ಪರೀಕ್ಷೆಗೆ ಹಾಜರಾಗಲು ಚಂಪಾವತಿ ನದಿ ಈಜಿದ ಯುವತಿ…
ಪರೀಕ್ಷೆಗೆ ಹಾಜರಾಗುವ ಸಲುವಾಗಿ 21 ವರ್ಷದ ಯುವತಿಯೊಬ್ಬರು ಉಕ್ಕಿ ಹರಿಯುತ್ತಿದ್ದ ಚಂಪಾವತಿ ನದಿಯನ್ನ ಈಜಿ ದಡ ಸೇರಿರುವ ಘಟನೆ ಶುಕ್ರವಾರ ಆಂಧ್ರಪ್ರದೇಶದ ವಿಜಯನಗರಂನಲ್ಲಿ ನಡೆದಿದೆ.
ಯುವತಿಯನ್ನ ಗಜಪತಿನಗರ ಮಂಡಲದ ಮರಿವಲಸ ಗ್ರಾಮದ ನಿವಾಸಿ ತಡ್ಡಿ ಕಲಾವತಿ ಎಂದು ಗುರುತಿಸಲಾಗಿದೆ. ಶನಿವಾರ ನಡೆಯಬೇಕಿದ್ದ ಪರೀಕ್ಷೆಗೆ ಹಾಜರಾಗಲೆಂದು ಕಲಾವತಿ ತನ್ನ ಜೀವವನ್ನು ಪಣಕ್ಕಿಟ್ಟು ತನ್ನ ಇಬ್ಬರು ಸಹೋದರರ ಸಹಾಯದಿಂದ ಪ್ರವಾಹಕ್ಕೆ ಸಿಲುಕಿದ ಚಂಪಾವತಿ ನದಿಯನ್ನ ದಾಟಿದ್ದಾಳೆ.
35 ಸೆಕೆಂಡುಗಳ ಸುದೀರ್ಘ ವೀಡಿಯೊದಲ್ಲಿ, ಕಲಾವತಿ ಸಹೋದರರು ಅವಳನ್ನು ತಮ್ಮ ಭುಜದ ಮೇಲೆ ಹೊತ್ತುಕೊಂಡು ನದಿಯ ಇನ್ನೊಂದು ದಡಕ್ಕೆ ಸ್ಥಳಾಂತರಿಸುವುದನ್ನು ನೋಡಬಹುದು. ನೀರಿನ ಹರಿವು ಹೆಚ್ಚಾಗಿದ್ದರಿಂದ ನೀರಿನಲ್ಲಿ ಹೆಣಗಾಡುತ್ತಿರುವುದನ್ನ ಕಾಣಬಹುದು.
https://twitter.com/i/status/1568448339078967301
ಭಾರೀ ಮಳೆಯಿಂದಾಗಿ, ಆಂಧ್ರ ಪ್ರದೇಶದ ಉತ್ತರ ಕರಾವಳಿ ಹಲವಾರು ನದಿಗಳು ತುಂಬಿ ಹರಿಯುತ್ತಿವೆ. ಈಗಾಗಿ ಸಾರಿಗೆ ಸಂಪರ್ಕ ಕಡಿತಗೊಣಂಡಿದ್ದು, ನದಿಯಲ್ಲೇ ಈಜಿ ಪರಿಕ್ಷೆ ಬರೆದಿದ್ದಾಳೆ ಯುವತಿ…








