8 ನೇ ತರಗತಿ ಪಾಸ್ ಆದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗ….
ಪೋಸ್ಟ್ ಆಫೀಸ್ ನಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಟ್ರೇಡರ್ಸ್ ಹುದ್ದೆಗಳಿಗಾಗಿ ಅರ್ಜಿ ಅಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲ ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ indiapost.gov.in ಗೆ ಭೇಟಿ ನೀಡಿ , ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
8ನೇ ತರಗತಿ ಪಾಸ್ ಆದ ನಂತರ ಉದ್ಯೋಗ ಹುಡುಕುತ್ತಿರುವವರಿಗೆ ಇದೊಂದು ಉತ್ತಮ ಅವಕಾಶ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17 ಅಕ್ಟೋಬರ್ 2022.
ಹುದ್ದೆಯ ವಿವರಗಳನ್ನು ತಿಳಿಯಿರಿ
ಭಾರತೀಯ ಅಂಚೆ ಇಲಾಖೆಯಲ್ಲಿ ಒಟ್ಟು 7 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಎಲ್ಲಾ ಪೋಸ್ಟ್ಗಳು ಟ್ರೇಡರ್ಸ್ ಹುದ್ದೆಗಳಿಗೆ ಸಂಬಂಧಿಸಿವೆ. ಇದರಲ್ಲಿ ಎಲೆಕ್ಟ್ರಿಷಿಯನ್, ಪೇಂಟರ್, ವೆಲ್ಡರ್ ಮತ್ತು ಕಾರ್ಪೆಂಟರ್ ಹುದ್ದೆಗಳು ಸೇರಿವೆ.
ಶೈಕ್ಷಣಿಕ ಅರ್ಹತೆ:
ಅರ್ಜಿ ಸಲ್ಲಿಸಬಯಸುವು ಅಭ್ಯರ್ಥಿಯು ಕನಿಷ್ಠ 8 ನೇತರಗತಿ ಪಾಸ್ ಆಗಿರಬೇಕು ಅಲ್ಲದೇ ಟ್ರೇಡರ್ಸ್ ಸಂಬಂಧಿತ ವಿಷಯದಲ್ಲಿ ಕನಿಷ್ಟ 1 ವರ್ಷದ ಅನುಭವವವನ್ನ ಹೊಂದಿರಬೇಕು. ನೀವು ಮೆಕ್ಯಾನಿಕ್ ಹುದ್ದೆಗೆ ಅರ್ಜಿ ಸಲ್ಲಿಸುವುದಾದರೆ ಹೆವಿ ವೈಯಕಲ್ ಡ್ರೈವಿಂಗ ಲೈಸೆನ್ಸ್ ಹೊಂದಿರುವು ಅವಶ್ಯಕ.
ವಯಸ್ಸಿನ ಮಿತಿ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಮತ್ತು ಗರಿಷ್ಠ ವಯೋಮಿತಿ 30 ವರ್ಷಗಳನ್ನು ಹೊಂದಿರಬೇಕು. ಸರ್ಕಾರಿ ನಿಯಮಗಳ ಪ್ರಕಾರ, ಮೀಸಲಾತಿ ವರ್ಗದವರಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಸಂಬಳದ ವಿವರ
ಈ ಹುದ್ದೆಗಳಿಗೆ 7ನೇ ವೇತನ ಶ್ರೇಣಿಯ ಆಧಾರದ ಮೇಲೆ ವೇತನ ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ 63,200 ರೂ.ವರೆಗೆ ವೇತನವನ್ನು ನೀಡಲಾಗುವುದು.
Post office recruitment 2022 vacancies out for traders posts








