ಬೆಂಗಳೂರು : ‘ಬದಲಾಗು ನೀನು, ಬದಲಾಯಿಸು ನೀನು’ ‘ಮೈ ಹೀರೋ’ ಎನ್ನುವ ಸುಂದರ ದೃಶ್ಯರೂಪಕ ಈಗಾಗಲೆ ರಾಜ್ಯ ಮತ್ತು ದೇಶದಲ್ಲಿ ಸದ್ದು ಮಾಡಿದೆ. ಆದರೆ ಇಂತದೊಂದು ಐಡಿಯಾ ಹುಟ್ಟಿದು ಹೇಗೆ ಎಂದು ವೈದ್ಯಕೀಯ ಶಿಕ್ಷಣ ಡಾ.ಕೆ.ಸುಧಾಕರ್ ಹೇಳೀದ್ದಾರೆ.
ಇತಿಹಾಸದಲ್ಲಿ ಯಾವ ವೈರಾಣುವೂ ಮಾನವನ ವಿರುದ್ಧ ಜಯ ಸಾಧಿಸಿಲ್ಲ. ಕೊರೋನ ವಿರುದ್ಧದ ಈ ಹೋರಾಟದಲ್ಲಿ ಅಂತಿಮವಾಗಿ ಮನುಷ್ಯನಿಗೇ ಜಯ ನಿಶ್ಚಿತ. ನಮ್ಮ ನಿಜವಾದ “ಹೀರೋ” ಆಗಿರುವ ಕೊರೋನಾ ಯೋಧರಿಗೆ ಗೌರವ ಸಲ್ಲಿಸುವ, ಜನಸಾಮಾನ್ಯರಿಗೆ ಲಾಕ್‍ಡೌನ್ ನಂತರದ ಪರಿಸ್ಥಿತಿಯ ಕುರಿತಾಗಿ ಜಾಗೃತಿ ಮೂಡಿಸುವ ಒಂದು ಆಲೋಚನೆ ನನಗೆ ಸ್ವಯಂ ಕ್ವಾರಂಟೈನ್ ಇದ್ದ ಸಮಯದಲ್ಲಿ ಬಂತು.
ಇದನ್ನು ಕಾರ್ಯಗತಗೊಳಿಸಲು ಮುಂದಾಗಿ, ಚಿತ್ರರಂಗದ, ಕ್ರೀಡಾರಂಗದ ಮತ್ತು ಸಂಗೀತ ಲೋಕದ ಕಲಾವಿದರ ಸಹಕಾರದೊಂದಿಗೆ, ’ಬದಲಾಗು ನೀನು, ಬದಲಾಯಿಸು ನೀನು’ ‘ಮೈ ಹೀರೋ’ ಎನ್ನುವ ಸುಂದರ ದೃಶ್ಯರೂಪಕ ಸಾಕಾರಗೊಂಡಿದೆ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.








