Virat Kohli : ವಿರಾಟ್ ಕೊಹ್ಲಿ ಟಿ 20 ಪ್ಲೇಯರ್ ಅಲ್ಲ
ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಆಟದ ಬಗ್ಗೆ ಪಾಕಿಸ್ತಾನ್ ತಂಡದ ಮಾಜಿ ಕ್ಯಾಪ್ಟನ್ ರಷೀದ್ ಲತಿಫ್ ಟೀಕೆ ಮಾಡಿದ್ದಾರೆ.
ಟಿ 20 ಫಾರ್ಮೆಟ್ ನಲ್ಲಿ ವಿರಾಟ್ ಕೊಹ್ಲಿ ಎಂದಿಗೂ ರೋಹಿತ್ ಶರ್ಮಾ ಅಥವಾ ಸೂರ್ಯ ಕುಮಾರ್ ಯಾದವ್ ರಂತಹ ಆಟಗಾರ ಆಗಲು ಸಾಧ್ಯವೇ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೊಹ್ಲಿ ಫಾರ್ಮ್ ಬಗ್ಗೆ ಮಾತನಾಡಿದ ರಷೀದ್ ಲತಿಫ್, ಚುಟುಕು ಕ್ರಿಕೆಟ್ ನಲ್ಲಿ ಕೊಹ್ಲಿ ಎಂದಿಗೂ ಗ್ರೇಟ್ ಪ್ಲೇಯರ್ ಆಗಲು ಸಾಧ್ಯವಿಲ್ಲ.
ರೋಹಿತ್ ಶರ್ಮಾ ಪವರ್ ಪ್ಲೇನಲ್ಲಿ ಅದ್ಭುತವಾಗಿ ಆಡುತ್ತಾರೆ, ಕೊಹ್ಲಿ ಮಾತ್ರ 30 – 35 ಎಸೆತಗಳನ್ನು ಎದುರಿಸಿದ ಬಳಿಕ ದೊಡ್ಡ ಹೊಡೆತಗಳಿಗೆ ಮುಂದಾಗುತ್ತಾರೆ ಎಂದಿದ್ದಾರೆ.

ಕೇನ್ ವಿಲಿಯಂಸನ್, ಜೋ ರೂಟ್, ಸ್ಟಿವ್ ಸ್ಮಿತ್ ಅವರೊಂದಿಗೆ ಕೊಹ್ಲಿ ಅವರನ್ನ ಹೋಲಿಕೆ ಮಾಡುತ್ತೇವೆ.
ಆದ್ರೆ ಇವರ್ಯಾರು ಟಿ 20 ಕ್ರಿಕೆಟ್ ನಲ್ಲಿ ಒಂಟಿ ಕೈಯಲ್ಲಿ ಪಂದ್ಯವನ್ನು ಗೆಲ್ಲಿಸಿದ ನಿರ್ದಶನಗಳು ಇಲ್ಲ.
ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ ಗ್ರೇಟ್ ಪ್ಲೇಯರ್. ಆದ್ರೆ ಈಗಿನ ಟಿ 20 ಪ್ಲೇಯರ್ ಮಾತ್ರವಲ್ಲ.
ರೋಹಿತ್ ಅಥವಾ ಸೂರ್ಯ ಕುಮಾರ್ ಅವರಂತೆ ವಿರಾಟ್ ಆಡುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿರಾಟ್ ಕೊಹ್ಲಿ ಈವರೆಗೂ 101 ಟಿ 20 ಪಂದ್ಯಗಳನ್ನಾಡಿದ್ದು 3402 ರನ್ ಗಳಿಸಿದ್ದಾರೆ.
ಅವರ ವೈಯುಕ್ತಿಕ ಗರಿಷ್ಟ ಸ್ಕೋರ್ 94. 31 ಅರ್ಧಶತಕಗಳನ್ನು ಗಳಿಸಿದ್ದಾರೆ.
ಐಪಿಎಲ್ ನಲ್ಲಿ 223 ಪಂದ್ಯಗಳಲ್ಲಿ ವಿರಾಟ್ 6624 ರನ್ ಗಳಿಸಿದ್ದಾರೆ. ಅತ್ಯಧಿಕ ಸ್ಕೋರ್ 113. ಐದು ಶತಕ, 44 ಅರ್ಧಶತಕಗಳಿವೆ.








