t20 world cup ಟೈಟಲ್ ಗೆಲ್ಲುವ ಬಗ್ಗೆ ರೋಹಿತ್ ಶರ್ಮಾ ಹೇಳಿದ್ದೇನು ?
ಟಿ 20 ವಿಶ್ವಕಪ್ ಗಾಗಿ ಟೀಂ ಇಂಡಿಯಾ ಸಜ್ಜಾಗಿದೆ. ಆಸ್ಟ್ರೇಲಿಯಾ ವಿರುದ್ಧ ನಡೆದ ವಾರ್ಮ್ ಅಪ್ ಮ್ಯಾಚ್ ನಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ.
ನ್ಯೂಜಿಲೆಂಡ್ ವಿರುದ್ಧ ವಾರ್ಮ್ ಅಪ್ ಮ್ಯಾಚ್ ಮಳೆಯಿಂದಾಗಿ ರದ್ದಾಗಿದೆ.
ಅಕ್ಟೋಬರ್ 23 ರಂದು ಭಾರತ ತಂಡ, ಪಾಕಿಸ್ತಾನ ಕ್ರಿಕೆಟ್ ತಂಡ ವಿರುದ್ಧ ಸೆಣಸಾಡಲಿದೆ.
ಅಂದಹಾಗೆ ಇದು ಕ್ಯಾಪ್ಟನ್ ಆಗಿ ರೋಹಿತ್ ಶರ್ಮಾಗೆ ಇದೇ ಟಿ 20 ವಿಶ್ವಕಪ್.
2007ರ ಟಿ 20 ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಸದಸ್ಯರಾಗಿರುವ ರೋಹಿತ್ ಶರ್ಮಾ ಸದ್ಯ ಕ್ಯಾಪ್ಟನ್ ಆಗಿ ವಿಶ್ವಕಪ್ ಗೆಲ್ಲುತ್ತಾರಾ ? ಕಾದು ನೋಡಬೇಕು.
ಅಂದಹಾಗೆ ಟೀಂ ಇಂಡಿಯಾದ ತಯಾರಿ ಬಗ್ಗೆ ರೋಹಿತ್ ಶರ್ಮಾ ಮಾತನಾಡಿದ್ದು, ಮ್ಯಾಚ್ ಸಂದರ್ಭದಲ್ಲಿ ಆಟಗಾರರು ಪ್ರಶಾಂತವಾಗಿದ್ದರೇ ನಮಗೆ ಬೇಕಾದ ರಿಸಲ್ಟ್ ಬರುತ್ತದೆ.
ಟೀಂ ಇಂಡಿಯಾ ವಿಶ್ವಕಪ್ ಗೆದ್ದು ತುಂಬಾ ವರ್ಷಗಳಾಗಿವೆ. ಹೇಗಾದ್ರೂ ಮಾಡಿ ಕಪ್ ಗೆಲ್ಲಬೇಕೆನ್ನುವುದೇ ನಮ್ಮ ಗುರಿಯಾಗಿದೆ.
ಆದ್ರೆ ಅದಕ್ಕಾಗಿ ನಾವು ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಒಂದೊಂದು ಹೆಜ್ಜೆ ಹಾಕುತ್ತಾ ಹೋಗಬೇಕು.
ವಾರ್ಮ್ ಅಪ್ ಮ್ಯಾಚ್ ಗಳು ಮುಗಿದಿವೆ. ಪಾಕ್ ವಿರುದ್ಧದ ಪಂದ್ಯವನ್ನು ಸಾಮಾನ್ಯವಾಗಿಯೇ ತೆಗೆದುಕೊಂಡಿದ್ದೇವೆ. ಆಟದಲ್ಲಿ ಗೆಲುವು ಸೋಲು ಇದ್ದದ್ದೇ.
ಪಾಕ್ ವಿರುದ್ಧ ಪಂದ್ಯ ಎಂದರೇ ಒತ್ತಡ ಇರುತ್ತದೆ. ಆದ್ರೆ ನಾವು ಇದನ್ನ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ.
ಸೆಮಿ ಫೈನಲ್ಸ್, ಫೈನಲ್ಸ್ ಪಂದ್ಯಗಳ ಬಗ್ಗೆ ಈಗಲೇ ಯೋಜನೆ ಮಾಡುತ್ತಿಲ್ಲ. ಮೊದಲು ಸೂಪರ್ 12 ಹಂತದಲ್ಲಿ ಉತ್ತಮ ಪ್ರದರ್ಶನ ನೀಡಬೇಕು.
ಇನ್ನು ವಿಶ್ವಕಪ್ ನಲ್ಲಿ ತಂಡದ ನಾಯಕತ್ವ ವಹಿಸಿರುವುದು ಹೆಮ್ಮೆ ಅನಿಸುತ್ತಿದೆ. ಕ್ಯಾಪ್ಟನ್ ಆಗಿ ಇದು ನನಗೆ ಮೊದಲ ವಿಶ್ವಕಪ್.
ಒಂದು ತಂಡವಾಗಿ ನಾವು ತುಂಬಾ ಉತ್ಸಾಹದೊಂದಿಗೆ ಇದ್ದೇವೆ. ಆಸ್ಟ್ರೇಲಿಯಾ ಪಿಚ್ ಗಳು ವಿಭಿನ್ನವಾಗಿ ಇರುತ್ತವೆ. ನಮಗೆ ಇದು ದೊಡ್ಡ ಸವಾಲು ಎಂದಿದ್ದಾರೆ ರೋಹಿತ್ ಶರ್ಮಾ.