯೋತಿಷ್ಯ
Ganeshotsava

Ganeshotsava How to bring Shri Ganesha Murthy home saaksha tv

Share on FacebookShare on TwitterShare on WhatsappShare on Telegram

ಪ್ರಾಣಪ್ರತಿಷ್ಠೆಯಿಂದ ವಿಸರ್ಜನೆಯವರೆಗೂ ಸಂಪೂರ್ಣ ಶ್ರೀ ಗಣೇಶ ಪೂಜೆ ಅರ್ಥಪೂರ್ಣ ಆಚರಣೆಯ ಮಾಹಿತಿ..

|| ಅಥ ಪೂಜಾ ಪ್ರಾರಂಭ ||

Related posts

astrology

ಮಾಟ-ಮಂತ್ರ ಕೆಟ್ಟ ಶಕ್ತಿ ಕೆಟ್ಟದೃಷ್ಟಿ ಕಳೆದು ಮನೆಯಲ್ಲಿ ಸುಖ ಶಾಂತಿ ನೆಲೆಸಲು ಅಮವಾಸ್ಯೆ ದಿನ ಹೀಗೆ ಮಾಡಿ

March 18, 2026
ಎಲ್‌ಪಿಜಿ ಗ್ರಾಹಕರೆ ಗಮನಿಸಿ: ಗ್ಯಾಸ್ ಸಬ್ಸಿಡಿ ಪಡೆಯಲು ಆಧಾರ್ ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯ

ಎಲ್‌ಪಿಜಿ ಗ್ರಾಹಕರೆ ಗಮನಿಸಿ: ಗ್ಯಾಸ್ ಸಬ್ಸಿಡಿ ಪಡೆಯಲು ಆಧಾರ್ ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯ

March 18, 2026

ಪೂಜೆಯ ಆರಂಭದಲ್ಲಿ ಮಾಡಬೇಕಾದ ಪ್ರಾರ್ಥನೆ

‘ಹೇ ಶ್ರೀ ಸಿದ್ಧಿವಿನಾಯಕಾ, ನಿನ್ನ ಪೂಜೆಯು ನನ್ನಿಂದ ಭಾವಪೂರ್ಣವಾಗಿ ಆಗಲಿ. ಪೂಜೆ ಮಾಡುವಾಗ ನನ್ನ ಮನಸ್ಸು ಸತತವಾಗಿ ನಿನ್ನ ಚರಣಗಳಲ್ಲಿ ಲೀನವಾಗಿರಲಿ. ನೀನು ಪ್ರತ್ಯಕ್ಷ ನನ್ನೆದುರು ಆಸೀನನಾಗಿ? ಮತ್ತು ನಾನು ನಿನ್ನ ಪೂಜೆ ಮಾಡು ತ್ತಿದ್ದೇನೆ, ಎಂಬ ಭಾವವು ನನ್ನಲ್ಲಿ ಸತತವಾಗಿರಲಿ. ಪೂಜೆಯಲ್ಲಿ ಬರಬಹುದಾದ ವಿಘ್ನಗಳು ದೂರವಾಗಲಿ. ಪೂಜೆಯಲ್ಲಿನ ಚೈತನ್ಯವು ನನಗೆ ಮತ್ತು ಉಪಸ್ಥಿತರೆಲ್ಲರಿಗೂ ದೊರಕಲಿ.’

ಕುಂಕುಮತಿಲಕ ಹಚ್ಚುವುದು: ಪೂಜಕನು (ಯಜಮಾನನು) ಮೊದಲು ತನಗೆ ಕುಂಕುಮದ ತಿಲಕವನ್ನು ಹಚ್ಚಿಕೊಳ್ಳಬೇಕು.

ಆಚಮನ ಮಾಡುವುದು

ಬಲಗೈಯಿಂದ ಆಚಮನದ ಮುದ್ರೆ ಮಾಡಬೇಕು. ನಂತರ ಎಡಗೈಯಿಂದ ಉದ್ಧರಣೆಯಿಂದ ನೀರನ್ನು ಬಲಗೈಯ ಅಂಗೈಯಲ್ಲಿ (ಮುದ್ರೆಯ ಸ್ಥಿತಿಯಲ್ಲಿಯೇ) ತೆಗೆದುಕೊಳ್ಳಬೇಕು ಮತ್ತು ಶ್ರೀವಿಷ್ಣುವಿನ ಪ್ರತಿಯೊಂದು ಹೆಸರಿನ ಕೊನೆಗೆ ‘ನಮಃ’ ಎಂಬ ಶಬ್ದವನ್ನು ಉಚ್ಚರಿಸಿ ಆ ನೀರನ್ನು ಕುಡಿಯಬೇಕು

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ  ತಪ್ಪದೆ ಕರೆ ಮಾಡಿ 85489 98564

೧. ಶ್ರೀ ಕೇಶವಾಯ ನಮಃ | ೨. ಶ್ರೀ ನಾರಾಯಣಾಯ ನಮಃ | ೩. ಶ್ರೀ ಮಾಧವಾಯ ನಮಃ |

ನಾಲ್ಕನೇ ಹೆಸರನ್ನು ಉಚ್ಚರಿಸುವಾಗ ‘ನಮಃ’ ಎಂಬ ಶಬ್ದದ ಸಮಯದಲ್ಲಿ ಬಲಗೈಯಿಂದ ಹರಿವಾಣದಲ್ಲಿ ನೀರನ್ನು ಬಿಡಬೇಕು.

೪. ಶ್ರೀ ಗೋವಿಂದಾಯ ನಮಃ |
ಪೂಜಕನು ಕೈಯನ್ನು ಒರೆಸಿಕೊಂಡು ನಮಸ್ಕಾರದ ಮುದ್ರೆ ಯಲ್ಲಿ ಎದೆಯ ಬಳಿ ಕೈಗಳನ್ನು ಜೋಡಿಸಬೇಕು ಮತ್ತು ಶರಣಾಗತ ಭಾವದಿಂದ ಮುಂದಿನ ಹೆಸರುಗಳನ್ನು ಉಚ್ಚರಿಸಬೇಕು.

೫. ಶ್ರೀ ವಿಷ್ಣವೇ ನಮಃ | ೬. ಶ್ರೀ ಮಧುಸೂದನಾಯ ನಮಃ | ೭. ಶ್ರೀ ತ್ರಿವಿಕ್ರಮಾಯ ನಮಃ | ೮. ಶ್ರೀ ವಾಮನಾಯ ನಮಃ | ೯. ಶ್ರೀ ಶ್ರೀಧರಾಯ ನಮಃ | ೧೦. ಶ್ರೀ ಹೃಷಿಕೇಶಾಯ ನಮಃ | ೧೧. ಶ್ರೀ ಪದ್ಮನಾಭಾಯ ನಮಃ | ೧೨. ಶ್ರೀ ದಾಮೋದರಾಯ ನಮಃ | ೧೩. ಶ್ರೀ ಸಂಕರ್ಷಣಾಯ ನಮಃ | ೧೪. ಶ್ರೀ ವಾಸುದೇವಾಯ ನಮಃ | ೧೫. ಶ್ರೀ ಪ್ರದ್ಯುಮ್ನಾಯ ನಮಃ | ೧೬. ಶ್ರೀ ಅನಿರುದ್ಧಾಯ ನಮಃ | ೧೭. ಶ್ರೀ ಪುರುಷೋತ್ತಮಾಯ ನಮಃ | ೧೮. ಶ್ರೀ ಅಧೋಕ್ಷಜಾಯ ನಮಃ | ೧೯. ಶ್ರೀ ನಾರಸಿಂಹಾಯ ನಮಃ | ೨೦. ಶ್ರೀ ಅಚ್ಯುತಾಯ ನಮಃ | ೨೧. ಶ್ರೀ ಜನಾರ್ದನಾಯ ನಮಃ | ೨೨. ಶ್ರೀ ಉಪೇಂದ್ರಾಯ ನಮಃ | ೨೩. ಶ್ರೀ ಹರಯೇ ನಮಃ | ೨೪. ಶ್ರೀ ಶ್ರೀಕೃಷ್ಣಾಯ ನಮಃ |

ಪುನಃ ಆಚಮನ ಮಾಡಿ ೨೪ ಹೆಸರುಗಳನ್ನು ಹೇಳಬೇಕು. ನಂತರ ಪಂಚಪಾತ್ರೆಯಲ್ಲಿನ ಎಲ್ಲ ನೀರನ್ನು ಹರಿವಾಣದಲ್ಲಿ ಸುರಿಯಬೇಕು ಮತ್ತು ಎರಡೂ ಕೈಗಳನ್ನು ಒರೆಸಿ ಎದೆಯ ಬಳಿ ನಮಸ್ಕಾರದ ಮುದ್ರೆಯಲ್ಲಿ ಕೈಜೋಡಿಸಬೇಕು.

ದೇವತಾಸ್ಮರಣ

ಶ್ರೀಮನ್ಮಹಾಗಣಾಧಿಪತಯೇ ನಮಃ | ಅರ್ಥ: ಗಣಗಳ ನಾಯಕನಾದ ಶ್ರೀ ಗಣಪತಿಗೆ ನಾನು ನಮಸ್ಕರಿಸುತ್ತೇನೆ.

ಇಷ್ಟದೇವತಾಭ್ಯೋ ನಮಃ | ಅರ್ಥ: ನನ್ನ ಆರಾಧ್ಯ ದೇವತೆಗೆ ನಾನು ನಮಸ್ಕರಿಸುತ್ತೇನೆ.

ಕುಲದೇವತಾಭ್ಯೋ ನಮಃ | ಅರ್ಥ: ಕುಲದೇವತೆಗೆ ನಾನು ನಮಸ್ಕರಿಸುತ್ತೇನೆ.

ಗ್ರಾಮದೇವತಾಭ್ಯೋ ನಮಃ | ಅರ್ಥ: ಗ್ರಾಮದೇವತೆಗೆ ನಾನು ನಮಸ್ಕರಿಸುತ್ತೇನೆ.

ಸ್ಥಾನದೇವತಾಭ್ಯೋ ನಮಃ | ಅರ್ಥ: (ಇಲ್ಲಿನ) ಸ್ಥಾನದೇವತೆಗೆ ನಾನು ನಮಸ್ಕರಿಸುತ್ತೇನೆ.

ವಾಸ್ತುದೇವತಾಭ್ಯೋ ನಮಃ | ಅರ್ಥ: (ಇಲ್ಲಿನ) ವಾಸ್ತುದೇವತೆಗೆ ನಾನು ನಮಸ್ಕರಿಸುತ್ತೇನೆ.

ಆದಿತ್ಯಾದಿನವಗ್ರಹದೇವತಾಭ್ಯೋ ನಮಃ | ಅರ್ಥ: ಸೂರ್ಯಾದಿ ಒಂಬತ್ತು ಗ್ರಹದೇವತೆಗಳಿಗೆ ನಾನು ನಮಸ್ಕರಿಸುತ್ತೇನೆ.

ಸರ್ವೇಭ್ಯೋ ದೇವೇಭ್ಯೋ ನಮಃ | ಅರ್ಥ: ಎಲ್ಲ ದೇವರಿಗೆ ನಾನು ನಮಸ್ಕರಿಸುತ್ತೇನೆ.

ಸರ್ವೇಭ್ಯೋ ಬ್ರಾಹ್ಮಣೇಭ್ಯೋ ನಮೋ ನಮಃ | ಅರ್ಥ: ಎಲ್ಲ ಬ್ರಾಹ್ಮಣರಿಗೆ (ಬ್ರಹ್ಮನನ್ನು ತಿಳಿದಿರುವವರಿಗೆ) ನಾನು ನಮಸ್ಕರಿಸುತ್ತೇನೆ.

ಅವಿಘ್ನಮಸ್ತು| ಅರ್ಥ: ಎಲ್ಲ ಸಂಕಟಗಳ ನಾಶವಾಗಲಿ.

‘ದೇಶಕಾಲ’ ಮತ್ತು ‘ಸಂಕಲ್ಪ’

‘ದೇಶಕಾಲ’ ಉಚ್ಚರಿಸಿದ ನಂತರ ‘ಸಂಕಲ್ಪ’ವನ್ನು ಉಚ್ಚರಿಸಬೇಕಾಗಿರುತ್ತದೆ.

ದೇಶಕಾಲ: ಪೂಜಕನು ತನ್ನ ಎರಡೂ ಕಣ್ಣುಗಳಿಗೆ ನೀರನ್ನು ಹಚ್ಚಿ ಮುಂದಿನ ‘ದೇಶಕಾಲ’ವನ್ನು ಹೇಳಬೇಕು.

ಶ್ರೀಮದ್ಭಗವತೋ ಮಹಾಪುರುಷಸ್ಯ ವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ ಅದ್ಯ ಬ್ರಹ್ಮಣೋ ದ್ವಿತೀಯೇ ಪರಾರ್ಧೇ ವಿಷ್ಣುಪದೇ ಶ್ರೀಶ್ವೇತವಾರಾಹಕಲ್ಪೇ ವೈವಸ್ವತಮನ್ವಂತರೇ ಅಷ್ಟಾವಿಂಶತಿತಮೇ ಯುಗೇ ಯುಗಚತುಷ್ಕೇ ಕಲಿಯುಗೇ ಪ್ರಥಮಚರಣೇ ಜಮ್ಬುದ್ವೀಪೇ ಭರತವರ್ಷೇ ಭರತಖಂಡೇ ದಕ್ಷಿಣಪಥೇ ರಾಮಕ್ಷೇತ್ರೇ ಬೌದ್ಧಾವತಾರೇ ದಣ್ಡಕಾರಣ್ಯೇ ದೇಶೇ ಗೋದಾವರ್ಯಾಃ ದಕ್ಷಿಣೇ ತೀರೇ ಶಾಲಿವಾಹನ ಶಕೇ ಅಸ್ಮಿನ್ ವರ್ತಮಾನೇ ವ್ಯಾವಹಾರಿಕೇ ಶುಭಕೃತ್ ನಾಮ ಸಂವತ್ಸರೇ ದಕ್ಷಿಣಾಯನೇ ವರ್ಷಾ ಋತೌ ಭಾದ್ರಪದ ಮಾಸೇ ಶುಕ್ಲ ಪಕ್ಷೇ ಚತುರ್ಥ್ಯಾಂ ತಿಥೌ ಬುಧ ವಾಸರೇ ಚಿತ್ರಾ ದಿವಸ ನಕ್ಷತ್ರೇ ಶುಕ್ಲ ಯೋಗೇ (22.47 ವರೆಗೆ) ವಿಷ್ಟಿ ಕರಣೇ (15.22 ನಂತರ ಬವ ಕರಣೇ) ಕನ್ಯಾ ಸ್ಥಿತೇ ವರ್ತಮಾನೇ ಶ್ರೀಚಂದ್ರೇ (12.04 ನಂತರ ತುಲಾ) ಸಿಂಹ ಸ್ಥಿತೇ ವರ್ತಮಾನೇ ಶ್ರೀಸೂರ್ಯೇ ಮೀನ ಸ್ಥಿತೇ ವರ್ತಮಾನೇ ಶ್ರೀದೇವಗುರೌ ಮಕರ ಸ್ಥಿತೇ ವರ್ತಮಾನೇ ಶ್ರೀಶನೈಶ್‍ಚರೌ ಶೇಷೇಷು ಸರ್ವಗ್ರಹೇಷು ಯಥಾಯಥಂ ರಾಶಿಸ್ಥಾನಾನಿ ಸ್ಥಿತೇಷು ಏವಂ ಗ್ರಹ-ಗುಣವಿಶೇಷೇಣ ವಿಶಿಷ್ಟಾಯಾಂ ಶುಭಪುಣ್ಯತಿಥೌ…

‘ದೇಶಕಾಲ’ದ ಸಂದರ್ಭದಲ್ಲಿನ ಸೂಚನೆ

೧. ಯಾವ ಪ್ರದೇಶಕ್ಕೆ ‘ದಂಡಕಾರಣ್ಯೇ ದೇಶೇ ಗೋದಾವರ್ಯಾಃ ದಕ್ಷಿಣೇ ತೀರೇ ಬೌದ್ಧಾವತಾರೇ ರಾಮಕ್ಷೇತ್ರೇ’ ಎಂಬ ವರ್ಣನೆಯು ಅನ್ವಯಿಸುವುದಿಲ್ಲವೋ ಅಥವಾ ಪ್ರದೇಶದ ‘ದೇಶಕಾಲ’ವು ಪೂಜಕನಿಗೆ ಗೊತ್ತಿಲ್ಲದಿದ್ದರೆ, ಆಗ ಮೇಲೆ ಉಲ್ಲೇಖಿಸಿದ ಶಬ್ದಗಳ ಜಾಗದಲ್ಲಿ ‘ಆರ್ಯಾವರ್ತೇ ದೇಶೇ’ ಎಂದು ಹೇಳಬೇಕು.

೨. ಯಾರಿಗೆ ಮೇಲಿನ ‘ದೇಶಕಾಲ’ ಹೇಳಲು ಸಾಧ್ಯವಿಲ್ಲವೋ, ಅವರು ಮುಂದಿನ ಶ್ಲೋಕವನ್ನು ಹೇಳಬೇಕು ಮತ್ತು ನಂತರ ‘ಸಂಕಲ್ಪ’ವನ್ನು ಉಚ್ಚರಿಸಬೇಕು.

ತಿಥಿರ್ವಿಷ್ಣುಸ್ತಥಾ ವಾರೋ ನಕ್ಷತ್ರಂ ವಿಷ್ಣುರೇವ ಚ|
ಯೋಗಶ್ಚ ಕರಣಂ ಚೈವ ಸರ್ವಂ ವಿಷ್ಣುಮಯಂ ಜಗತ್||

ಅರ್ಥ: ತಿಥಿ, ವಾರ, ನಕ್ಷತ್ರ, ಯೋಗ, ಕರಣ ಇತ್ಯಾದಿಗಳನ್ನು ಉಚ್ಚರಿಸುವುದರಿಂದ ಸಿಗುವ ಎಲ್ಲ ಫಲವು ಶ್ರೀವಿಷ್ಣುವಿನ ಸ್ಮರಣೆಯಿಂದ ಪ್ರಾಪ್ತವಾಗುತ್ತದೆ; ಏಕೆಂದರೆ ಇಡೀ ಜಗತ್ತೇ ವಿಷ್ಣುಮಯವಾಗಿದೆ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠ ದೈವಜ್ಞ ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ– ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 8548998564

ಸಂಕಲ್ಪ

ಬಲಗೈಯಲ್ಲಿ ಅಕ್ಷತೆಯನ್ನು ತೆಗೆದುಕೊಂಡು ‘ಸಂಕಲ್ಪ’ವನ್ನು ಉಚ್ಚರಿಸಬೇಕು.

ಮಮ ಆತ್ಮನಃ ಪರಮೇಶ್ವರಾಜ್ಞಾರೂಪಸಕಲಶಾಸ್ತ್ರ
ಶ್ರುತಿಸ್ಮೃತಿಪುರಾಣೋಕ್ತಫಲಪ್ರಾಪ್ತಿದ್ವಾರಾ ಶ್ರೀಪರಮೇಶ್ವರ
ಪ್ರೀತ್ಯರ್ಥಂ ಮಮ ಶ್ರೀಸಿದ್ಧಿವಿನಾಯಕಪ್ರೀತಿದ್ವಾರಾಸಕಲ್ಪ್ಯ
ಪಾಪಕ್ಷಯಪೂರ್ವಕಂಸರ್ವಕರ್ಮನಿರ್ವಿಘ್ನತ್ವಪುತ್ರಪೌತ್ರಾಭಿವೃದ್ಧಿ
ಮಹೈಶ್ವರ್ಯವಿದ್ಯಾವಿಜಯಸಂಪದಾಧಿಕಲ್ಪೋಕ್ತಫಲಸಿದ್ಧ್ಯರ್ಥಮ್
ಶ್ರೀಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕ
ದೇವತಾಪ್ರೀತ್ಯರ್ಥಂ ಧ್ಯಾನಾವಾಹನಾದಿ ಷೋಡಶೋಪಚಾರೈಃ
ಪೂಜನಮಹಂ ಕರಿಷ್ಯೇ | ತತ್ರಾದೌ ನಿರ್ವಿಘ್ನತಾಸಿದ್ಧ್ಯರ್ಥಂ
ಶ್ರೀ ಮಹಾಗಣಪತಿಪೂಜನಂ ಕರಿಷ್ಯೇ | ಶರೀರಶುದ್ಧ್ಯರ್ಥಂ ವಿಷ್ಣುಸ್ಮರಣಂ ಕರಿಷ್ಯೇ |
ಕಲಶಶಂಖಘಂಟಾದೀಪಪೂಜನಂ ಚ ಕರಿಷ್ಯೇ ||

‘ಸಂಕಲ್ಪ’ದ ಕುರಿತಾದ ಸೂಚನೆ : ಪ್ರತಿಯೊಂದು ಸಲ ಎಡಗೈಯಿಂದ ಉದ್ಧರಣೆಯಲ್ಲಿ ನೀರನ್ನು ತೆಗೆದುಕೊಂಡು ಅದನ್ನು ಬಲಗೈಯಿಂದ ಕೆಳಗೆ ಬಿಡುವಾಗ ‘ಕರಿಷ್ಯೇ’ ಎಂದು ಹೇಳಬೇಕು.

ಶ್ರೀ ಮಹಾಗಣಪತಿಪೂಜೆ

 ಮೊದಲು ಮಣ್ಣಿನ ಮೂರ್ತಿಯ ಎದುರು ಅಥವಾ ಉಪಲಬ್ಧವಿರುವ ಸ್ಥಳಕ್ಕನುಸಾರ ಹರಿವಾಣ ಅಥವಾ ಬಾಳೆಯ ಎಲೆಯನ್ನಿಡಬೇಕು. ಅದರ ಮೇಲೆ ಅಕ್ಕಿಯ ರಾಶಿಯನ್ನು ಹಾಕಬೇಕು. ಅದರ ಮೇಲೆ ತೆಂಗಿನಕಾಯಿ ಯನ್ನು ಅದರ ಜುಟ್ಟು ನಮ್ಮ ಕಡೆಗೆ ಬರುವಂತೆ ಇಡಬೇಕು. ನಂತರ ಚಂದನಾದಿಉಪಚಾರಗಳಿಂದ ಶ್ರೀ ಮಹಾಗಣಪತಿಯ ಪೂಜೆಯನ್ನು ಮಾಡಬೇಕು.

ಧ್ಯಾನ : ನಮಸ್ಕಾರದ ಮುದ್ರೆಮಾಡಿ ಕೈಗಳನ್ನು ಎದೆಯ ಬಳಿ ಇಡಬೇಕು ಮತ್ತು ಕಣ್ಣುಗಳನ್ನು ಮುಚ್ಚಿಶ್ರೀ ಮಹಾಗಣಪತಿಯ ರೂಪವನ್ನು ಮನಸ್ಸಿನಲ್ಲಿ ಸ್ಮರಿಸಬೇಕು ಮತ್ತು ಮುಂದಿನ ಶ್ಲೋಕವನ್ನು ಪಠಿಸಬೇಕು.

ವಕ್ರತುಂಡ ಮಹಾಕಾಯ ಕೋಟಿಸೂರ್ಯಸಮಪ್ರಭ |
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ ||

ಅರ್ಥ: ಕೆಟ್ಟ ಮಾರ್ಗದಲ್ಲಿ ಹೋಗುವವರನ್ನು ಸರಿದಾರಿಗೆ ತರುವ, ಪ್ರಚಂಡ ಶರೀರವಿರುವ ಮತ್ತು ಕೋಟಿ ಸೂರ್ಯರ ತೇಜವಿರುವ ಹೇ ಗಣಪತಿದೇವಾ, ನನ್ನ ಕಾರ್ಯಗಳಲ್ಲಿನ ವಿಘ್ನಗಳನ್ನು ನೀನು ಶಾಶ್ವತವಾಗಿ ದೂರಗೊಳಿಸು. ನಾನು ನಿನಗೆ ನಮಸ್ಕರಿಸಿ, ನಿನ್ನ ಧ್ಯಾನ ಮಾಡುತ್ತೇನೆ.

ಶ್ರೀ ಮಹಾಗಣಪತಯೇ ನಮಃ | ಧ್ಯಾಯಾಮಿ ||

ಆವಾಹನೆ: ಬಲಗೈಯಲ್ಲಿ (ಮಧ್ಯಮಾ, ಅನಾಮಿಕಾ ಮತ್ತು ಹೆಬ್ಬೆರಳನ್ನು ಒಂದುಗೂಡಿಸಿ) ಅಕ್ಷತೆಗಳನ್ನು ತೆಗೆದು ಕೊಂಡು ‘ಆವಾಹಯಾಮಿ’ ಎನ್ನುವಾಗ ಆ ತೆಂಗಿನಕಾಯಿಯ ರೂಪದಲ್ಲಿನ ಮಹಾಗಣಪತಿಯ ಚರಣಗಳಲ್ಲಿ ಅರ್ಪಿಸಬೇಕು.

ಶ್ರೀಮಹಾಗಣಪತಯೇ ನಮಃ | ಮಹಾಗಣಪತಿಂ ಸಾಂಗಂ ಸಪರಿವಾರಂ ಸಾಯುಧಂ ಸಶಕ್ತಿಕಂ ಆವಾಹಯಾಮಿ ||

ಆಸನ: ಬಲಗೈಯಲ್ಲಿ ಅಕ್ಷತೆಗಳನ್ನು ತೆಗೆದುಕೊಂಡು ‘ಸಮರ್ಪಯಾಮಿ’ ಎನ್ನುವಾಗ ಅವುಗಳನ್ನು ಶ್ರೀ ಮಹಾಗಣಪತಿಯ ಚರಣಗಳಲ್ಲಿ ಅರ್ಪಿಸಬೇಕು.

ಶ್ರೀ ಮಹಾಗಣಪತಯೇ ನಮಃ | ಆಸನಾರ್ಥೇ ಅಕ್ಷತಾನ್ ಸಮರ್ಪಯಾಮಿ ||

ಚಂದನಾದಿ ಉಪಚಾರ: ದೇವರಿಗೆ ಬಲಗೈಯ ಅನಾಮಿಕಾದಿಂದ ಗಂಧವನ್ನು (ಚಂದನ) ಹಚ್ಚಬೇಕು. ಅನಂತರ ಮುಂದಿನ ನಾಮಮಂತ್ರವನ್ನು ಹೇಳುವಾಗ ‘ಸಮರ್ಪಯಾಮಿ’ ಎಂಬ ಶಬ್ದವನ್ನು ಉಚ್ಚರಿಸುತ್ತಾ ಕಂಸದಲ್ಲಿ ನೀಡಿದಂತೆ ಉಪಚಾರ ವನ್ನು ದೇವರ ಚರಣಗಳಲ್ಲಿ ಅರ್ಪಿಸಬೇಕು.

ಶ್ರೀ ಮಹಾಗಣಪತಯೇ ನಮಃ | ಚಂದನಂ ಸಮರ್ಪಯಾಮಿ || (ಗಂಧವನ್ನು ಹಚ್ಚಬೇಕು.)
ಋದ್ಧಿಸಿದ್ಧಿಭ್ಯಾಂ ನಮಃ | ಹರಿದ್ರಾಂ ಸಮರ್ಪಯಾಮಿ || (ಅರಿಶಿನವನ್ನು ಅರ್ಪಿಸಬೇಕು.)
ಋದ್ಧಿಸಿದ್ಧಿಭ್ಯಾಂ ನಮಃ | ಕುಂಕುಮಂ ಸಮರ್ಪಯಾಮಿ || (ಕುಂಕುಮವನ್ನು ಅರ್ಪಿಸಬೇಕು.)
ಶ್ರೀ ಮಹಾಗಣಪತಯೇ ನಮಃ | ಋದ್ಧಿಸಿದ್ಧಿಭ್ಯಾಂ ನಮಃ | ಸಿಂದೂರಂ ಸಮರ್ಪಯಾಮಿ || (ಸಿಂದೂರವನ್ನು ಅರ್ಪಿಸಬೇಕು.)
ಶ್ರೀ ಮಹಾಗಣಪತಯೇ ನಮಃ | ಅಲಂಕಾರಾರ್ಥೇ ಅಕ್ಷತಾನ್ ಸಮರ್ಪಯಾಮಿ || (ಅಕ್ಷತೆಗಳನ್ನು ಅರ್ಪಿಸಬೇಕು.)
ಶ್ರೀ ಮಹಾಗಣಪತಯೇ ನಮಃ | ಪುಷ್ಪಂ ಸಮರ್ಪಯಾಮಿ || (ಹೂವನ್ನು ಅರ್ಪಿಸಬೇಕು.)
ಶ್ರೀ ಮಹಾಗಣಪತಯೇ ನಮಃ | ದೂರ್ವಾಂಕುರಾನ್ ಸಮರ್ಪಯಾಮಿ || (ದೂರ್ವೆಯನ್ನು ಅರ್ಪಿಸಬೇಕು.) ಶ್ರೀ ಮಹಾಗಣಪತಯೇ ನಮಃ | ಧೂಪಂ ಸಮರ್ಪಯಾಮಿ || (ಊದುಬತ್ತಿಯಿಂದ ಬೆಳಗಬೇಕು.)
ಶ್ರೀ ಮಹಾಗಣಪತಯೇ ನಮಃ | ದೀಪಂ ಸಮರ್ಪಯಾಮಿ|| (ನೀಲಾಂಜನದಿಂದ ಬೆಳಗಬೇಕು.)

ಬಲಗೈಯಲ್ಲಿ ೨ ದೂರ್ವೆಗಳನ್ನು ತೆಗೆದುಕೊಂಡು ಅವುಗಳ ಮೇಲೆ ನೀರನ್ನು ಹಾಕಬೇಕು. ನಂತರ ದೂರ್ವೆಗಳಿಂದ ಆ ನೀರನ್ನು ನೈವೇದ್ಯದ ಮೇಲೆ ಪ್ರೋಕ್ಷಣೆ ಮಾಡಿ (ಸಿಂಪಡಿಸಿ) ದೂರ್ವೆಗಳನ್ನು ಕೈಯಲ್ಲಿಯೇ ಹಿಡಿದುಕೊಂಡಿರಬೇಕು ಮತ್ತು ಎಡಗೈಯ ಬೆರಳುಗಳನ್ನು ಎರಡೂ ಕಣ್ಣುಗಳ (ಅಪವಾದ: ಎಡಗೈಯನ್ನು ಎದೆಯ ಮೇಲೆ) ಮೇಲಿಟ್ಟು ನೈವೇದ್ಯವನ್ನು ಅರ್ಪಿಸುವಾಗ ಮುಂದಿನ ಮಂತ್ರವನ್ನು ಪಠಿಸಬೇಕು.

ಪ್ರಾಣಾಯ ನಮಃ | ಅಪಾನಾಯ ನಮಃ | ವ್ಯಾನಾಯ ನಮಃ | ಉದಾನಾಯ ನಮಃ | ಸಮಾನಾಯ ನಮಃ | ಬ್ರಹ್ಮಣೇ ನಮಃ ||

ಟಿಪ್ಪಣಿ : ವೇದೋಕ್ತ ಪೂಜಾವಿಧಿಯಲ್ಲಿ ‘ಪ್ರಾಣಾಯ ನಮಃ |’ ಎಂಬುದರ ಬದಲು ‘ಓಂ ಪ್ರಾಣಾಯ ಸ್ವಾಹಾ |’ ಎಂದು ಮಂತ್ರವನ್ನು ಹೇಳುತ್ತಾರೆ.

ಕೈಯಲ್ಲಿರುವ ಒಂದು ದೂರ್ವೆಯನ್ನು ನೈವೇದ್ಯದ ಮೇಲೆ ಮತ್ತು ಇನ್ನೊಂದು ದೂರ್ವೆಯನ್ನು ಶ್ರೀ ಗಣಪತಿಯ ಚರಣಗಳಲ್ಲಿ ಅರ್ಪಿಸಬೇಕು. ಅಂಗೈಯಲ್ಲಿ ನೀರನ್ನು ತೆಗೆದುಕೊಳ್ಳಬೇಕು ಮತ್ತು ಮುಂದಿನ ಪ್ರತಿಯೊಂದು ಮಂತ್ರವನ್ನು ಹೇಳುವಾಗ ಆ ನೀರನ್ನು ಹರಿವಾಣದಲ್ಲಿ ಬಿಡಬೇಕು.

ಶ್ರೀಮಹಾಗಣಪತಯೇ ನಮಃ | ನೈವೇದ್ಯಂ ಸಮರ್ಪಯಾಮಿ || ಮಧ್ಯೇ ಪಾನೀಯಂ ಸಮರ್ಪಯಾಮಿ | ಉತ್ತರಾಪೋಶನಂ ಸಮರ್ಪಯಾಮಿ | ಹಸ್ತಪ್ರಕ್ಷಾಲನಂ ಸಮರ್ಪಯಾಮಿ | ಮುಖಪ್ರಕ್ಷಾಲನಂ ಸಮರ್ಪಯಾಮಿ || (ಗಂಧ್ಳ ಹೂವುಗಳನ್ನು ಅರ್ಪಿಸಬೇಕು.) ಕರೋದ್ವರ್ತನಾರ್ಥೇ ಚಂದನಂ ಸಮರ್ಪಯಾಮಿ ||

ನಮಸ್ಕಾರದ ಮುದ್ರೆ ಮಾಡಿ ಪ್ರಾರ್ಥನೆ ಮಾಡಬೇಕು.

ಕಾರ್ಯಂ ಮೇ ಸಿದ್ಧಿಮಾಯಾತು ಪ್ರಸನ್ನೇ ತ್ವಯಿ ಧಾತರಿ|ವಿಘ್ನಾನಿ ನಾಶಮಾಯಾಂತು ಸರ್ವಾಣಿ ಗಣನಾಯಕ ||

ಅರ್ಥ : ಹೇ ಗಣನಾಯಕಾ, ನೀನು ನನ್ನ ಮೇಲೆ ಪ್ರಸನ್ನನಾಗು. ಹಾಗೆಯೇ ನನ್ನ ಕಾರ್ಯದಲ್ಲಿನ ಎಲ್ಲ ವಿಘ್ನಗಳನ್ನು ದೂರಗೊಳಿಸಿ ನೀನೇ ನನ್ನ ಕಾರ್ಯವನ್ನು ಪೂರ್ಣಗೊಳಿಸು.

ಅನಂತರ ಉದ್ಧರಣೆಯಲ್ಲಿ ನೀರನ್ನು ತೆಗೆದುಕೊಳ್ಳಬೇಕು ಮತ್ತು ‘ಪ್ರೀಯತಾಮ್’ ಎಂಬ ಶಬ್ದವನ್ನು ಹೇಳುವಾಗ ಅದನ್ನು ಹರಿವಾಣದಲ್ಲಿ ಬಿಡಬೇಕು.

ಅನೇನ ಕೃತಪೂಜನೇನ ಶ್ರೀ ಮಹಾಗಣಪತಿಃ ಪ್ರೀಯತಾಮ್ |

ಶ್ರೀವಿಷ್ಣುಸ್ಮರಣೆ: ಎರಡೂ ಕೈಗಳನ್ನು ಒರೆಸಿಕೊಂಡು ನಮಸ್ಕಾರದ ಮುದ್ರೆಯಲ್ಲಿ ಎದೆಯ ಬಳಿ ಕೈಗಳನ್ನು ಜೋಡಿಸ ಬೇಕು. ನಂತರ ೯ ಸಲ ‘ವಿಷ್ಣವೇ ನಮೋ’ ಎನ್ನಬೇಕು ಮತ್ತು ಕೊನೆಯಲ್ಲಿ ‘ವಿಷ್ಣವೇ ನಮಃ |’ ಎಂದು ಹೇಳಬೇಕು.

ಪೂಜೆಗೆ ಸಂಬಂಧಿಸಿದ ಉಪಕರಣಗಳ ಪೂಜೆ

ಕಲಶಪೂಜೆ
ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧುಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||

ಅರ್ಥ: ಹೇ ಗಂಗಾ, ಯಮುನಾ, ಗೋದಾವರೀ, ಸರಸ್ವತೀ, ನರ್ಮದಾ, ಸಿಂಧು ಮತ್ತು ಕಾವೇರಿ ನದಿಗಳೇ, ಈ ನೀರಿನಲ್ಲಿ ನಿಮ್ಮ ವಾಸ್ತವ್ಯವಿರಲಿ.

ಕಲಶೇ ಗಂಗಾದಿತೀರ್ಥಾನ್ಯಾವಾಹಯಾಮಿ ||ಕಲಶದೇವತಾಭ್ಯೋ ನಮಃ |
ಸರ್ವೋಪಚಾರಾರ್ಥೇ ಗಂಧಾಕ್ಷತಪುಷ್ಪಂ ಸಮರ್ಪಯಾಮಿ||

ಕಲಶದಲ್ಲಿ ಗಂಧ, ಅಕ್ಷತೆ ಮತ್ತು ಹೂವುಗಳನ್ನು ಒಟ್ಟಿಗೆ ಅರ್ಪಿಸಬೇಕು.

ಶಂಖಪೂಜೆ
ಶಂಖದೇವತಾಭ್ಯೋ ನಮಃ | ಸರ್ವೋಪಚಾರಾರ್ಥೇ ಗಂಧಪುಷ್ಪಂ ಸಮರ್ಪಯಾಮಿ ||

ಅರ್ಥ: ಹೇ ಶಂಖದೇವತೇ, ನಾನು ನಿನಗೆ ವಂದಿಸಿ ಎಲ್ಲ ಉಪಚಾರಗಳಿಗಾಗಿ ಗಂಧ ಹೂವುಗಳನ್ನು ಅರ್ಪಿಸುತ್ತೇನೆ.

(ಪ್ರತಿಯೊಂದು ಮನೆಯಲ್ಲಿ ಶಂಖ ಇರುತ್ತದೆ ಎಂದೇನಿಲ್ಲ. ಯಾರ ಮನೆಯಲ್ಲಿ ಶಂಖವಿದೆಯೋ, ಅವರು ಮೇಲಿನಂತೆ ಪೂಜೆ ಮಾಡಬೇಕು.)

ಘಂಟೆಯ ಪೂಜೆ

ಆಗಮಾರ್ಥಂ ತು ದೇವಾನಾಂ ಗಮನಾರ್ಥಂ ತು ರಕ್ಷಸಾಮ್ |
ಕುರ್ವೇ ಘಂಟಾರವಂ ತತ್ರ ದೇವತಾಹ್ವಾನಲಕ್ಷಣಮ್ ||

ಅರ್ಥ: ದೇವತೆಗಳು ಬರಬೇಕು ಮತ್ತು ರಾಕ್ಷಸರು ತೊಲಗಬೇಕು, ಇದಕ್ಕಾಗಿ ದೇವತೆಗಳ ಆಗಮನವನ್ನು ಸೂಚಿಸುವ ನಾದ ಮಾಡುವ ಘಂಟಾದೇವತೆಗೆ ವಂದಿಸಿ ಗಂಧ, ಅಕ್ಷತೆ ಮತ್ತು ಹೂವುಗಳನ್ನು ಅರ್ಪಿಸುತ್ತೇನೆ.

ಘಂಟಾಯೈ ನಮಃ |ಸರ್ವೋಪಚಾರಾರ್ಥೇ ಗಂಧಾಕ್ಷತಪುಷ್ಪಂ ಸಮರ್ಪಯಾಮಿ ||

ದೀಪಪೂಜೆ
ಭೋ ದೀಪ ಬ್ರಹ್ಮರೂಪಸ್ತ್ವಂ ಜ್ಯೋತಿಷಾಂ ಪ್ರಭುರವ್ಯಯಃ |
ಆರೋಗ್ಯಂ ದೇಹಿ ಪುತ್ರಾಂಶ್ಚ ಮತಿಂ ಶಾಂತಿಂ ಪ್ರಯಚ್ಛ ಮೇ||

ದೀಪದೇವತಾಭ್ಯೋ ನಮಃ|ಸರ್ವೋಪಚಾರಾರ್ಥೇ ಗಂಧಾಕ್ಷತಪುಷ್ಪಂ ಸಮರ್ಪಯಾಮಿ ||

ಅರ್ಥ: ಹೇ ದೀಪದೇವತೆ, ನೀನು ಬ್ರಹ್ಮಸ್ವರೂಪ, ಎಲ್ಲ ಜ್ಯೋತಿಗಳ ಅವ್ಯಯನಾದಂತಹ (ನಾಶವಾಗದ) ಸ್ವಾಮಿ. ನೀನು ನನಗೆ ಆರೋಗ್ಯ, ಪುತ್ರಸೌಖ್ಯ, ಬುದ್ಧಿ ಮತ್ತು ಶಾಂತಿಯನ್ನು ಕೊಡು. ನಾನು ನಿನಗೆ ವಂದಿಸಿ ಎಲ್ಲ ಉಪಚಾರಗಳಿಗಾಗಿ ಗಂಧ, ಅಕ್ಷತೆ ಮತ್ತು ಹೂವುಗಳನ್ನು ಅರ್ಪಿಸುತ್ತೇನೆ. (ದೀಪ ದೇವತೆಗೆ ಅರಿಶಿನ ಕುಂಕುಮ ಅರ್ಪಿಸುವ ಪದ್ಧತಿಯೂ ಇದೆ.)

ಮಂಟಪಪೂಜೆ

ಮುಂದಿನ ಮಂತ್ರವನ್ನು ಹೇಳುವಾಗ ‘ಸಮರ್ಪಯಾಮಿ’ ಎಂಬ ಶಬ್ದದ ಸಮಯದಲ್ಲಿ ಮಂಟಪದ ಮೇಲೆ ಗಂಧ, ಅಕ್ಷತೆ ಮತ್ತು ಹೂವುಗಳನ್ನು ಅರ್ಪಿಸಬೇಕು.

ಮಂಡಪದೇವತಾಭ್ಯೋ ನಮಃ |ಗಂಧಾಕ್ಷತಪುಷ್ಪಂ ಸಮರ್ಪಯಾಮಿ ||

ಪೂಜಾಸಾಹಿತ್ಯ, ಪೂಜಾಸ್ಥಳ, ಹಾಗೆಯೇ ಸ್ವಂತದ (ಪೂಜಕನ) ಶುದ್ಧಿ

ಕಲಶ ಮತ್ತು ಶಂಖದಲ್ಲಿನ ಸ್ವಲ್ಪ ನೀರನ್ನು ಉದ್ಧರಣೆಯಲ್ಲಿ ಒಟ್ಟಿಗೆ ತೆಗೆದುಕೊಳ್ಳಬೇಕು. ಪೂಜಕನು ಮುಂದಿನ ಮಂತ್ರವನ್ನು ಪಠಿಸುತ್ತಾ ತುಳಸೀ ದಳದಿಂದ ಆ ನೀರನ್ನು ಪೂಜಾಸಾಹಿತ್ಯಗಳ ಮೇಲೆ, ತನ್ನ ಸುತ್ತಲೂ (ಪೂಜಾಸ್ಥಳ) ಮತ್ತು ತನ್ನ ಮೇಲೆ (ತಲೆಯ ಮೇಲೆ) ಪ್ರೋಕ್ಷಣೆ ಮಾಡಿಕೊಳ್ಳಬೇಕು.

ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂಗತೋಪಿ ವಾ |
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ ||

ಅರ್ಥ: ಅಪವಿತ್ರ ಅಥವಾ ಯಾವುದೇ ಅವಸ್ಥೆಯಲ್ಲಿನ ಮನುಷ್ಯನು ಪುಂಡರೀಕಾಕ್ಷನ (ಶ್ರೀವಿಷ್ಣುವಿನ) ಸ್ಮರಣೆಯಿಂದ ಅಂತರ್ಬಾಹ್ಯ ಶುದ್ಧನಾಗುತ್ತಾನೆ.

ಮೇಲಿನ ಮಂತ್ರವನ್ನು ಪಠಿಸಲು ಕಠಿಣವಾದರೆ ‘ಶ್ರೀ ಪುಂಡರೀಕಾಕ್ಷಾಯ ನಮಃ|’ ಎಂಬ ನಾಮಮಂತ್ರ ಹೇಳುತ್ತಾ ಮೇಲಿನ ಕೃತಿ ಮಾಡಬೇಕು. ಅನಂತರ ತುಳಸೀದಳವನ್ನು ಹರಿವಾಣದಲ್ಲಿ ಬಿಡಬೇಕು.

ನಿಮ್ಮನ್ನು ಪ್ರೀತಿಸುವವರು ನಿಮಗೆ ಸಿಗುತ್ತಿಲ್ಲವೇ?
ನಿಮಗೆ ಮದುವೆಯಾಗುತ್ತಿಲ್ಲವೇ? ಮಕ್ಕಳಾಗದೇ ಕೊರಗುತ್ತಿದ್ದೀರಾ? ಗಂಡ ಹೆಂಡತಿ ಜಗಳವೇ? ಅತ್ತೆ-ಸೊಸೆ ಕಾಟ, ನಾದಿನಿಯರ ಪಿತೂರಿಗೆ ನೊಂದಿದ್ದೀರಾ? ಕುಟುಂಬ ಕಲಹ ತಾರಕ್ಕೆರುತ್ತಿದ್ದೀಯಾ? ಗಂಡನಿಗೆ ಬೇರೆ ಸಂಬಂಧವಿದೆಯಾ? ಹೆಂಡತಿಗೆ ಮತ್ತೊಬ್ಬರ ಸಹಾವಾಸವೇ? ಶತ್ರುಗಳ ಕಾಟಕ್ಕೆ ನಷ್ಟದಲ್ಲೀದ್ದಾರಾ? ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗವಾಗಿದೆಯೇ? ಬಿಜಿನೆಸ್ ನಡಿಯುತ್ತಿಲ್ಲವೇ? ಮನೆ ಕಟ್ಟಲಾಗುತ್ತಿಲ್ಲವೇ? ಪ್ರತಿ ಹೆಜ್ಜೆಗೂ ತೊಂದರೆಯೇ? ಅದೆಂಥದ್ದೇ ಕೆಡಕಿರಲಿ, ತೊಂದರೆಯಿರಲಿ ವಶೀಕರಣದ ಮೂಲಕ ನಿಮ್ಮ ಸಮಸ್ಯೆಗೆ ಇಲ್ಲಿದೆ ಪರಿಹಾರ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ ಜಾತಕ ಭಾವಚಿತ್ರದ ಆಧಾರದ ಮೇಲೆ ಖಚಿತ ಜ್ಯೋತಿಷ್ಯ ನಿಶ್ಚಿತ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಜ್ಯೋತಿಷ್ಯ ಪೀಠದ ತಾಂತ್ರಿಕ್ ವಿದ್ಯೆ ಮೂಲಕ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564 ಅವರಿಂದ ನಿಮ್ಮ ಎಂಥದೇ ನಿಗೂಢ ಸಮಸ್ಯೆಗಳಿಗೂ ಪರಿಹಾರ ನೀಡಲಿದ್ದಾರೆ.

ವಿನಾಯಕನ ಮಣ್ಣಿನ ಮೂರ್ತಿಯ ಪೂಜೆ

ಶ್ರೀ ಗಣೇಶಮೂರ್ತಿಯ ಸ್ಥಾಪನೆ ಮತ್ತು ಪ್ರಾಣಪ್ರತಿಷ್ಠೆ

ಅ. ಶ್ರೀ ಗಣೇಶಮೂರ್ತಿಯ ಸ್ಥಾಪನೆಯನ್ನು ಪೂರ್ವದಿಕ್ಕಿನಲ್ಲಿ ಮಾಡಬೇಕು. ಹಾಗೆ ಮಾಡಲು ಸಾಧ್ಯವಿಲ್ಲದಿದ್ದಲ್ಲಿ ಪೂಜಕನ ಮುಖವು ದಕ್ಷಿಣ ದಿಕ್ಕಿಗೆ ಬರದಂತೆ ಶ್ರೀ ಗಣೇಶ ಮೂರ್ತಿಯನ್ನು ಸ್ಥಾಪಿಸಬೇಕು.

ಆ. ಯಾವ ಮಣೆಯ ಮೇಲೆ ಮೂರ್ತಿಯ ಸ್ಥಾಪನೆ ಮಾಡ ಬೇಕಾಗಿರುತ್ತದೆಯೋ, ಆ ಮಣೆಯ ಮಧ್ಯಭಾಗದಲ್ಲಿ ೧ ಮುಷ್ಠಿ ಅಕ್ಷತೆಯನ್ನು (ತೊಳೆದ ಅಖಂಡ ಅಕ್ಕಿ) ಇಡಬೇಕು. ಅದರ ಮೇಲೆ ಕುಂಕುಮದಿಂದ ಸ್ವಸ್ತಿಕವನ್ನು ಬಿಡಿಸಬೇಕು.

ಇ. ನಂತರ ಆ ಅಕ್ಕಿಯ ಮೇಲೆ ಮುಂದಿನಂತೆ ಮೂರ್ತಿಯ ‘ಪ್ರಾಣಪ್ರತಿಷ್ಠೆ’ ಮಾಡಬೇಕು.

‘ಪ್ರಾಣಪ್ರತಿಷ್ಠೆ’ ಎಂದರೆ ಮೂರ್ತಿಯಲ್ಲಿ ದೇವತ್ವವನ್ನು ತರುವುದು. ಇದಕ್ಕಾಗಿ ಪೂಜಕನು ತನ್ನ ಬಲಗೈಯನ್ನು ಮೂರ್ತಿಯ ಹೃದಯಕ್ಕೆ ಸ್ಪರ್ಶಿಸಿ ‘ಈ ಮೂರ್ತಿಯಲ್ಲಿ ಸಿದ್ಧಿವಿನಾಯಕನ ಪ್ರಾಣ (ತತ್ವ)ವು ಆಕರ್ಷಿಸುತ್ತಿದೆ’, ಎಂಬ ಭಾವವನ್ನಿಟ್ಟು ಮುಂದಿನ ಮಂತ್ರಗಳನ್ನು ಪಠಿಸಬೇಕು.

ಅಸ್ಯಶ್ರೀಪ್ರಾಣಪ್ರತಿಷ್ಠಾಮಂತ್ರಸ್ಯ ಬ್ರಹ್ಮವಿಷ್ಣುಮಹೇಶ್ವರಾ

ಋಷಯಃ ಋಗ್ಯಜುಃಸಾಮಾನಿಛಂದಾಂಸಿ ಪರಾಪ್ರಾಣ

ಶಕ್ತಿರ್ದೇವತಾ ಆಂ ಬೀಜಂ ಹ್ರೀಂ ಶಕ್ತಿಃ ಕ್ರೋಂ ಕೀಲಕಮ್ |

ಅಸ್ಯಾಂ ಮೂರ್ತೌ ಪ್ರಾಣಪ್ರತಿಷ್ಠಾಪನೇ ವಿನಿಯೋಗಃ ||

ಓಂ ಆಂಹ್ರೀಂಕ್ರೋಂಯಂರಂಲಂವಂಶಂಷಂಸಂಹಂ ಹಂಸಃಸೋಹಮ್ |

ದೇವಸ್ಯ ಪ್ರಾಣಾ ಇಹ ಪ್ರಾಣಾಃ ||

ಓಂ ಆಂಹ್ರೀಂಕ್ರೋಂಯಂರಂಲಂವಂಶಂಷಂಸಂಹಂ ಹಂಸಃ ಸೋಹಮ್ |

ದೇವಸ್ಯ ಜೀವ ಇಹ ಸ್ಥಿತಃ ||

ಓಂ ಆಂಹ್ರೀಂಕ್ರೋಂಯಂರಂಲಂವಂಶಂಷಂಸಂಹಂ ಹಂಸಃ ಸೋಹಮ್ |

ದೇವಸ್ಯ ಸರ್ವೇಂದ್ರಿಯಾಣಿ ||

ಓಂ ಆಂಹ್ರೀಂಕ್ರೋಂಯಂರಂಲಂವಂಶಂಷಂಸಂಹಂಹಂಸಃ ಸೋಹಮ್|
ದೇವಸ್ಯವಾಙ್ಮನಃಚಕ್ಷುಃಶ್ರೋತ್ರಜಿಹ್ವಾಘ್ರಾಣಪ್ರಾಣಾ ಇಹಾಗತ್ಯ ಸುಖಂಸುಚಿರಂ ತಿಷ್ಠಂತು ಸ್ವಾಹಾ ||

(ಟಿಪ್ಪಣಿ : ಮೇಲಿನ ಪ್ರಾಣಪ್ರತಿಷ್ಠೆಯ ಮಂತ್ರಗಳು ವೇದೋಕ್ತವಾಗಿವೆ.)

ಅಸ್ಯೈ ಪ್ರಾಣಾಃ ಪ್ರತಿಷ್ಠಂತು ಅಸ್ಯೈ ಪ್ರಾಣಾಃ ಕ್ಷರಂತು ಚ |

ಅಸ್ಯೈ ದೇವತ್ವಮರ್ಚಾಯೈ ಮಾಮಹೇತಿ ಚ ಕಶ್ಚನ ||

ನಂತರ ‘ಓಂ’ ಅಥವಾ ‘ಪರಮಾತ್ಮನೇ ನಮಃ |’ ಎಂದು ೧೫ ಸಲ ಹೇಳಬೇಕು.

ಷೋಡಶೋಪಚಾರ ಪೂಜೆ

ಧ್ಯಾನ: ಕೈಜೋಡಿಸಿ ನಮಸ್ಕಾರದ ಮುದ್ರೆ ಮಾಡಬೇಕು.
ಏಕದಂತಂ ಶೂರ್ಪಕರ್ಣಂ ಗಜವಕ್ತ್ರಂ ಚತುರ್ಭುಜಮ್ |

ಪಾಶಾಂಕುಶಧರಂ ದೇವಂ ಧ್ಯಾಯೇತ್ ಸಿದ್ಧಿವಿನಾಯಕಮ್ ||

ಅರ್ಥ: ಯಾರ ಮುಖಕಮಲದಲ್ಲಿ ಒಂದೇ ದಂತವಿದೆ, ಕಿವಿಗಳು ಮೊರದಗಲವಾಗಿವೆ, ಮುಖವು ಆನೆಯದಾಗಿದೆ, ನಾಲ್ಕು ಕೈಗಳಿವೆ ಮತ್ತು ಕೈಗಳಲ್ಲಿ ಅಂಕುಶ ಮತ್ತು ಪಾಶವನ್ನು ಹಿಡಿದಿದ್ದಾನೆ, ಇಂತಹ ಶ್ರೀ ಸಿದ್ಧಿವಿನಾಯಕದೇವರನ್ನು ನಾನು ಧ್ಯಾನಿಸುತ್ತೇನೆ (ಚಿಂತನ).

ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ | ಧ್ಯಾಯಾಮಿ ||

೧. ಆವಾಹನೆ: ಬಲಗೈಯಲ್ಲಿ ಅಕ್ಷತೆಯನ್ನು ತೆಗೆದುಕೊಂಡು ‘ಆವಾಹಯಾಮಿ’ ಎನ್ನುವಾಗ ಮಹಾದೇವ, ಗೌರಿ ಮತ್ತು ಸಿ?ವಿನಾಯಕ ಇವರ ಚರಣಗಳಲ್ಲಿ ಅರ್ಪಿಸಬೇಕು. (ಅಕ್ಷತೆಯನ್ನು ಅರ್ಪಿಸುವಾಗ ಮಧ್ಯಮಾ, ಅನಾಮಿಕಾ ಮತ್ತು ಹೆಬ್ಬೆರಳನ್ನು ಒಟ್ಟು ಮಾಡಿ ಅರ್ಪಿಸಬೇಕು.)

ಆವಾಹಯಾಮಿ ವಿಘ್ನೇಶ ಸುರರಾಜಾರ್ಚಿತೇಶ್ವರ|

ಅನಾಥನಾಥ ಸರ್ವಜ್ಞ ಪೂಜಾರ್ಥಂ ಗಣನಾಯಕ||

ಅರ್ಥ : ಹೇ ವಿಘ್ನೇಶಾ, ದೇವಗಣರು ಪೂಜಿಸಿದ, ಅನಾಥರ ನಾಥ ಮತ್ತು ಸರ್ವಜ್ಞ ಗಣನಾಯಕಾ, ನಾನು ಪೂಜೆಗಾಗಿ ನಿನ್ನ ಆವಾಹನೆ ಮಾಡುತ್ತೇನೆ.

ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ | ಆವಾಹಯಾಮಿ ||

೨. ಆಸನ : ಬಲಗೈಯಲ್ಲಿ ಅಕ್ಷತೆಯನ್ನು ತೆಗೆದುಕೊಂಡು ‘ಸಮರ್ಪಯಾಮಿ’ ಎನ್ನುವಾಗ ದೇವರ ಚರಣಗಳಲ್ಲಿ ಅರ್ಪಿಸಬೇಕು.

ವಿಚಿತ್ರರತ್ನರಚಿತಂ ದಿವ್ಯಾಸ್ತರಣಸಂಯುತಮ್ |

ಸ್ವರ್ಣಸಿಂಹಾಸನಂ ಚಾರು ಗೃಹಾಣ ಸುರಪೂಜಿತ ||

ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |

ಆಸನಾರ್ಥೇ ಅಕ್ಷತಾನ್ ಸಮರ್ಪಯಾಮಿ ||

೩. ಪಾದಪೂಜೆ : ಬಲಗೈಯಿಂದ ಉದ್ಧರಣೆಯಲ್ಲಿ ನೀರನ್ನು ತೆಗೆದುಕೊಳ್ಳಿ ಮತ್ತು ‘ಸಮರ್ಪಯಾಮಿ’ ಎನ್ನುವಾಗ ಆ ನೀರನ್ನು ಮಹಾದೇವ, ಗೌರಿ ಮತ್ತು ಸಿದ್ಧಿವಿನಾಯಕ ಇವರ ಚರಣಗಳಲ್ಲಿ ಪ್ರೋಕ್ಷಣೆ ಮಾಡಿ.

ಸರ್ವತೀರ್ಥಸಮುದ್‌ಭೂತಂ ಪಾದ್ಯಂಗಂಧಾದಿಭಿರ್ಯುತಮ್ |

ವಿಘ್ನರಾಜ ಗೃಹಾಣೇದಂ ಭಗವನ್ಭಕ್ತವತ್ಸಲ ||

ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |

ಪಾದ್ಯಂ ಸಮರ್ಪಯಾಮಿ ||

೪. ಅರ್ಘ್ಯ: ಎಡಗೈಯಿಂದ ಉದ್ಧರಣೆಯಲ್ಲಿ ನೀರು ತೆಗೆದುಕೊಳ್ಳಿ. ಆ ನೀರಿನಲ್ಲಿ ಗಂಧ, ಹೂವು ಮತ್ತು ಅಕ್ಷತೆಯನ್ನು ಹಾಕಿ. ಬಲಗೈಯಲ್ಲಿ ದೂರ್ವೆಯನ್ನು ತೆಗೆದುಕೊಂಡು ‘ಸಮರ್ಪಯಾಮಿ’ ಎನ್ನುವಾಗ ಆ ನೀರನ್ನು ಮಹಾದೇವ, ಗೌರಿ ಮತ್ತು ಸಿದ್ಧಿವಿನಾಯಕ ಇವರ ಚರಣಗಳಲ್ಲಿ ಪ್ರೋಕ್ಷಣೆ ಮಾಡಿ.

ಅರ್ಘ್ಯಂ ಚ ಫಲಸಂಯುಕ್ತಂ ಗಂಧಪುಷ್ಪಾಕ್ಷತೈರ್ಯುತಮ್ |

ಗಣಾಧ್ಯಕ್ಷ ನಮಸ್ತೇಸ್ತು ಗೃಹಾಣ ಕರುಣಾನಿಧೇ ||

ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |

ಅರ್ಘ್ಯಂ ಸಮರ್ಪಯಾಮಿ ||

೫. ಆಚಮನ : ಎಡಗೈಯಲ್ಲಿ ಒಂದು ಉದ್ಧರಣೆ ನೀರನ್ನು ಮತ್ತು ಬಲಗೈಯಲ್ಲಿ ದೂರ್ವೆಯನ್ನು ತೆಗೆದುಕೊಳ್ಳಿ. ನಂತರ ‘ಸಮರ್ಪಯಾಮಿ’ ಎನ್ನುವಾಗ ಆ ನೀರನ್ನು ಮಹಾದೇವ, ಗೌರಿ ಮತ್ತು ಸಿದ್ಧಿವಿನಾಯಕ ಇವರ ಚರಣಗಳ ಮೇಲೆ ಪ್ರೋಕ್ಷಣೆ ಮಾಡಿ.

ವಿನಾಯಕ ನಮಸ್ತುಭ್ಯಂ ತ್ರಿದಶೈರಭಿವಂದಿತಮ್ |

ಗಂಗೋದಕೇನ ದೇವೇಶ ಶೀಘ್ರಮಾಚಮನಂ ಕುರು ||

ಅರ್ಥ: ಹೇ ವಿನಾಯಕಾ, ದೇವತೆಗಳೂ ವಂದಿಸುವ ದೇವಾ, ಈ ಗಂಗೆಯ ನೀರನ್ನು ಆಚಮನಕ್ಕಾಗಿ ನೀನು ಸ್ವೀಕರಿಸು.

ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |

ಆಚಮನೀಯಂ ಸಮರ್ಪಯಾಮಿ ||

೬. ಸ್ನಾನ: ಉದ್ಧರಣೆಯಲ್ಲಿ ನೀರನ್ನು ತೆಗೆದುಕೊಳ್ಳಿ. ನಂತರ ಬಲಗೈಯಲ್ಲಿ ದೂರ್ವೆಯನ್ನು ತೆಗೆದುಕೊಂಡು ‘ಸಮರ್ಪಯಾಮಿ’ ಎನ್ನುವಾಗ ಆ ನೀರನ್ನು ಮಹಾದೇವ, ಗೌರಿ ಮತ್ತು ಸಿದ್ಧಿವಿನಾಯಕ ಇವರ ಚರಣಗಳಲ್ಲಿ ಪ್ರೋಕ್ಷಣೆ ಮಾಡಿ.

ಗಂಗಾಸರಸ್ವತೀರೇವಾಪಯೋಷ್ಣೀಯಮುನಾಜಲೈಃ |

ಸ್ನಾಪಿತೋಸಿ ಮಯಾ ದೇವ ತಥಾ ಶಾಂತಿ ಕುರುಷ್ವ ಮೇ ||

ಅರ್ಥ : ಗಂಗಾ, ಸರಸ್ವತೀ, ರೇವಾ (ನರ್ಮದಾ), ಪಯೋಷ್ಣಿ ಮತ್ತು ಯಮುನಾ ಈ ನದಿಗಳ ನೀರಿನಿಂದ ನಾನು ನಿನಗೆ ಸ್ನಾನ ಮಾಡಿಸುತ್ತಿದ್ದೇನೆ. ಹೇ ದೇವಾ, ನನಗೆ ಶಾಂತಿಯನ್ನು ಪ್ರದಾನಿಸು.

ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |

ಸ್ನಾನಂ ಸಮರ್ಪಯಾಮಿ ||

೬ಅ. ಪಂಚಾಮೃತಸ್ನಾನ: ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆ ಇವುಗಳ ಸ್ನಾನ ಹಾಕಬೇಕು. ಬಲಗೈಯಲ್ಲಿ ದೂರ್ವೆಯನ್ನು ತೆಗೆದುಕೊಂಡು ‘ಸಮರ್ಪಯಾಮಿ’ ಎನ್ನುವಾಗ ಮಹಾದೇವ, ಗೌರಿ ಮತ್ತು ಸಿದ್ಧಿವಿನಾಯಕ ಇವರ ಚರಣಗಳಲ್ಲಿ ಹಾಲು, ನಂತರ ಶುದ್ಧೋದಕವನ್ನು ಪ್ರೋಕ್ಷಣೆ ಮಾಡಬೇಕು. ಇದೇ ರೀತಿ ಉಳಿದ ಉಪಚಾರಗಳಿಂದ ದೇವರಿಗೆ ಸ್ನಾನ ಹಾಕಬೇಕು.

ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |

ಪಯಸ್ನಾನಂ ಸಮರ್ಪಯಾಮಿ |

ತದಂತೇ ಶುದ್ಧೋದಕಸ್ನಾನಂ ಸಮರ್ಪಯಾಮಿ ||

ಮುಂದಿನ ಪ್ರತಿಯೊಂದು ಸ್ನಾನದ ನಂತರ ಮೇಲಿನ ಶುದ್ಧೋದಕದ ಮಂತ್ರವನ್ನು ಪಠಿಸಿ ದೇವರ ಚರಣಗಳಲ್ಲಿ ನೀರನ್ನು ಪ್ರೋಕ್ಷಣೆ ಮಾಡಬೇಕು.

ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |

ದಧಿಸ್ನಾನಂ ಸಮರ್ಪಯಾಮಿ ||

ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |

ಘೃತಸ್ನಾನಂ ಸಮರ್ಪಯಾಮಿ ||

ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |

ಮಧುಸ್ನಾನಂ ಸಮರ್ಪಯಾಮಿ ||

ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |

ಶರ್ಕರಾಸ್ನಾನಂ ಸಮರ್ಪಯಾಮಿ ||

೬ಆ. ಗಂಧೋದಕಸ್ನಾನ

ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ | ಗಂಧೋದಕಸ್ನಾನಂ ಸಮರ್ಪಯಾಮಿ || ತದಂತೇ ಶುದ್ಧೋದಕ ಸ್ನಾನಂ ಸಮರ್ಪಯಾಮಿ || (ನೀರಿನಲ್ಲಿ ಗಂಧ ಮತ್ತು ಕರ್ಪೂರವನ್ನು ಹಾಕಿ ಅದನ್ನು ದೇವರ ಚರಣಗಳಲ್ಲಿ ಪ್ರೋಕ್ಷಣೆ ಮಾಡಬೇಕು. ನಂತರ ಶುದ್ಧೋದಕವನ್ನು ಪ್ರೋಕ್ಷಣೆ ಮಾಡಬೇಕು.)

೬ಇ. ಅಭಿಷೇಕ: ಪಂಚಪಾತ್ರೆಯಲ್ಲಿ ನೀರನ್ನು ತುಂಬಿಕೊಳ್ಳಬೇಕು ಮತ್ತು ಬಲಗೈಯಲ್ಲಿ ದೂರ್ವೆಯನ್ನು ತೆಗೆದುಕೊಳ್ಳಬೇಕು. ನಂತರ ಉದ್ಧರಣೆಯಲ್ಲಿನ ನೀರನ್ನು ದೇವರ ಮೇಲೆ ಪ್ರೋಕ್ಷಣೆ ಮಾಡುವಾಗ ‘ಶ್ರೀಗಣಪತಿ ಅಥರ್ವಶೀರ್ಷ’ ಅಥವಾ ‘ಸಂಕಟನಾಶನ ಗಣಪತಿಸ್ತೋತ್ರ’ವನ್ನು ಪಠಿಸಬೇಕು.

೭. ವಸ್ತ್ರ: ಎರಡು ಗೆಜ್ಜೆವಸ್ತ್ರಗಳನ್ನು ತೆಗೆದುಕೊಳ್ಳಬೇಕು ಮತ್ತು ‘ಸಮರ್ಪಯಾಮಿ’ ಎನ್ನುವಾಗ ಅವುಗಳಲ್ಲಿನ ಒಂದು ವಸ್ತ್ರವನ್ನು ಮೂರ್ತಿಯ ಕೊರಳಿನಲ್ಲಿ ಅಲಂಕಾರದಂತೆ ಹಾಕಬೇಕು ಮತ್ತು ಇನ್ನೊಂದು ಮೂರ್ತಿಯ ಚರಣಗಳಲ್ಲಿ ಅರ್ಪಿಸಬೇಕು.

ರಕ್ತವಸ್ತ್ರಯುಗಂ ದೇವ ದೇವತಾರ್ಹಂ ಸುಮಂಗಲಮ್ |

ಸರ್ವಪ್ರದ ಗೃಹಾಣೇದಂ ಲಂಬೋದರ ಹರಾತ್ಮಜ ||

ಅರ್ಥ: ಹೇ ಶಿವಪುತ್ರನೇ, ಲಂಬೋದರನೇ, ಸುಯೋಗ್ಯ, ಸುಮಂಗಲ ಮತ್ತು ಎಲ್ಲ ವಿಷಯಗಳನ್ನು ಪ್ರದಾನಿಸುವ ಈ ಕೆಂಪು ವಸ್ತ್ರಗಳ ಜೋಡಿಯನ್ನು ನೀನು ದೇವತೆಗಳಿಗಾಗಿ ಸ್ವೀಕರಿಸು.

ಶ್ರೀ ಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |

ಕಾರ್ಪಾಸನಿರ್ಮಿತಂ ವಸ್ತ್ರಂ ಸಮರ್ಪಯಾಮಿ ||

೮. ಯಜ್ಞೋಪವೀತ: ಮಹಾದೇವ ಮತ್ತು ಸಿದ್ಧಿವಿನಾಯಕ ಇವರಿಗೆ ಯಜ್ಞೋಪವೀತ (ಜನಿವಾರ) ವನ್ನು ಅರ್ಪಿಸಬೇಕು ಮತ್ತು ದೇವಿಗೆ ಅಕ್ಷತೆಯನ್ನು ಅರ್ಪಿಸಬೇಕು.

ರಾಜತಂ ಬ್ರಹ್ಮಸೂತ್ರಂ ಚ ಕಾಂಚನಸ್ಯೋತ್ತರೀಯಕಮ್ |

ವಿನಾಯಕ ನಮಸ್ತೇಸ್ತು ಗೃಹಾಣ ಸುರವಂದಿತ ||

ಅರ್ಥ: ಹೇ ಸುರಗಣಪೂಜಿತ ವಿನಾಯಕಾ, ಸುವರ್ಣದ ಉತ್ತರೀಯ ಮತ್ತು ಬೆಳ್ಳಿಯಂತೆ ಹೊಳೆಯುವ ಯಜ್ಞೋಪವೀತ ವನ್ನು ನೀನು ಸ್ವೀಕರಿಸು.

ಶ್ರೀಉಮಾಮಹೇಶ್ವರಸಹಿತಶ್ರೀಸಿದ್ಧಿವಿನಾಯಕಾಯ ನಮಃ |

ಯಜ್ಞೋಪವೀತಂ ಸಮರ್ಪಯಾಮಿ ||

ಶ್ರೀ ಉಮಾಯೈ ನಮಃ | ಉಪವೀತಾರ್ಥೇ ಅಕ್ಷತಾನ್ಸಮರ್ಪಯಾಮಿ ||

ನಿಮ್ಮನ್ನು ಪ್ರೀತಿಸುವವರು ನಿಮಗೆ ಸಿಗುತ್ತಿಲ್ಲವೇ?
ನಿಮಗೆ ಮದುವೆಯಾಗುತ್ತಿಲ್ಲವೇ? ಮಕ್ಕಳಾಗದೇ ಕೊರಗುತ್ತಿದ್ದೀರಾ? ಗಂಡ ಹೆಂಡತಿ ಜಗಳವೇ? ಅತ್ತೆ-ಸೊಸೆ ಕಾಟ, ನಾದಿನಿಯರ ಪಿತೂರಿಗೆ ನೊಂದಿದ್ದೀರಾ? ಕುಟುಂಬ ಕಲಹ ತಾರಕ್ಕೆರುತ್ತಿದ್ದೀಯಾ? ಗಂಡನಿಗೆ ಬೇರೆ ಸಂಬಂಧವಿದೆಯಾ? ಹೆಂಡತಿಗೆ ಮತ್ತೊಬ್ಬರ ಸಹಾವಾಸವೇ? ಶತ್ರುಗಳ ಕಾಟಕ್ಕೆ ನಷ್ಟದಲ್ಲೀದ್ದಾರಾ? ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗವಾಗಿದೆಯೇ? ಬಿಜಿನೆಸ್ ನಡಿಯುತ್ತಿಲ್ಲವೇ? ಮನೆ ಕಟ್ಟಲಾಗುತ್ತಿಲ್ಲವೇ? ಪ್ರತಿ ಹೆಜ್ಜೆಗೂ ತೊಂದರೆಯೇ? ಅದೆಂಥದ್ದೇ ಕೆಡಕಿರಲಿ, ತೊಂದರೆಯಿರಲಿ ವಶೀಕರಣದ ಮೂಲಕ ನಿಮ್ಮ ಸಮಸ್ಯೆಗೆ ಇಲ್ಲಿದೆ ಪರಿಹಾರ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ ಜಾತಕ ಭಾವಚಿತ್ರದ ಆಧಾರದ ಮೇಲೆ ಖಚಿತ ಜ್ಯೋತಿಷ್ಯ ನಿಶ್ಚಿತ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಜ್ಯೋತಿಷ್ಯ ಪೀಠದ ತಾಂತ್ರಿಕ್ ವಿದ್ಯೆ ಮೂಲಕ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564 ಅವರಿಂದ ನಿಮ್ಮ ಎಂಥದೇ ನಿಗೂಢ ಸಮಸ್ಯೆಗಳಿಗೂ ಪರಿಹಾರ ನೀಡಲಿದ್ದಾರೆ.

ಯಜ್ಞೋಪವೀತವನ್ನು ಶ್ರೀ ಗಣೇಶನ ಕೊರಳಲ್ಲಿ ಹಾಕ ಬೇಕು ಮತ್ತು ನಂತರ ಅದನ್ನು ಮೂರ್ತಿಯ ಬಲಗೈ ಕೆಳಗೆ ತರಬೇಕು. ಪೂಜೆಯಲ್ಲಿ ಮಹಾದೇವನ ಮೂರ್ತಿ ಇಲ್ಲದಿರುವುದರಿಂದ, ಮಹಾದೇವನಿಗೆ ಆವಾಹನೆ ಮಾಡಿದ ಜಾಗದಲ್ಲಿ ಯಜ್ಞೋಪವೀತವನ್ನು ಅರ್ಪಿಸಬೇಕು.

೯. ಚಂದನ: ಶ್ರೀ ಗಣಪತಿಗೆ ಅನಾಮಿಕಾದಿಂದ ಗಂಧವನ್ನು ಹಚ್ಚಬೇಕು.

ಶ್ರೀಖಂಡ ಚಂದನಂ ದಿವ್ಯಂ ಗಂಧಾಢ್ಯಂ ಸುಮನೋಹರಮ್ |

ವಿಲೇಪನಂ ಸುರಶ್ರೇಷ್ಠ ಚಂದನಂ ಪ್ರತಿಗೃಹ್ಯತಾಮ್ ||

ಅರ್ಥ: ಹೇ ದೇವಶ್ರೇಷ್ಠನೇ, ಅತ್ಯಂತ ಮನೋಹರ, ತುಂಬಾ ಸುಗಂಧಯುಕ್ತದಿವ್ಯವಾದ ಶ್ರೀಖಂಡ ಚಂದನದ ಲೇಪನವನ್ನು ನೀನು ಸ್ವೀಕರಿಸು.

Tags: # Ganesh ChaturthiShree Ganesha Puja
ShareTweetSendShare
Join us on:

Related Posts

astrology

ಮಾಟ-ಮಂತ್ರ ಕೆಟ್ಟ ಶಕ್ತಿ ಕೆಟ್ಟದೃಷ್ಟಿ ಕಳೆದು ಮನೆಯಲ್ಲಿ ಸುಖ ಶಾಂತಿ ನೆಲೆಸಲು ಅಮವಾಸ್ಯೆ ದಿನ ಹೀಗೆ ಮಾಡಿ

by admin
March 18, 2026
0

ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ಜ್ಞಾನೇಶ್ವರ್ ರಾವ್ ಗುರೂಜಿ 8548998564 ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ...

ಎಲ್‌ಪಿಜಿ ಗ್ರಾಹಕರೆ ಗಮನಿಸಿ: ಗ್ಯಾಸ್ ಸಬ್ಸಿಡಿ ಪಡೆಯಲು ಆಧಾರ್ ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯ

ಎಲ್‌ಪಿಜಿ ಗ್ರಾಹಕರೆ ಗಮನಿಸಿ: ಗ್ಯಾಸ್ ಸಬ್ಸಿಡಿ ಪಡೆಯಲು ಆಧಾರ್ ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯ

by Shwetha
March 18, 2026
0

ನವದೆಹಲಿ: ದೇಶಾದ್ಯಂತ ಇರುವ ಕೋಟ್ಯಂತರ ಅಡುಗೆ ಅನಿಲ (ಎಲ್‌ಪಿಜಿ) ಗ್ರಾಹಕರಿಗೆ ಕೇಂದ್ರ ಸರ್ಕಾರವು ಮಹತ್ವದ ಸೂಚನೆಯೊಂದನ್ನು ನೀಡಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಎಲ್ಲಾ ಗೃಹಬಳಕೆಯ...

ಖಾಕಿ ಕಾಮಕಾಂಡಕ್ಕೆ ಬಿತ್ತು ಬ್ರೇಕ್: ರಕ್ಷಣೆ ಕೋರಿ ಬಂದವರನ್ನೇ ಮಂಚಕ್ಕೆ ಕರೆದ ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಅಮಾನತು

ಖಾಕಿ ಕಾಮಕಾಂಡಕ್ಕೆ ಬಿತ್ತು ಬ್ರೇಕ್: ರಕ್ಷಣೆ ಕೋರಿ ಬಂದವರನ್ನೇ ಮಂಚಕ್ಕೆ ಕರೆದ ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಅಮಾನತು

by Shwetha
March 18, 2026
0

ಮಂಗಳೂರು: ರಕ್ಷಣೆ ಕೋರಿ ಪೊಲೀಸ್ ಠಾಣೆಯ ಮೆಟ್ಟಿಲೇರುವ ಮಹಿಳೆಯರ ಸಂಕಷ್ಟಕ್ಕೆ ಸ್ಪಂದಿಸಿ ನ್ಯಾಯ ಒದಗಿಸಬೇಕಾದ ರಕ್ಷಕರೇ ಭಕ್ಷಕರಾದ ಘನಘೋರ ಪ್ರಕರಣವೊಂದು ಕರಾವಳಿಯಲ್ಲಿ ಸದ್ದು ಮಾಡುತ್ತಿದೆ. ಕೌಟುಂಬಿಕ ಕಲಹದ...

ಕೋರಮಂಗಲ ಮಿನಿ ನಾರ್ತ್ ಇಂಡಿಯಾ, ಸರ್ಜಾಪುರ ಬಿಹಾರ, ಎಲೆಕ್ಟ್ರಾನಿಕ್ ಸಿಟಿ ಆಂಧ್ರ… ಹಾಗಾದರೆ ಕನ್ನಡಿಗರ ಬೆಂಗಳೂರು ಎಲ್ಲಿದೆ? ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ ಪೋಸ್ಟ್

ಕೋರಮಂಗಲ ಮಿನಿ ನಾರ್ತ್ ಇಂಡಿಯಾ, ಸರ್ಜಾಪುರ ಬಿಹಾರ, ಎಲೆಕ್ಟ್ರಾನಿಕ್ ಸಿಟಿ ಆಂಧ್ರ… ಹಾಗಾದರೆ ಕನ್ನಡಿಗರ ಬೆಂಗಳೂರು ಎಲ್ಲಿದೆ? ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚು ಹಚ್ಚಿದ ಪೋಸ್ಟ್

by Shwetha
March 18, 2026
0

ಜಾಗತಿಕ ಭೂಪಟದಲ್ಲಿ ಸಿಲಿಕಾನ್ ಸಿಟಿ ಎಂದು ರಾರಾಜಿಸುತ್ತಿರುವ ನಮ್ಮ ಬೆಂಗಳೂರು, ಅಭಿವೃದ್ಧಿಯ ಓಟದಲ್ಲಿ ತನ್ನ ಮೂಲ ಅಸ್ಮಿತೆಯನ್ನೇ ಕಳೆದುಕೊಳ್ಳುತ್ತಿದೆಯೇ? ಉದ್ಯೋಗ ಅರಸಿ ಬರುವ ಪರಭಾಷಿಗರ ಪ್ರವಾಹದಲ್ಲಿ ಕನ್ನಡದ...

ಗ್ಯಾಸ್ ಬಳಕೆದಾರರಿಗೆ ಕೇಂದ್ರದ ಮಹತ್ವದ ಸ್ಪಷ್ಟನೆ: eKYC ಬಗ್ಗೆ ಗೊಂದಲ ನಿವಾರಣೆ

ಗ್ಯಾಸ್ ಬಳಕೆದಾರರಿಗೆ ಕೇಂದ್ರದ ಮಹತ್ವದ ಸ್ಪಷ್ಟನೆ: eKYC ಬಗ್ಗೆ ಗೊಂದಲ ನಿವಾರಣೆ

by Shwetha
March 18, 2026
0

ಅಡುಗೆ ಅನಿಲ (LPG) ಬಳಕೆದಾರರಲ್ಲಿ eKYC ಕುರಿತು ಉಂಟಾಗಿದ್ದ ಗೊಂದಲಕ್ಕೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಇದುವರೆಗೆ eKYC ಪೂರ್ಣಗೊಳಿಸದವರು ಮಾತ್ರ ಈ ಪ್ರಕ್ರಿಯೆಯನ್ನು ಮಾಡಬೇಕಾಗಿದ್ದು, ಈಗಾಗಲೇ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram