Infinix Hot 20 5G : ಕೈಗೆಟುಕುವ ದರದಲ್ಲಿ 5G ಸ್ಮಾರ್ಟ್ ಪೋನ್ ಬಿಡುಗಡೆ…
ಸ್ಮಾರ್ಟ್ಫೋನ್ ತಯಾರಕ Infinix ಕಳೆದ ವಾರ ಭಾರತದಲ್ಲಿ Infinix Hot 20 5G ಎಂಬ ಹೊಸ ಸ್ಮಾರ್ಟ್ಫೋನ್ ಒಂದನ್ನ ಬಿಡುಗಡೆ ಮಾಡಿದೆ.
Infinix Hot 20 5G ಕಂಪನಿಯ ಕೈಗೆಟುಕುವ 5G ಸ್ಮಾರ್ಟ್ ಫೋನ್ ಆಗಿದ್ದು, MediaTek Dimensity 810 ಪ್ರೊಸೆಸರ್ನಿಂದ ಚಾಲಿತವಾಗಿದೆ. 50 ಮೆಗಾಪಿಕ್ಸೆಲ್ ಕ್ಯಾಮೆರಾ ದೊಂದಿಗೆ 120 Hz ರಿಫ್ರೇಶ್ ರೇಟ್ ಡಿಸ್ಪ್ಲೆಯನ್ನ ಹೊಂದಿದೆ. ಇದರ ಜೊತೆಗೆ 5000mAh ಬ್ಯಾಟರಿ, ಸ್ಟೀರಿಯೋ ಸ್ಪೀಕರ್ ಸೆಟಪ್ ಮತ್ತು ಫಿಂಗರ್ಪ್ರಿಂಟ್ ಸ್ಕ್ಯಾನರ್ ಕೂಡ ಇದರಲ್ಲಿ ಲಭ್ಯವಿದೆ.
Infinix Hot 20 5G ಬೆಲೆ…
ಭಾರತದಲ್ಲಿ Infinix Hot 20 5G ಬೆಲೆ 11,999 ರೂ. ಇರಲಿದೆ. ಇದರಲ್ಲಿ 4GB RAM ಮತ್ತು 64GB ಸ್ಟೋರೇಜ್ ಪಡೆಯಬಹುದು.
Infinix Hot 20 5G ನ ಫೀಚರ್ಸ್ ಕುರಿತು ಮಾತನಾಡುವುದಾದರೇ..
120Hz IPS LCD ಡಿಸ್ಪ್ಲೆ 6.6 ಇಂಚುಗಳು Fully HD + (1080 × 2408 ಪಿಕ್ಸೆಲ್ಗಳು) ರೆಸಲ್ಯೂಶನ್ ನೊಂದಿಗೆ ಬರುತ್ತಿದೆ. ಆಕ್ಟಾಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 ಪ್ರೊಸೆಸರ್, 4GB LPDDR4X RAM ಮತ್ತು 64GB ಸ್ಟೋರೇಜ್ ನೀಡಲಾಗಿದೆ.
50 ಮೆಗಾಪಿಕ್ಸೆಲ್ಗಳ ರಿಯರ್ ಕ್ಯಾಮೆರಾ ಮತ್ತು 8 ಮೆಗಾ ಫಿಕ್ಸೆಲ್ ಗಳ ಸೆಲ್ಫಿ ಕ್ಯಾಮೆರಾವನ್ನ ಅಳವಡಿಸಲಾಗಿದೆ.
5000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 18W ವೇಗದ ಚಾರ್ಜಿಂಗ್ ಸಪೋರ್ಟ್ ಸಿಗಲಿದೆ.








