ADVERTISEMENT
Monday, February 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home News

Pro Kabaddi : ಸೀಸನ್ 9 ರ ಚಾಂಪಿಯನ್ ಕೈಪುರ್ ಪಿಂಕ್ ಪ್ಯಾಂಥರ್ಸ್ – ಫೈನಲ್ ನಲ್ಲಿ ಸೋತ ಪುಣೇರಿ

Namratha Rao by Namratha Rao
December 18, 2022
in News, Newsbeat, Sports, ಕ್ರೀಡೆ
jaipur pune pra kabaddi -
Share on FacebookShare on TwitterShare on WhatsappShare on Telegram

Pro Kabaddi : ಸೀಸನ್ 9 ರ ಚಾಂಪಿಯನ್ ಕೈಪುರ್ ಪಿಂಕ್ ಪ್ಯಾಂಥರ್ಸ್ – ಫೈನಲ್ ನಲ್ಲಿ ಸೋತ ಪುಣೇರಿ

ಕೊನೆಯ ಕ್ಷಣದವರೆಗೂ ಜಿದ್ದಾಜಿದ್ದಿನಿಂದ ಕೂಡಿದ್ದ ರೋಚಕ ಹಣಾಹಣಿಯಲ್ಲಿ ಬಲಿಷ್ಠ ಪ್ರದರ್ಶನ ನೀಡಿದ ಜೈಪುರ್‌ ಪಿಂಕ್‌ ಪ್ಯಾಂಥರ್ಸ್‌, ಪ್ರೋ ಕಬಡ್ಡಿ ಲೀಗ್‌(ಪಿಕೆಎಲ್‌) 9ನೇ ಆವೃತ್ತಿಯ ಫೈನಲ್‌ ಪಂದ್ಯದಲ್ಲಿ ಪುಣೇರಿ ಪಲ್ಟನ್‌ ತಂಡವನ್ನ ಮಣಿಸುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

Related posts

ಕೊಲಂಬೊದಲ್ಲಿ ಭಾರತದ ಆರ್ಭಟ ಪಾಕಿಸ್ತಾನ ಧೂಳಿಪಟ: ಟಿ20 ವಿಶ್ವಕಪ್ ಅಖಾಡದಲ್ಲಿ ಟೀಮ್ ಇಂಡಿಯಾ ದರ್ಬಾರ್

ಕೊಲಂಬೊದಲ್ಲಿ ಭಾರತದ ಆರ್ಭಟ ಪಾಕಿಸ್ತಾನ ಧೂಳಿಪಟ: ಟಿ20 ವಿಶ್ವಕಪ್ ಅಖಾಡದಲ್ಲಿ ಟೀಮ್ ಇಂಡಿಯಾ ದರ್ಬಾರ್

February 16, 2026
ಹಂಪಿ ಉತ್ಸವ:ಇವರು ಯಾರು ಎಂದು ಅಶ್ವಿನಿ ಪುನೀತ್ ಬಗ್ಗೆ ಕೇಳಿದ ಸಿಎಂ ಸಿದ್ದು ನಡೆಗೆ ಕನ್ನಡಿಗರ ಬೇಸರ;ಅಪ್ಪು ಅಭಿಮಾನಿಗಳು ಕೆಂಡಾಮಂಡಲ

ಹಂಪಿ ಉತ್ಸವ:ಇವರು ಯಾರು ಎಂದು ಅಶ್ವಿನಿ ಪುನೀತ್ ಬಗ್ಗೆ ಕೇಳಿದ ಸಿಎಂ ಸಿದ್ದು ನಡೆಗೆ ಕನ್ನಡಿಗರ ಬೇಸರ;ಅಪ್ಪು ಅಭಿಮಾನಿಗಳು ಕೆಂಡಾಮಂಡಲ

February 16, 2026

ಮುಂಬೈನ ಸರ್ದಾರ್‌ ವಲ್ಲಭಭಾಯಿ ಪಟೇಲ್‌(ಎಸ್‌ವಿಪಿ) ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಚಾಂಪಿಯನ್‌ ಪಟ್ಟಕ್ಕಾಗಿ ಎರಡು ತಂಡಗಳು ಪ್ರಬಲ ಪೈಪೋಟಿ ನಡೆಸಿದವು. ಆದರೆ ಕೊನೆಯ ಕ್ಷಣದವರೆಗೂ ನಡೆದ ಹೋರಾಟದಲ್ಲಿ ಪ್ರಾಬಲ್ಯ ಸಾಧಿಸಿದ ಜೈಪುರ್‌ ಪಿಂಕ್‌ ಪ್ಯಾಂಥರ್ಸ್‌ 33-29 ಅಂಕಗಳೊಂದಿಗೆ ಜಯಭೇರಿ ಬಾರಿಸುವ ಮೂಲಕ 9ನೇ ಆವೃತ್ತಿಯ ಚಾಂಪಿಯನ್‌ಪಟ್ಟಕ್ಕೇರಿತು. ಇದು ಜೈಪುರ್‌ ತಂಡಕ್ಕೆ ದೊರೆತ ಎರಡನೇ PKL ಟ್ರೋಫಿಯಾಗಿದ್ದು, ಈ ಹಿಂದೆ 2014ರಲ್ಲಿ ನಡೆದ ಚೊಚ್ಚಲ PKL ಟೂರ್ನಿಯಲ್ಲಿ ಜೈಪುರ್‌ ತಂಡ ಪ್ರಶಸ್ತಿ ಗೆದ್ದುಬೀಗಿತ್ತು.

ಫೈನಲ್‌ ಪಂದ್ಯದ ಆರಂಭದಿಂದಲೂ ಜೈಪುರ್‌ ಪಿಂಕ್‌ ಪ್ಯಾಂಥರ್ಸ್‌ ಆಟಗಾರರು ಉತ್ತಮ ಪ್ರದರ್ಶನ ನೀಡಿದರು. ಜೈಪುರ್‌ ಪರ ಅರ್ಜುನ್‌ ದೇಸ್ವಾಲ್‌ ಹಾಗೂ ಅಜಿತ್‌ ಕುಮಾರ್‌ ಆರಂಭದಿಂದಲೇ ಪುಣೇರಿ ಪಲ್ಟನ್‌ ತಂಡದ ಭದ್ರಕೋಟೆಯನ್ನ ಭೇದಿಸಿ ರೈಡ್‌ ಪಾಯಿಂಟ್‌ಗಳನ್ನ ಪಡೆದು ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಮತ್ತೊಂದೆಡೆ ಪುಣೇರಿ ಆಟಗಾರರು ಸಹ ಪಿಂಕ್‌ ಪ್ಯಾಂಥರ್ಸ್‌ಗೆ ಪ್ರಬಲ ಪೈಪೋಟಿ ನೀಡಿದರು. ಪರಿಣಾಮ ಪಂದ್ಯದ ಮೊದಲಾರ್ಧದಲ್ಲಿ ಜೈಪುರ್‌ ತಂಡಕ್ಕೆ 14-12ರ ಮುನ್ನಡೆ ಪಡೆಯಲಷ್ಟೇ ಸಾಧ್ಯವಾಯಿತು.

ಪಂದ್ಯದ ಎರಡನೇ ಅವಧಿಯಲ್ಲೂ ಎರಡು ತಂಡಗಳು ಮತ್ತಷ್ಟು ಜಿದ್ದಾಜಿದ್ದಿನ ಹೋರಾಟ ನಡೆಸಿದವು. ಆದರೆ ಮೊದಲಾರ್ಧದಲ್ಲಿ ದೊರೆತ ಮುನ್ನಡೆಯನ್ನ ಕಳೆದುಕೊಳ್ಳದ ಜೈಪುರ್‌ ಕೊನೆಯಲ್ಲಿ 33-29ರ ಅಂತರದೊಂದಿಗೆ ಪಂದ್ಯವನ್ನ ಗೆದ್ದು ಪ್ರಶಸ್ತಿ ತನ್ನದಾಗಿಸಿಕೊಂಡಿತು. ಜೈಪರ್‌ ಪರ ಅರ್ಜುನ್‌ ದೇಸ್ವಾಲ್‌, ಅಜಿತ್‌ ರೈಡಿಂಗ್‌ನಲ್ಲಿ ಮಿಂಚಿದರೆ. ಡಿಫೆನ್ಸ್‌ನಲ್ಲಿ ನಾಯಕ ಸುನೀಲ್‌ ಕುಮಾರ್‌ ಹಾಗೂ ಉಳಿದ ಆಟಗಾರರು ಸಂಘಟಿತ ಪ್ರದರ್ಶನ ನೀಡಿದರು.

ಮತ್ತೊಂದೆಡೆ ಚೊಚ್ಚಲ PKL ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದ ಪುಣೇರಿ ಪಲ್ಟನ್‌ ಪರ ಆಕಾಶ್‌ ಶಿಂಧೆ ರೈಡಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ. ಡಿಫೆನ್ಸ್‌ನಲ್ಲಿ ನಾಯಕ ಫಜ಼ಲ್‌ ಅತ್ರಾಚಲಿ, ಅಭಿನಾಶ್‌ ಸಹ ಉತ್ತಮ ಆಟವಾಡಿದರು. ಮೊಹಮ್ಮದ್‌ ನಭೀಭಕ್ಷ್‌ ಆಲ್ರೌಂಡ್‌ ಪ್ರದರ್ಶನ ನೀಡಿದರು ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಹೀಗಾಗಿ ಪುಣೇರಿ ಪಲ್ಟನ್‌ ತಂಡದ ಪ್ರಶಸ್ತಿ ಗೆಲ್ಲುವ ಕನಸು ಸಹ ನನಸಾಗಲಿಲ್ಲ.

Tags: jaipur becomes championjaipur pink pantherspro kabaddipuneri paltans
ShareTweetSendShare
Join us on:

Related Posts

ಕೊಲಂಬೊದಲ್ಲಿ ಭಾರತದ ಆರ್ಭಟ ಪಾಕಿಸ್ತಾನ ಧೂಳಿಪಟ: ಟಿ20 ವಿಶ್ವಕಪ್ ಅಖಾಡದಲ್ಲಿ ಟೀಮ್ ಇಂಡಿಯಾ ದರ್ಬಾರ್

ಕೊಲಂಬೊದಲ್ಲಿ ಭಾರತದ ಆರ್ಭಟ ಪಾಕಿಸ್ತಾನ ಧೂಳಿಪಟ: ಟಿ20 ವಿಶ್ವಕಪ್ ಅಖಾಡದಲ್ಲಿ ಟೀಮ್ ಇಂಡಿಯಾ ದರ್ಬಾರ್

by Shwetha
February 16, 2026
0

ದಾಯಾದಿ ರಾಷ್ಟ್ರಗಳ ಕಾಳಗದಲ್ಲಿ ಮತ್ತೊಮ್ಮೆ ಭಾರತ ಮೇಲುಗೈ ಸಾಧಿಸಿದೆ. 2026ರ ಟಿ20 ವಿಶ್ವಕಪ್‌ನ ಅತ್ಯಂತ ಹೈವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 61 ರನ್‌ಗಳ ಅಂತರದಲ್ಲಿ ಬಗ್ಗುಬಡಿದ...

ಹಂಪಿ ಉತ್ಸವ:ಇವರು ಯಾರು ಎಂದು ಅಶ್ವಿನಿ ಪುನೀತ್ ಬಗ್ಗೆ ಕೇಳಿದ ಸಿಎಂ ಸಿದ್ದು ನಡೆಗೆ ಕನ್ನಡಿಗರ ಬೇಸರ;ಅಪ್ಪು ಅಭಿಮಾನಿಗಳು ಕೆಂಡಾಮಂಡಲ

ಹಂಪಿ ಉತ್ಸವ:ಇವರು ಯಾರು ಎಂದು ಅಶ್ವಿನಿ ಪುನೀತ್ ಬಗ್ಗೆ ಕೇಳಿದ ಸಿಎಂ ಸಿದ್ದು ನಡೆಗೆ ಕನ್ನಡಿಗರ ಬೇಸರ;ಅಪ್ಪು ಅಭಿಮಾನಿಗಳು ಕೆಂಡಾಮಂಡಲ

by Shwetha
February 16, 2026
0

ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಮರುಕಳಿಸುವಂತೆ ಮಾಡುವ, ನಾಡಿನ ಕಲೆ ಮತ್ತು ಸಂಸ್ಕೃತಿಯ ಪ್ರತೀಕವಾಗಿರುವ ಐತಿಹಾಸಿಕ ಹಂಪಿ ಉತ್ಸವಕ್ಕೆ ಅದ್ದೂರಿ ಚಾಲನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗಾರಿ ಬಾರಿಸುವ...

ದೆಹಲಿಗೆ ಕಳುಹಿಸಬೇಕಾದ ಕಪ್ಪ ಕಾಣಿಕೆ ಕಡಿಮೆ ಆಯ್ತಾ? ಸಾವಿರ ದಿನಗಳ ಸಂಭ್ರಮಕ್ಕೆ ಹೈಕಮಾಂಡ್ ಗೈರು ಹಾಜರಿ ಹಿಂದಿನ ಸ್ಫೋಟಕ ಸತ್ಯ ಬಿಚ್ಚಿಟ್ಟ ಬಿಜೆಪಿ

ದೆಹಲಿಗೆ ಕಳುಹಿಸಬೇಕಾದ ಕಪ್ಪ ಕಾಣಿಕೆ ಕಡಿಮೆ ಆಯ್ತಾ? ಸಾವಿರ ದಿನಗಳ ಸಂಭ್ರಮಕ್ಕೆ ಹೈಕಮಾಂಡ್ ಗೈರು ಹಾಜರಿ ಹಿಂದಿನ ಸ್ಫೋಟಕ ಸತ್ಯ ಬಿಚ್ಚಿಟ್ಟ ಬಿಜೆಪಿ

by Shwetha
February 16, 2026
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು ಸಾವಿರ ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿದ್ದ ಸಾಧನಾ ಸಮಾವೇಶಕ್ಕೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಗೈರಾಗಿರುವುದು ರಾಜಕೀಯ...

ದಿನ ಭವಿಷ್ಯ (15-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (16-02-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
February 16, 2026
0

ದಿನ ಭವಿಷ್ಯ: 16-02-2026 ಮೇಷ ರಾಶಿ ಇಂದು ಮೇಷ ರಾಶಿಯವರಿಗೆ ಅತ್ಯಂತ ಚಟುವಟಿಕೆಯ ದಿನವಾಗಿದೆ. ಉದ್ಯೋಗದಲ್ಲಿರುವವರಿಗೆ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ವ್ಯಾಪಾರಸ್ಥರಿಗೆ ಹೂಡಿಕೆಯಲ್ಲಿ ಲಾಭದ ಸೂಚನೆ ಇದೆ....

What should the God's lamp look like inside the house?

ಮನೆಯೊಳಗೆ ದೇವರ ದೀಪ ಹೇಗಿರ ಬೇಕು?

by admin
February 15, 2026
0

ಮನೆಯೊಳಗೆ ದೇವರ ದೀಪ ಹೇಗಿರ ಬೇಕು? ನಾವು ದಿನ ನಿತ್ಯ ದೇವರಿಗೆ ದೀಪ ಇಟ್ಟು, ಭಕ್ತಿಯಿಂದ ದೇವರಿಗೆ ಕೈ ಮುಗಿಯುತ್ತೇವೆ. ನಮ್ಮನ್ನು ಕುತೂಹಲದಿಂದ ನೋಡಿ ಕಲಿಯುವ ಮಕ್ಕಳು'...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram