ಅವಳು…ನನ್ನವಳು ಎಲ್ಲರಂತಲ್ಲ…
ಅವಳು ಕೊಂಚ ಡಿಫ್ರೆಂಟ್. ಯಾಕಪ್ಪ ಅಂದ್ರೆ ಅವಳ ಯೋಚನೆಗಳು ತುಂಬಾ ಅದ್ಭುತ…
ಅವಳ ಯೋಚನೆ ಶಕ್ತಿ , ನಡುವಳಿಕೆ , ಆ ಮಾತು ,ಹೇಳುವಂತ ಪ್ರತಿಯೊಂದು ವಿಷಯವು
ಎಲ್ಲರಿಗಿಂತ ಕೊಂಚ ಡಿಫ್ರೆಂಟ್……
ನನ್ನ ಪ್ರೇಯಸಿಯ ಪ್ರೀತಿ ಬಲು ಅಪರೂಪ..ಅದು ಹೇಗೋ ಏನೋ ತಿಳಿದಿಲ್ಲ ..
ನಾನು ಯಾವಾಗ ಅವಳನ್ನು ಪ್ರೀತಿಸಲು ಪ್ರಾಂಭಿಸಿದೆ ಅನ್ನೋದು ಗೊತ್ತಿಲ್ಲ..
ಹೇಳದೆ… ಕೇಳದೆ… ಹುಟ್ಟಿದ ಪ್ರೀತಿ ಇದು.
ಅವಳ ಪ್ರೀತಿ ಇಲ್ಲದೆ ಬದುಕುವುದೇ ದುಸ್ತರ ಎನ್ನುವ ಸ್ಥಿತಿಗೆ ಬಂದು ನಿಂತಿದೆ.
ಅವಳು ಅಂತಾ ಮ್ಯಾಜಿಕ್ ಏನು ಮಾಡಿಲ್ಲ..ಆದ್ರೂ ಅವಳು ಇಲ್ದೆ, ನನ್ನ ಪ್ರಪಂಚ ಶೂನ್ಯ ಎನಿಸುತ್ತೆ…
ಅವಳು, ನಾನು, ಒಟ್ಟಿಗೆ ಕಳೆದಂತ ಸಮಯ..ನನ್ನ ಮುಂದೆ ಅವಳು ಓಡಾಡಿದ್ದು…ಮಾತಾಡಿದ್ದು..ಎಲ್ಲವೂ ಕಣ್ಣಿಗೆ ಕಟ್ಟಿದ ಹಾಗಿದೆ…
ಅವಳು ಎಲ್ಲೇ ಇದ್ದರೂ ನನ್ನವಳೆ…ಯಾಕಂದ್ರೆ ಆ ನಂಬಿಕೆ ಅವಳ ಪ್ರೀತಿ ಮೇಲೆ..
ಹೇಳ್ತಾರೆ ಪ್ರೀತಿಸಿದವರು ದೂರ ಇದ್ರೆ ಜೊತೆಗಿರೋಕಾಗಲ್ಲ .ದೂರ ಆಗ್ತಾರೆ ಅಂತ ಹೇಳ್ತಾರೆ. ಇಲ್ಲ ಬ್ರೇಕಪ್ ಆಗುತ್ತೆ ಅಂತ ಹೇಳ್ತಾರೆ. ಆದರೆ ಇವತ್ತಿನವರೆಗೂ ನನಗೆ ತಿಳಿದೇ ಇಲ್ಲ .
ನಾನು ಅವಳು ಒಟ್ಟಿಗೆ ಕಳೆದ ದಿನಗಳು ಮತ್ತುಸಮಯ ತುಂಬಾ ಕಡಿಮೆ.
ಆದರೆ ಒಂದ ವಿಶೇಷ ಏನಂದ್ರೆ ನಮ್ಮಿಬ್ಬರ ಮನಸ್ಸು ಒಂದು ಕ್ಷಣ ಬಿಟ್ಟಿಲ್ಲ…
ಸದಾ ಅವಳ ಜಪದಲ್ಲೇ ಇರುತ್ತೆ. ಯಾಕೆ ಗೊತ್ತಾ….ಅದಕ್ಕೆ ಕಾರಣ ಅವಳ ಪ್ರೀತಿ .
ಅವಳು ಜಾದು ಏನೂ ಮಾಡಿಲ್ಲ, ಬರೀ ಪ್ರೀತಿಸಿದ್ದಾಳಷ್ಟೇ. ಅವಳ ಪ್ರೀತಿಗೆ ಸರಿಸಾಟಿ ಏನು ಇಲ್ಲ.
ಅವಳಿಗೆ ಅವಳೇ ಸರಿಸಾಟಿ ಯಾಕಂದ್ರೆ ಅವಳನ್ನು ನೋಡಿದಾಗೆಲ್ಲ ನನಗೆ ನಮ್ಮಮ್ಮ ನೆನಪಾಗ್ತಾರೆ.
ಕೆಲವೊಮ್ಮೆ ನನ್ನ ಅಕ್ಕ. ನೆನಪಾಗ್ತಾಳೆ . ಕೆಲವೊಮ್ಮೆ ಚಿಕ್ಕ ಮಗು ತರ ಆಡ್ತಾಳೆ .
ಇನ್ ಕೆಲವೊಮ್ಮೆ ನನಗಿಂತ ದೊಡ್ಡ ಸ್ನೇಹಿತೆ ರೀತಿ ಇರುತ್ತಾಳೆ..
ನನ್ನ ಕಷ್ಟಗಳಿಗಾಗಿದ್ದಾಳೆ ..ನನ್ನ ಸಂತೋಷದಲ್ಲಂತೂ ಕೇಳ ಬೇಡಿ ಸದಾ ಜೊತೆ….
ಅವಳನ್ನು ನಾನು ಇಷ್ಟು ಹಚ್ಚಿಕೊಳ್ಳೋಕೆ ಕಾರಣ ಏನು ಅಂತ ಗೊತ್ತಿಲ್ಲ..
ಆದರೆ ಅವಳು ಇಲ್ಲಾ ಅಂದ್ರೆ ನನಗೆ ಕೊಂಚ ಹುಚ್ಚು ಹಿಡಿಯೋದು ಅಂತು ನಿಜಾ…
(ಮುಂದುವರೆಯುವುದು)
Ranjeet.m.y








