Kantara : ಹಲವು ಪ್ಲಾಟ್ ಪ್ಲಾರ್ಮಗಳಿಂದ ವರಾಹ ರೂಪಂ ಹಾಡು ಡಿಲೀಟ್..!!
ರಿಷಬ್ ಶೆಟ್ಟಿ ನಿರ್ದೇಶಿಸಿರುವ ಕಾಂತಾರ ಚಿತ್ರ ದಿನದಿಂದ ದಿನಕ್ಕೆ ದಾಖಲೆಗಳನ್ನ ಬರೆಯುತ್ತಿದೆ. ಈ ನಡುವೆ ಅಜನೀಶ್ ಬಿ ಲೋಕನಾಥ್ ಅವರ ಸಂಗೀತದಲ್ಲಿ ಮೂಡಿಬಂದ ಕಾಂತಾರ ಹಾಡಿಗೆ ಕಾನೂನು ಸಂಕಷ್ಟ ಎದುರಾಗಿದೆ.
ವರಾಹ ರೂಪಂ ಹಾಡಿನ ಟ್ಯೂನ್ ಮಲಯಾಳಂ ನ ನವರಸಂ ಹಾಡಿನಿಂದ ಕದ್ದದ್ದು ಎಂದು ಆರೋಪಗಳು ಕೇಳಿ ಬಂದಿತ್ತು. ಹೀಗಾಗಿ ಸಿನಿಮಾ ತಂಡದ ವಿರುದ್ಧ ಕೇರಳದ ಸ್ವತಂತ್ರ್ಯ ಬ್ಯಾಂಡ್ ಆಗಿರುವ ತೈಕ್ಕುಡಂ ಬ್ರಿಡ್ಜ್ ಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯವು ಹಾಡಿನ ಪ್ರಸಾರಕ್ಕೆ ತಡೆಯಾಜ್ಞೆ ನೀಡಿದ್ದರು.
ಅಲ್ಲದೇ ಮಾತೃಭೂಮಿ ಮ್ಯೂಸಿಕ್ ಸಂಸ್ಥೆಯಿಂದಲೂ ಕೇಸ್ ದಾಖಲಿಸಲಾಗಿತ್ತು.. ಸಿನಿಮಾದ ಹಾಡು ನಿಲ್ಲಿಸುವಂತೆ ಕೋರ್ಟ್ ಆದೇಶ ನೀಡಿತ್ತು.
ಇದೀಗ ಹೊಂಬಾಳೆ ಫಿಲಮ್ಸ್ ಯೂಟ್ಯೂಬ್ ಚಾನೆಲ್ ನಿಂದ ಹಾಡು ಮಾಯವಾಗಿದೆ.. ಕೇರಳದ ಸ್ಥಳೀಯ ನ್ಯಾಯಾಲಯ ಕಾಂತಾರ ಚಿತ್ರದಲ್ಲಿ ವರಾಹ ರೂಪಂ ಹಾಡನ್ನು ಪ್ರಸಾರ ಮಾಡುವಂತಿಲ್ಲ ಎಂದು ನೋಟಿಸ್ ನೀಡಿತ್ತು.
ನವರಸಮ್ ಎಂಬ ಆಲ್ಬಂ ಹಾಡಿನ ಟ್ಯೂನ್ ಅನ್ನು ಕಾಂತಾರ ಚಿತ್ರದ ವರಾಹ ರೂಪಂ ಹಾಡಿನಲ್ಲಿ ಕಾಪಿ ಮಾಡಲಾಗಿದೆ ಎಂದು ತೈಕ್ಕುಡಂ ಬ್ರಿಡ್ಜ್ ಹಾಗೂ ಕಪ್ಪ ಟಿವಿ ದೂರನ್ನು ನೀಡಿದ್ದವು.
ಆದ್ರೂ ಹೊಂಬಾಳೆ ಫಿಲ್ಮ್ಸ್ ವರಾಹ ರೂಪಂ ಹಾಡನ್ನು ತೆಗೆದು ಹಾಕಿರಲಿಲ್ಲ, ಆದರೆ ಇದೀಗ ನಿನ್ನೆಯಿಂದ ( ನವೆಂಬರ್ 11) ವರಾಹ ರೂಪಂ ಹಾಡು ಹೊಂಬಾಳೆ ಫಿಲ್ಮ್ಸ್ ಯುಟ್ಯೂಬ್ ಚಾನೆಲ್ ನಿಂದ ಕಾಣೆಯಾಗಿದೆ.ಮಾತೃಭೂಮಿ ಕಪ್ಪ ಟಿವಿ ಚಾನೆಲ್ ಮಾಡಿದ ಕಾಪಿ ರೈಟ್ ಕ್ಲೈಮ್ ಕಾರಣದಿಂದ ಹಾಡನ್ನು ತೆಗೆದು ಹಾಕಲಾಗಿದೆ ಎಂದು ಯುಟ್ಯೂಬ್ ತೋರಿಸುತ್ತಿದೆ.
Kantara : Varaha Rupam song deleted from many platforms..!!