Uttarapradesha Rain: ಲಕ್ನೋದಲ್ಲಿ ಗೋಡೆ ಕುಸಿದು 9 ಕಾರ್ಮಿಕರ ಸಾವು
ಉತ್ತರ ಪ್ರದೇಶ: ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮುಂಜಾನೆ 3 ಗಂಟೆಗೆ ಲಕ್ನೋದಲ್ಲಿ ದಿಲ್ಕುಶಾ ಕಾಲೋನಿಯಲ್ಲಿ ಗೋಡೆ ಕುಸಿದು 9 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಶುಕ್ರವಾರ ನಡೆದಿದೆ.
ಇಬ್ಬರು ಗಾಯಗೊಂಡಿದ್ದು ಅವರನ್ನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರೆಲ್ಲರೂ ಝಾನ್ಸಿ ಜಿಲ್ಲೆಯ ಪಚ್ವಾರಾ ನಿವಾಸಿಗಳು ಎಂದು ಗುರುತಿಸಲಾಗಿದೆ.
ಇವರೆಲ್ಲರೂ ಕಂಟೋನ್ಮೆಂಟ್ ಪ್ರದೇಶದ ಸೇನಾ ಕ್ಯಾಂಪಸ್‌ನ ಹಳೆ ಗೋಡೆಯ ಪಕ್ಕದಲ್ಲಿ ಗುಡಿಸಲಿನಲ್ಲಿ ವಾಸಿಸುತ್ತಿದ್ದು, ಹೊಸ ಗಡಿ ಗೋಡೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ತಡರಾತ್ರಿ ರಕ್ಷಣಾ ಕಾರ್ಯ ಪೂರ್ಣಗೊಂಡಿದೆ. ಬೆಳಿಗ್ಗೆ 7 ಗಂಟೆಗೆ 9 ಜನರನ್ನು ಹೊರತೆಗೆಯುಲಾಗಿದ್ದು, ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ಸಿವಿಲ್ ಆಸ್ಪತ್ರೆಯ ನಿರ್ದೇಶಕ ಆನಂದ್ ಓಜಾ ಹೇಳುತ್ತಾರೆ.
https://twitter.com/i/status/1570627150381735938
ಮೃತರ ಕುಟುಂಬಗಳಿಗೆ ಸಿಎಂ ಯೋಗಿ ಆದಿತ್ಯನಾಥ್ ಸಾಂತ್ವನ ಹೇಳಿದ್ದಾರೆ. ಮೃತರ ಕುಟುಂಬಕ್ಕೆ ಸಿಎಂ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿ, ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲು ಸೂಚನೆ ನೀಡಿದ್ದಾರೆ. ಗೃಹ ಸಚಿವ ಅಮಿತ್ ಶಾ ಮತ್ತು ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅಪಘಾತದ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಕೂಲಿ ಕಾರ್ಮಿಕರು ಹಳೆ ಗೋಡೆಯ ಆಸರೆಯಲ್ಲಿ ಗುಡಿಸಲು ಕಟ್ಟಿಕೊಂಡು ಜೀವನ ನಡೆಸುತ್ತಿದ್ದರು. ಮೂರು ದಿನಗಳಿಂದ ಲಕ್ನೋದಲ್ಲಿ ಎಡಬಿಡದೆ ಮಳೆಯಾಗುತ್ತಿದೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಭಾರಿ ಮಳೆಯಿಂದ ಗೋಡೆ ಕುಸಿದಿದೆ.








