Prabhas : ಪ್ರಭಾಸ್ ನಟನೆಯ ‘ರಾಜಾ ಡಿಲಕ್ಸ್ ’ ಗೆ ಮೂವರು ನಾಯಕೀಯರು…
ನಟ ಪ್ರಭಾಸ್ ಆದಿಪುರುಷ್ ಚಿತ್ರೀಕರಣ ಮುಗಿಸಿ ಸಲಾರ್ ಮತ್ತು ಪ್ರಾಜೆಕ್ಟ್ ಕೆ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ ಇದರ ನಡುವೆ ಪ್ರಭಾಸ್ ಮತ್ತೊಂದು ಚಿತ್ರದಲ್ಲೂ ತೊಡಗಿಸಿಕೊಳ್ಳುತ್ತಿದ್ದಾರೆ ಅದು ರಾಜ ಡಿಲೆಕ್ಸ್..
ತೆಲುಗು ನಿರ್ದೇಶಕ ಮಾರುತಿ ನಿರ್ದೇಶನದ ಸಿನಿಮಾ ಪ್ರಭಾಸ್ ನಟಿಸುತ್ತಿದ್ದು, ಚಿತ್ರಕ್ಕೆ ‘ರಾಜಾ ಡಿಲಕ್ಸ್’ ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ಮೂವರು ಹೀರೋಹಿನ್ ಗಳು ಎಂದು ವರದಿಯಾಗಿತ್ತು. ಈಗಾಗಲೇ ಇಬ್ಬರು ಹೀರೋಹಿನ್ ಗಳ ಹೆಸರು ಹೊರಬಂದಿದ್ದು, ಮೂರನೇ ನಾಯಕಿಯ ಆಯ್ಕೆಯ ಕುರಿತು ಮಾತುಕತೆ ನಡೆಯುತ್ತಿದೆ.
ರಾಜಾ ಡಿಲಕ್ಸ್ ಚಿತ್ರದಲ್ಲಿ ಮಾಳವಿಕಾ ಮೋಹನನ್ ಮತ್ತು ನಿಧಿ ಅಗರ್ವಾಲ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ಚಿತ್ರತಂಡ ಕೆಲ ದಿನಗಳಿಂದ ಮೂರನೇ ನಾಯಕಿಯ ಹುಡುಕಾಟ ಮುಂದುವರೆಸಿದೆ. ಆ ಹುಡುಕಾಟ ಮುಗಿದಂತೆ ಕಾಣುತ್ತಿದೆ. ಮೂರನೇ ನಾಯಕಿಯಾಗಿ ರಿದ್ಧಿ ಕುಮಾರ್ ಗೆ ಅವಕಾಶ ಸಿಕ್ಕಿದೆ ಎನ್ನುತ್ತಿವೆ ಮೂಲಗಳು.
ರಿದ್ಧಿ ಈ ಹಿಂದೆ ‘ರಾಧೆ ಶ್ಯಾಮ್’ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದರು. ರಾಜ್ ತರುಣ್ ಅವರ ಲವರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಈ ಹಿಂದೆ ಶ್ರೀ ಲೀಲಾ ಮೂರನೇ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ರಿದ್ಧಿ ಆಯ್ಕೆಯೊಂದಿಗೆ ಈ ವದಂತಿಗಳಿಗೆ ಬ್ರೇಕ್ ಬಿದ್ದಂತಿದೆ.
‘ರಾಜಾ ಡಿಲಕ್ಸ್’ ಹಾರರ್ ಕಾಮಿಡಿ ಚಿತ್ರವಾಗಿದ್ದು, ಇದನ್ನ ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಿಸಿದೆ. ಬಾಲಿವುಡ್ ನಟ ಬೊಮನ್ ಇರಾನಿ ಈ ಚಿತ್ರದಲ್ಲಿ ಪ್ರಭಾಸ್ ತಾತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಭಾಸ್ ದ್ವಿಪಾತ್ರದಲ್ಲಿ ನಟಿಸಲಿದ್ದಾರಂತೆ.
Prabhas: Three heroines for Prabhas starrer ‘Deluxe Raja’…








