KPTCL ಪರೀಕ್ಷೆ ಅಕ್ರಮ : ಪ್ರಮುಖ ಆರೋಪಿಯ ಬಂಧನ
ಬೆಳಗಾವಿ : ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆ ಗೋಕಾಕ ನಿವಾಸಿ ಸಂಜೀವ್ ಲಕ್ಷ್ಮಣ ಭಂಡಾರಿ ಬಂಧಿತ ಆರೋಪಿಯಾಗಿದ್ದು, ಬೆಳಗಾವಿ ಎಸ್ಪಿ ಸಂಜೀವ ಪಾಟೀಲ್ ನೇತೃತ್ವದಲ್ಲಿ ಕಾರ್ಯಾಚಾರಣೆ ನಡೆದಿದೆ.
ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸರ ಸಹಾಯ ಪಡೆದು ಆರೋಪಿಯನ್ನು ಬಂಧಿಸಲಾಗಿದ್ದು, ಗೋಕಾಕಿನ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಆರೋಪಿಯನ್ನ ಹಾಜರುಪಡಿಸಲಾಗಿತ್ತು.

ನ್ಯಾಯಾಲಯ ಆರೋಪಿಯನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.
ಅಲ್ಲದೆ ಸಂಜೀವ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ.
ಅಂದಹಾಗೆ ಸಜೀವ್ ಬಂಧನದೊಂದಿಗೆ ಈ ಪ್ರಕರಣದಲ್ಲಿ ಬಂಧನವಾಗಿರುವವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಆಗಸ್ಟ್ 22 ರಂದು 9 ಜನರ, ಆಗಷ್ಟ್ 24 ರಂದು ಮತ್ತೆ 3 ಜನರನ್ನು ಬಂಧಿಸಲಾಗಿತ್ತು.
ಆಗಸ್ಟ್ 7 ರಂದು ರಾಜ್ಯಾದ್ಯಂತ ಪರೀಕ್ಷೆ ನಡೆದಿತ್ತು. ಗೋಕಾಕನಲ್ಲಿ ಪರೀಕ್ಷಾರ್ಥಿ ಸಿದ್ದಪ್ಪ ಮದಿಹಳ್ಳಿಯಿಂದ ಸ್ಮಾರ್ಟ್ ವಾಚ್ ಬಳಸಿ, ಪ್ರಶ್ನೆ ಪತ್ರಿಕೆ ಪೋಟೋ ತೆಗೆದು ಟೆಲಿಗ್ರಾಮ್ ಆ್ಯಪ್ ಮೂಲಕ ಲೀಕ್ ಮಾಡಿದ್ದ.








