Virat Kohli – ಕ್ರಿಕೆಟ್ ರಾಕ್ಷಸ ವಿರಾಟ್ ಆರ್ಭಟ.. ದಾಖಲೆಗಳು ಧೂಳಿಪಟ
ಟಿ 20 ವಿಶ್ವಕಪ್ 2022 ರ ದಾಯಾದಿಗಳ ಸಮರದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿದೆ.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಬ್ಬರಿಸಿ ಬೊಬ್ಬರಿದರು.
ಈ ಮ್ಯಾಚ್ ನಲ್ಲಿ 83 ರನ್ ಗಳಿಸಿ ವಿರಾಟ್ ಕೊಹ್ಲಿ ಅಜೇಯರಾಗಿ ಉಳಿದರು.
ವಿರಾಟ್ ತಮ್ಮ ಅದ್ಭುತ ಇನ್ನಿಂಗ್ಸ್ ನೊಂದಿಗೆ ಹಲವು ದಾಖಲೆಗಳನ್ನು ಮುರಿದಿದ್ದಾರೆ.
ಈ ಮ್ಯಾಚ್ ನಲ್ಲಿ ಅದ್ಭುತ ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನಾರಾದರು.
ಇದರೊಂದಿಗೆ ಅಂತರಾಷ್ಟ್ರೀಯ ಟಿ 20 ಕ್ರಿಕೆಟ್ ನಲ್ಲಿ ಅತ್ಯಧಿಕ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದ ಕ್ರಿಕೆಟರ್ ಆಗಿ ಕೊಹ್ಲಿ ದಾಖಲೆ ಬರೆದಿದ್ದಾರೆ.
ಕೊಹ್ಲಿ ಈ ವರೆಗೂ 14 ಸಾರಿ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗೆದ್ದಿದ್ದಾರೆ. ಅಫ್ಘಾನ್ ನ ಮೊಹ್ಮದ್ ನಬಿ 13 ಬಾರಿ ಮ್ಯಾಚ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗೆದ್ದಿದ್ದಾರೆ.

ಟಿ 20 ವಿಶ್ವಕಪ್ ಇತಿಹಾಸದಲ್ಲಿ ಅತ್ಯಧಿಕ ಪ್ಲೇಯರ್ ಆಫ್ ದ ಮ್ಯಾಚ್ ಅವಾರ್ಡ್ ಪಡೆದ ಕ್ರಿಕೆಟರ್ ಆಗಿ ಕೊಹ್ಲಿ ದಾಖಲೆ ಬರೆದಿದ್ದಾರೆ. ವಿರಾಟ್ ಆರು ಬಾರಿ ಈ ಅವಾರ್ಡ್ ಪಡೆದಿದ್ದಾರೆ.
ಟಿ 20 ಮ್ಯಾಚ್ ನಲ್ಲಿ ಚೇಸಿಂಗ್ ಮಾಡುತ್ತಾ ಅತ್ಯಧಿಕ ಬಾರಿ ನಾಟೌಟ್ ಆಗಿ ನಿಂತ ಬ್ಯಾಟರ್ ವಿರಾಟ್ ಕೊಹ್ಲಿ. ವಿರಾಟ್ ಕೊಹ್ಲಿ 18 ಇನ್ನಿಂಗ್ಸ್ ಗಳಲ್ಲಿ ಅಜೇಯರಾಗಿ ಉಳಿದಿದ್ದಾರೆ.
ಅಂತರಾಷ್ಟ್ರೀಯ ಟಿ 20 ಕ್ರಿಕೆಟ್ ನಲ್ಲಿ ಅತ್ಯಧಿಕ ರನ್ ಗಳಿಸಿದ ಕ್ರಿಕೆಟರ್ ಆಗಿ ವಿರಾಟ್ ಕೊಹ್ಲಿ ನಿಂತಿದ್ದಾರೆ. ವಿರಾಟ್ ಕೊಹ್ಲಿ 110 ಮ್ಯಾಚ್ ಗಳಲ್ಲಿ 3794 ರನ್ ಗಳಿಸಿದ್ದಾರೆ.
ಅದೇ ರೀತಿ ಐಸಿಸಿ ಟೂರ್ನಿಮೆಂಟ್ ಗಳಲ್ಲಿ ಅತ್ಯಧಿಕ ಫಿಫ್ಟಿ ಪ್ಲಸ್ ಸಾಧಿಸಿದ ಭಾರತೀಯ ಬ್ಯಾಟರ್ ವಿರಾಟ್ ಕೊಹ್ಲಿ. ಐಸಿಸಿ ಮೆಗಾ ಈವೆಂಟ್ ನಲ್ಲಿ ವಿರಾಟ್ ಕೊಹ್ಲಿ 24 ಅರ್ಧಶತಕಗಳನ್ನು ಸಿಡಿಸಿದ್ದಾರೆ.








