ಪಾಟ್ನಾ : ಮನುಷ್ಯರು ಮಷ್ಯರಿಗಾಗಿ ಉಯಿಲ್ ಬರೆಯುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೊಬ್ಬರು ತಾವು ಸಾಕಿದ ಆನೆಗಳಿಗೆ ತಮ್ಮ ಅರ್ಧ ಆಸ್ತಿ ಹೋಗುವುಂತೆ ಉಯಿಲ್ ಬರೆದಿರುವ ಘಟನೆ ಪಾಟ್ನಾದಲ್ಲಿ ನಡೆದಿದೆ.
ಆಖ್ತರ್ ಇಮಾಮ್ ಎಂಬುವವರು ಮೋತಿ ಮತ್ತು ರಾಣಿ ಹೆಸರಿನ ಎರಡು ಆನೆಗಳನ್ನು ಸಾಕಿದ್ದರು. ಕೇರಳದಲ್ಲಿ ಆನೆಯ ಹತ್ಯೆ ನಡೆದ ಬೆನ್ನೆಲೆ ಮನುಷ್ಯರಿಗಿಂತ ಪ್ರಾಣಿಗಳೆ ಹೆಚ್ಚು ನಂಬಿಕೆಗೆ ಅರ್ಹವಾಗಿವೆ. ಹಾಗಾಗಿ ಆನೆಗಳ ಹೆಸರಿನಲ್ಲಿ ವೀಲ್ ಬರೆದಿದ್ದಾರೆ.
ಆಖ್ತರ್ ಇಮಾಮ್ ಅನೆಗಳ ಸಂರಕ್ಷಣೆಗಾಗಿ ಸ್ವಯಂ ಸೇವಾ ಸಂಸ್ಥೆ ನಡೆಸುತ್ತಿದ್ದಾರೆ. ಅಲ್ಲದೆ ಮೋತಿ ಮತ್ತು ರಾಣಿ ಎಂಬ ಆನೆಗಳನ್ನು ತಮ್ಮ ಸ್ವಂತ ಮಕ್ಕಳಂತೆ ಆಖ್ತರ್ ಸಾಕಿದ್ದಾರೆ. ಈ ವಿಚಾರದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡ ಅವರು, ಒಮ್ಮೆ ಕೆಲವರು ಪಿಸ್ತೂಲ್ ಹಿಡಿದು ನನ್ನ ಮೇಲೆ ದಾಳಿ ಮಾಡಲು ಪ್ರಯತ್ನಿಸಿದರು. ಈ ಸಮಯದಲ್ಲಿ ಆನೆಗಳು ಅಪಾಯದ ಸೂಚನೆ ನೀಡಿದ್ದವು. ಇದರಿಂದ ನಾನು ಪ್ರಾಣಾಪಾಯದಿಂದ ಪಾರಾಗಿದ್ದೇನೆ. ಒಂದು ವೇಳೆ ನನಗೆ ಏನಾದರು ಆದರೆ ಆನೆಗಳನ್ನು ಅನಾಥವಾಗ ಬಾರದು. ಹಾಗಾಗಿ ಅವುಗಳ ಹೆಸರಿಗೆ ನನ್ನ ಅರ್ಧ ಆಸ್ತಿ ಬರೆದಿದ್ದೇನೆ ಎಂದು ಹೇಳಿದ್ದಾರೆ.








