Raichur | ಮನೆಗೋಡೆ ಕುಸಿದು ಮೂವರು ಸಾವು
ರಾಯಚೂರು : ನಿರಂತರ ಮಳೆಗೆ ಮನೆಗೋಡೆ ಕುಸಿದು ಮೂವರು ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕುರಡಿ ಗ್ರಾಮದಲ್ಲಿ ನಡೆದಿದೆ.
ಕುರಡಿ ಗ್ರಾಮದ ಪರಮೇಶ (45) ಪರಮೇಶನ ಪತ್ನಿ ಜಯಮ್ಮ (39) ಹಾಗೂ ಪರಮೇಶನ ತಮ್ಮನ ಮಗ ಭರತ್ (5) ಮೃತರಾಗಿದ್ದಾರೆ.
ಇಂದು ಬೆಳಗಿನ ಜಾವ ಮನೆ ಗೋಡೆ ಕುಸಿದ್ದು, ಮನೆಯಲ್ಲಿ ಮಲಗಿದ್ದ ಪರಮೇಶ ಹಾಊ ಜಯಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಬಾಲಕ ಭರತ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾನೆ.
ಮಾನ್ವಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.