ನಾನು ಆರಾಮಾಗಿದ್ದೇನೆ, ವಿಡಿಯೋ ಮೂಲಕ ಸ್ಪಷ್ಟಪಡಿಸಿದ ನಟ ಉಪೇಂದ್ರ…
ರಿಯಲ್ ಸ್ಟಾರ್ ಉಪೇಂದ್ರ ಅವರು ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ಉಪೇಂದ್ರ ವಿಡಿಯೋ ಮಾಡಿ ಸ್ಪಷ್ಟನೆ ನೀಡಿದ್ದಾರೆ.
“ಸೆಟ್ನಲ್ಲಿ ಸ್ಮೋಕ್ ಜಾಸ್ತಿಯಿದ್ದ ಕಾರಣ ಕೆಮ್ಮು ಬಂತು, ನಾನು ಆರಾಮಾಗಿದ್ದೀನಿ, ನನಗೆ ಏನೂ ಆಗಿಲ್ಲ, ಸ್ಮೋಕ್ ಜಾಸ್ತಿ ಇತ್ತು.. ಕೆಮ್ಮು ಬಂತು ಅಷ್ಟೇ, ಆರಾಮಾಗಿದ್ದೀನಿ, ಶೂಟಿಂಗ್ ಕಂಟಿನ್ಯೂ ಮಾಡ್ತಿದ್ದೀನಿ ಎಂದು ಉಪ್ಪಿ ಅಭಿಮಾನಿಗಳಿಗೆ ವಿಡಿಯೋ ಸಂದೇಶ ಕೊಟ್ಟಿದ್ದಾರೆ.
ಈ ಹಿಂದೆ ಸ್ವಲ್ಪ ಹೊತ್ತಿನ ಹಿಂದೆ ರಿಯಲ್ ಸ್ಟಾರ್ ಉಪೇಂದ್ರ ಅವರು ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಸುದ್ದಿಯಾಗಿತ್ತು. ಆರೋಗ್ಯದಲ್ಲಿ ಏರುಪೇರಾದ ಕಾರಣ ನೆಲಮಂಗಲದ ಹರ್ಷ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಂಡು ವಾಪಸ್ ಆಗಿದ್ದಾರೆ.
Upendra: I am relaxed, actor Upendra clarified through a video…








