Siddaramaiah | ನಮ್ಮದು ಭುಜಕ್ಕೆ ಭುಜ ತಾಗಿಸಿ ನಡೆಯುವ ಡೆಮಾಕ್ರಟಿಕ್ ಸಂಸ್ಕೃತಿಯ ಪಕ್ಷ
ಬೆಂಗಳೂರು : ನಮ್ಮದು ಭುಜಕ್ಕೆ ಭುಜ ತಾಗಿಸಿ ನಡೆಯುವ ಡೆಮಾಕ್ರಟಿಕ್ ಸಂಸ್ಕೃತಿಯ ಪಕ್ಷ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
‘ಸಿದ್ದರಾಮಯ್ಯನವರಿಗೆ ಮೋದಿಯವರ ಕಾಲಿನಡಿ ಕುಳಿತುಕೊಳ್ಳುವ ಯೋಗ್ಯತೆಯೂ ಇಲ್ಲ’ ಎಂಬ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ಬಿಜೆಪಿಯವರು ತಾವು ನಡೆಸುತ್ತಿರುವ ‘ಜನಸಂಕಲ್ಪ ಯಾತ್ರೆ’ ಎಂಬ ಹೆಸರಿನ ಬದಲು ‘ಜನರಿಗೆ ಸುಳ್ಳು ಹೇಳುವ ಯಾತ್ರೆ’ ಎಂದು ನಾಮಕರಣ ಮಾಡುವುದು ಒಳ್ಳೆಯದು. ಬಿಜೆಪಿ ತನ್ನ ಯಾತ್ರೆಯನ್ನು ನನ್ನ ವಿರುದ್ಧ ಸುಳ್ಳು ಹೇಳುವುದಕ್ಕಷ್ಟೇ ಸೀಮಿತ ಮಾಡಿಕೊಂಡಂತಿದೆ.

ಮಾಜಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಅವರು ನಿನ್ನೆ ‘ಸಿದ್ದರಾಮಯ್ಯನವರಿಗೆ ಮೋದಿಯವರ ಕಾಲಿನಡಿ ಕುಳಿತುಕೊಳ್ಳುವ ಯೋಗ್ಯತೆಯೂ ಇಲ್ಲ’ ಅಂದಿದ್ದಾರೆ. ಅಂಥ ಗುಲಾಮಗಿರಿಯ ಯೋಗ್ಯತೆ ಯಡಿಯೂರಪ್ಪನಂಥವರಿಗೆ ಇರಲಿ, ನನ್ನಂಥವರಿಗೆ ಅದು ಹೊಂದಾಣಿಕೆಯಾಗುವುದಿಲ್ಲ ಎಂದು ಟಕ್ಕರ್ ಕೊಟ್ಟಿದ್ದಾರೆ. ಅಲ್ಲದೆ ನಮ್ಮದು ಭುಜಕ್ಕೆ ಭುಜ ತಾಗಿಸಿ ನಡೆಯುವ ಡೆಮಾಕ್ರಟಿಕ್ ಸಂಸ್ಕೃತಿಯ ಪಕ್ಷ ಎಂದು ಬರೆದುಕೊಂಡಿದ್ದಾರೆ.








