75 ರ ವಯಸ್ಸಿನಲ್ಲಿ 2 ನೇ ಮದುವೆ
ಹುಬ್ಬಳ್ಳಿ – ಧಾರವಾಡ ಮಾಜಿ ಮೇಯರ್ ಮರುವಿವಾಹ
ಮೃತ ಪತ್ನಿಯ ಅಕ್ಕನ ಜೊತೆಗೆ ವಿವಾಹ
ಮಾಜಿ ಮೇಯರ್ ಡಿ.ಕೆ ಅವ್ಹಾಣ್ ಅದ್ಧೂರಿ ಮದುವೆ
ಮಕ್ಕಳು , ಮೊಮ್ಮಕ್ಕಳ ಸಮ್ಮುಖದಲ್ಲಿ ವಿವಾಹ
ಹುಬ್ಬಳ್ಳಿ ಧಾರವಾಡ ಮಾಜಿ ಮೇಯರ್ ಡಿ. ಕೆ ಚವ್ಹಾಣ್ ಅವರು ತಮ್ಮ 75 ನೇ ವಯಸ್ಸಿನಲ್ಲಿ ಮರುವಿವಾಹವಾಗಿದ್ದಾರೆ..
ಮೊದಲ ಪತ್ನಿ ಶಾರದಾ ಮೂರು ತಿಂಗಳ ಹಿಂದಷ್ಟೇ ಇಹಲೋಕ ತ್ಯಜಿಸಿದ್ದರು.. ಇದೀಗ ಮೃತ ಪತ್ನಿಯ ಅಕ್ಕ ಅನುಸೂಯ ಎಂಬುವವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.. ಅನುಸೂಯ ಅವರಿಗಿದು ಮೊದಲನೇ ವಿವಾಹವಾಗಿದೆ..
ಈ ಅದ್ಧೂರಿ ಮದುವೆ ಸಮಾರಂಭದಲ್ಲಿ ಚವ್ಹಾಣ್ ಅವರ ಮಕ್ಕಳು , ಮೊಮ್ಮಕ್ಕಳು , ಸಂಬಂಧಿಕರು ಭಾಗಿಯಾಗಿದ್ದರು..








