ಪಂಜಾಬ್ ಗಡಿ ಬಳಿ ಪಾಕ್ ಡ್ರೋನ್ ಉರುಳಿಸಿದ BSF ಪಡೆಗಳು…
ಪಂಜಾಬ್ ನ ಅಮೃತಸರ ಜಿಲ್ಲೆಯಲ್ಲಿ ಪಾಕಿಸ್ತಾನದಿಂದ ಭಾರತದ ಕಡೆಗೆ ನುಸುಳಿದ್ದ ಡ್ರೋನ್ ನ್ನ ಗಡಿ ಭದ್ರತಾ ಪಡೆ ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಅಮೃತಸರ ನಗರದ ಉತ್ತರಕ್ಕೆ 40 ಕಿಮೀ ದೂರದಲ್ಲಿರುವ ಚಹರ್ಪುರ್ ಗ್ರಾಮದ ಬಳಿ ಭಾರತೀಯ ಭೂ ಪ್ರದೇಶವನ್ನು ಪ್ರವೇಶಿಸುತ್ತಿರುವುದನ್ನ ಗಮನಿಸಿದ ಬಿಎಸ್ಎಫ್ ಸಿಬ್ಬಂದಿ ಸೋಮವಾರ ರಾತ್ರಿ ಡ್ರೋನ್ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಅವರು ಹೇಳಿದರು.
ಶೋಧ ಕಾರ್ಯಾಚರಣೆಯ ಸಮಯದಲ್ಲಿ, BSF ಭಾಗಶಃ ಹಾನಿಗೊಳಗಾದ ಹೆಕ್ಸಾಕಾಪ್ಟರ್ ಡ್ರೋನ್ ಅನ್ನು ವಶಪಡಿಸಿಕೊಂಡಿದೆ. ಆರು ರೋಟರ್ಗಳನ್ನು ಹೊಂದಿರುವ ಮಾನವರಹಿತ ವೈಮಾನಿಕ ವಾಹನ ಇದಾಗಿದ್ದು, ಅದರ ಕೆಳಗೆ ಬಿಳಿ ಬಣ್ಣದ ಪಾಲಿಥಿನ್ನಲ್ಲಿ ಶಂಕಿತ ವಸ್ತುವನ್ನು ಲಗತ್ತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡ್ರೋನ್, ಡ್ರಗ್ಸ್ ಚೀಲಗಳನ್ನ ಹೊತ್ತೊಯ್ಯುತ್ತಿರಬಹುದು ಎಂದು ಶಂಕಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಬಿಎಸ್ಎಫ್ ಪಡೆಗಳು ಮತ್ತೊಮ್ಮೆ ಡ್ರೋನ್ ನ್ನ ಸೆರೆಹಿಡಿಯಲು ಮತ್ತು ಕಳ್ಳಸಾಗಣೆ ಪ್ರಯತ್ನವನ್ನ ವಿಫಲಗೊಳಿಸಲು ಸಾಧ್ಯವಾಯಿತು” ಎಂದು ಪಡೆಯ ವಕ್ತಾರರು ತಿಳಿಸಿದ್ದಾರೆ. ವೆಂಬರ್ 25 ರಂದು ಅಮೃತಸರದ ಅಂತರಾಷ್ಟ್ರೀಯ ಗಡಿಯ ಬಳಿ ಬಿಎಸ್ಎಫ್ ಪಡೆಗಳು ಪಾಕಿಸ್ತಾನದ ಡ್ರೋನ್ ಅನ್ನು ಹೊಡೆದುರುಳಿಸಿದ್ದವು.
Pak drone: BSF shoots down drone along India-Pakistan border in Amritsar village