Delhi Air Pollution – ದೆಹಲಿಯಲ್ಲಿ ಹೆಚ್ಚಿದ ವಾಯು ಮಾಲಿನ್ಯ, ಪ್ರಾಥಮಿಕ ಶಾಲೆಗಳು ಬಂದ್….
ರಾಷ್ಟ್ರ ರಾಜಧಾನಿಯಲ್ಲಿ ದೆಹಲಿಯಲ್ಲಿ ಮಾಲಿನ್ಯದ ಮಟ್ಟ ಹದಗೆಡುತ್ತಿರುವುದಕ್ಕೆ ಇದು ಇನ್ನೊಬ್ಬರನ್ನ ಬ್ಲೇಮ್ ಮಾಡುವ ಮತ್ತು ರಾಜಕೀಯ ಮಾಡುವ ಸಮಯವಯಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕೇಜ್ರಿವಾಲ್ ಹದಗೆಡುತ್ತಿರುವ ಗಾಳಿಯ ಗುಣಮಟ್ಟ ಮತ್ತು ಮಾಲಿನ್ಯದ ಮಟ್ಟ ಇಡೀ ಉತ್ತರ ಭಾರತದ ಸಮಸ್ಯೆಯಾಗಿದ್ದು, ಇದನ್ನು ಪರಿಹರಿಸಲು ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಹೇಳಿದ್ದಾರೆ.
“ಇದು ಇನ್ನೊಬ್ಬರನ್ನ ದೂಷಿಸುವ ಮತ್ತು ರಾಜಕೀಯ ಮಾಡುವ ಸಮಯವಲ್ಲ, ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವ ಸಮಯ. ಕೇಜ್ರಿವಾಲ್ ಅಥವಾ ಪಂಜಾಬ್ ಸರ್ಕಾರವನ್ನ ದೂಷಿಸುವುದು ಸಹಾಯ ಮಾಡುವುದಿಲ್ಲ” ಎಂದು ಕೇಜ್ರಿವಾಲ್ ಪ್ರತಿಪಾದಿಸಿದ್ದಾರೆ.
ಶನಿವಾರದಿಂದ ಐದನೇ ತರಗತಿಯವರೆಗಿನ ಶಾಲಾ ತರಗತಿಗಳನ್ನ ಮುಚ್ಚಲಾಗುವುದು ಮತ್ತು ಐದನೇ ತರಗತಿಗಿಂತ ಹೆಚ್ಚಿನ ತರಗತಿಗಳಿಗೆ ಹೊರಾಂಗಣ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಕೇಜ್ರಿವಾಲ್ ಘೋಷಿಸಿದರು.
“ವಾಹನಗಳ ಓಡಾಟಕ್ಕೆ ಸಮ ಬೆಸ ಯೋಜನೆಯನ್ನ ಜಾರಿಗೊಳಿಸುವ ಬಗ್ಗೆಯೂ ನಾವು ಯೋಚಿಸುತ್ತಿದ್ದೇವೆ” ಎಂದು ಅವರು ಹೇಳಿದರು. ಮುಖ್ಯಮಂತ್ರಿಯವರೊಂದಿಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಜೊತೆಗೂಡಿದರು.
Arvind Kejriwal : Increased air pollution in Delhi, primary schools closed….
ಹೆಚ್ಚಿನ ಮಾಹಿತಿಗಾಗಿ – https://saakshatv.com/pregnant-wife-ki…inner-who-killed/








