Arun Singh | ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ
ಬೀದರ್ : ಮುಂದಿನ ಚುನಾವಣೆಯಲ್ಲಿ 150 ಸೀಟುಗಳನ್ನು ಗೆದ್ದು ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೀದರ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅರುಣ್ ಸಿಂಗ್, ಕಾಂಗ್ರೆಸ್ ಪಕ್ಷ ಲೀಡರ್ ಲೆಸ್ ಪಾರ್ಟಿ, ರಾಹುಲ್ ಗಾಂಧಿ ಲೀಡರ್ಶಿಪ್ ಫೆಲ್ ಆಗಿದೆ.
ಕಾಂಗ್ರೆಸ್ ನ ಜನರೆ ಕಾಂಗ್ರೆಸ್ ತೋಡೋ ಮಾಡುತ್ತಾ ಇದ್ದಾರೆ, ನಮಗೆ ಏನು ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗ ಅವರ ಅವಧಿಯಲ್ಲಿ 23 ಹಿಂದುಗಳ ಹತ್ಯೆ ಆಗಿತ್ತು.
ಗೋ ಹತ್ಯೆ ಜಾನುವಾರ ಮಾಂಸದ ಬಗ್ಗೆ ಅವರ ಹೇಳಿಕೆ ಕರ್ನಾಟಕದ ಜನರು ಮರೆತಿಲ್ಲ.
ಭಾರತ, ಕರ್ನಾಟಕ ಸಂಸ್ಕೃತಿ ಬಗ್ಗೆ ಸಿದ್ದರಾಮಯ್ಯ ಅವರಿಗೆ ಮಾಹಿತಿ ಇಲ್ಲ.
ಒಂದು ವೇಳೆ ಅವರಿಗೆ ಈ ಬಗ್ಗೆ ಮಾಹಿತಿ ಇದ್ದರೆ ಅವರು ಹೀಗೆ ಮಾತನಾಡುತ್ತಾ ಇರಲಿಲ್ಲ.
ಅಧಿಕಾರದ ದಾಹ ಮತ್ತು ತುಷ್ಟಿಕರಣ ರಾಜಕಾರಣ ಅವರು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.








