ಸ್ಯಾಂಡಲ್ ವುಡ್ ನ ಜಂಟಲ್ ಮನ್ ಮತ್ತೆ ತೆರೆ ಮೇಲೆ ಬರೋಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾನೆ. ಅಂದರೆ ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್ಮನ್ ಸಿನಿಮಾ ಮರು ಬಿಡುಗಡೆ ಆಗಲಿದೆ. ಕೊರೊನಾ ಲಾಕ್ ಡೌನ್ ಗೂ ಮುನ್ನ ಥಿಯೇಟರ್ ಅಂಗಳಕ್ಕೆ ಎಂಟ್ರಿಕೊಟ್ಟಿದ್ದ ಜಂಟಲ್ ಮನ್ ಗೆ ಪ್ರೇಕ್ಷಕರು ಓಕೆ ಎಂದಿದ್ದರು. ಆ ನಂತರ ಬಿಡುಗಡೆ ಆದ ಪಾಪ್ ಕಾರ್ನ್ ಮಂಕಿ ಟೈಗರ್, ಶಿವಾಜಿ ಸೂರತ್ಕಲ್ ಮುಂತಾದ ಸಿನಿಮಾಗಳಿಗೆ ದಾರಿ ಬಿಟ್ಟುಕೊಟ್ಟು ನೇಪತ್ಯಕ್ಕೆ ಸರಿದಿತ್ತು.
ಕೊರೊನಾ ಕಾರಣಕ್ಕೇನೋ ಆಗ ಜಂಟಲ್ ಮನ್ ಸಿನಿಮಾ ಹೆಚ್ಚಿನ ಜನಕ್ಕೆ ತಲುಪಲಿಲ್ಲ. ಆದರೆ ಈ ಸಿನಿಮಾದ ಹಾಡುಗಳು ಸದ್ಯ ಯೂಟ್ಯೂಬ್ ನಲ್ಲಿ ಹಾಗೂ ಟಿಕ್ಟಾಕ್ ನಲ್ಲಿ ಸೂಪರ್ ಹಿಟ್ ಆಗಿದೆ. ಹಾಗಾಗಿ ಕೊರೊನಾ ಮುಗಿದು ಚಿತ್ರಮಂದಿರಗಳು ಪುನರ್ ಪ್ರಾರಂಭ ಆದಾಗ ಸಿನಿಮಾವನ್ನು ಮರುಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.
ಚಿತ್ರಮಂದಿರಗಳು ಪುನರ್ ಆರಂಭವಾದಾಗ ದೊಡ್ಡ ಸಿನಿಮಾಗಳು ಬಿಡುಗಡೆ ಆಗಲು ಸ್ವಲ್ಪ ಸಮಯ ಹಿಡಿಯುತ್ತದೆ. ಆ ಸಮಯದಲ್ಲಿ ನಾವು ಜಂಟಲ್ಮನ್ ಸಿನಿಮಾ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ ಚಿತ್ರತಂಡದವರು.








