Bangalore : ಬೆಂಗಳೂರು ನಗರ ಡಿಸಿ, ಬಿಬಿಎಂಪಿ ವಿಶೇಷ ಆಯುಕ್ತರ ಸ್ಥಾನಕ್ಕೆ ನೇಮಕಾತಿ
ಮತದಾರರ ಪರಿಷ್ಕರಣೆಗಾಗಿ ಮಾಹಿತಿ ಕಳವು ಪ್ರಕರಣಕ್ಕೆ ಸಂಬಂಧಿಸಿ ಅಮಾನತುಗೊಂಡಿದ್ದ ಬೆಂಗಳೂರು ನಗರ ಡಿಸಿ ಹಾಗೂ ಬಿಬಿಎಂಪಿ ವಿಶೇಷ ಆಯುಕ್ತರ ಸ್ಥಾನಕ್ಕೆ ಹೊಸ ನೇಮಕಾತಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಭಾರತೀಯ ಚುನಾವಣಾ ಆಯೋಗದ ಸೂಚನೆ ಮೇರೆಗೆ ಚಿಲುಮೆ ಸಂಸ್ಥೆಯಿಂದ ಮತದಾರರ ಪರಿಷ್ಕರಣೆಗಾಗಿ ಮಾಹಿತಿ ಸಂಗ್ರಹ ಪ್ರಕರಣ ಸಂಬಂಧ ಬೆಂಗಳೂರು ನಗರ ಡಿಸಿ ಹಾಗೂ ಬಿಬಿಎಂಪಿ ವಿಶೇಷ ಆಯುಕ್ತರನ್ನು ಅಮಾನತು ಮಾಡಲಾಗಿತ್ತು.
ಇದೀಗ ತೆರವಾದ ಡಿಸಿ ಮತ್ತು ವಿಶೇಷ ಆಯುಕ್ತ ಸ್ಥಾನಕ್ಕೆ ರಾಜ್ಯ ಸರ್ಕಾರ, ಸಂಗಪ್ಪ ಹಾಗೂ ಡಾ.ಹರೀಶ್ ಕುಮಾರ್ ಕೆ. ಅವರಿಗೆ ಹೆಚ್ಚುವರಿ ಹೊಣೆ ನೀಡಿ ನೇಮಕ ಮಾಡಿದೆ.
ಬೆಂಗಳೂರು ನಗರ ಡಿಸಿಯ ಹೆಚ್ಚುವರಿ ಹೊಣೆಯನ್ನು ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸಿಇಒ ಸಂಗಪ್ಪರಿಗೆ ಮತ್ತು ಬಿಬಿಎಂಪಿ ಆಡಳಿತ ವಿಶೇಷ ಆಯುಕ್ತರ ಹೆಚ್ಚುವರಿ ಹೊಣೆಯನ್ನು ಬಿಬಿಎಂಪಿಯ ಘನ ತ್ಯಾಜ್ಯ ನಿರ್ವಹಣೆಯ ವಿಶೇಷ ಆಯುಕ್ತ ಡಾ.ಹರೀಶ್ ಕುಮಾರ್.ಕೆ ಅವರಿಗೆ ನೀಡಲಾಗಿದೆ.
Bangalore : Bangalore City DC, BBMP New Recruitment for the post of Special Commissioner