Shraddha Murder Case : ಸಿನಿಮಾ ಆಗಲಿದೆ ದೇಶವನ್ನೇ ಬೆಚ್ಚಿ ಬೀಳಿಸಿದ ಪ್ರಕರಣ…
ದೇಶವನ್ನೇ ಬೆಚ್ಚಿ ಬೀಳಿಸಿದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನ ಸಿನಿಮಾ ಮಾಡುವುದಾಗಿ ನಿರ್ದೇಶಕ ಮತ್ತು ನಿರ್ಮಾಪಕರಾಗಿರುವ ಮನೀಶ್ ಸಿಂಗ್ ಘೋಷಿಸಿದ್ದಾರೆ. ಚಿತ್ರಕ್ಕೆ ‘Who Killed Shraddha Walker’ ಎಂದು ಟೈಟಲ್ ಫಿಕ್ಸ್ ಮಾಡಿದ್ದು, ಲವ್ ಜಿಹಾದ್ ಕುರಿತು ಸಿನಿಮಾದಲ್ಲಿ ಹೇಳಲಾಗುವುದು. ಎಂದು ಮನೀಶ್ ಸಿಂಗ್ ಹೇಳಿದ್ದಾರೆ.
ವೃಂದಾವನ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಲಿದ್ದು, ಪೊಲೀಸರು ಚಾರ್ಜ್ ಶೀಟ್ ಸಲ್ಲಿಸುವವರೆಗೆ ಚಿತ್ರಕಥೆಯನ್ನು ಅಂತಿಮಗೊಳಿಸುವುದಿಲ್ಲ ಎಂದು ಮನೀಶ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಏನಿದು ಪ್ರಕರಣ..??
ಅಫ್ತಾಬ್ ಹಾಗೂ ಮೃತ ಶ್ರದ್ಧಾ ( 26 ವರ್ಷ) ಇಬ್ಬರೂ ಲಿವ್ ಇನ್ ರಿಲೀಷನ್ ಶಿಪ್ ನಲ್ಲಿದ್ದರು.. ಈ ಇಬ್ಬರೂ ಕೂಡ ಡೇಟಿಂಗ್ ಅಪ್ಲಿಕೇಶನ್ ಬಂಬಲ್ ಮೂಲಕ ಪರಸ್ಪರ ಭೇಟಿಯಾಗಿದ್ದರು.
ಅದಾದ ಬಳಿಕ ಕಳೆದ 3 ವರ್ಷಗಳಿಂದ ಒಟ್ಟಿಗೆ ಇದ್ದರು. ಆದರೆ ಮದುವೆ ವಿಚಾರಕ್ಕೆ ಜಗಳವಾಗಿ ಇಬ್ಬರ ನಡುವೆ ಗಲಾಟೆ ಶುರುವಾಗಿತ್ತು.
ಈ ಜಗಳ ತಾರಕಕ್ಕೇರಿದ ಬೆನ್ನಲ್ಲೇ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ ದೇಹವನ್ನ 35 ಭಾಗಗಳಲ್ಲಿ ಪೀಸ್ ಮಾಡಿ ಅದನ್ನು ಫ್ರಿಡ್ಜ್ ನಲ್ಲಿ ಇಟ್ಟು ಕಾಡಿನಲ್ಲಿ ವಿವಿಧ ಜಾಗಗಳಲ್ಲಿ ಹೂತುಹಾಕಿದ್ದಾನೆ..
ಈ ರೀತಿ ಎಲ್ಲಾ ಭಾಗಗಳನ್ನೂ ವಿಲೇವಾರಿ ಮಾಡಲು ಆತ ಸುಮಾರು 18 ದಿನಗಳನ್ನ ತೆಗೆದುಕೊಂಡಿದ್ದಾನೆ.. ಪ್ರತಿ ದಿನ ಮಧ್ಯರಾತ್ರಿ 2 ಗಂಟೆಗೆ ಕಾಡಿಗೆ ತೆರಳುತ್ತಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ.
Shraddha Murder Case








