ADVERTISEMENT
Thursday, June 18, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಶತಾಯುಷಿ ಕ್ರಿಕೆಟಿಗ ವಸಂತ್ ರೈಜಿ ನಿಧನ

admin by admin
June 13, 2020
in Newsbeat, Sports, Uncategorized, ಕ್ರೀಡೆ
Share on FacebookShare on TwitterShare on WhatsappShare on Telegram

ಶತಾಯುಷಿ ಕ್ರಿಕೆಟಿಗ ವಸಂತ್ ರೈಜಿ ನಿಧನ

ಶತಾಯುಷಿ ಹಾಗೂ ದೇಸಿ ಕ್ರಿಕೆಟಿಗ ವಸಂತ್ ರೈಜಿ ಅವರು ಇಂದು ನಿಧನರಾಗಿದ್ದಾರೆ. ಭರ್ತಿ ನೂರು ವರ್ಷ ಬದುಕಿದ್ದರು. ವಯೋಸಹಜ ಖಾಯಿಲೆಯಿಂದಾಗಿ ಅವರು ಶನಿವಾರ ರಾತ್ರಿ 2.20ರ ವೇಳೆಗೆ ದಕ್ಷಿಣ ಮುಂಬೈನ ವಾಲ್ಕೇಶ್ವರದಲ್ಲಿರುವ ತಮ್ಮ ನಿವಾಸದಲ್ಲೇ ಅಸು ನೀಗಿದ್ದಾರೆ ಎಂದು ಅವರ ಅಳಿಯ ಸುದರ್ಶನ್ ನಾನಾವಾಟಿ ತಿಳಿಸಿದ್ದಾರೆ.
ವಸಂತ್ ರೈಜಿ ಅವರು ಬಲಗೈ ಬ್ಯಾಟ್ಸ್ ಮೆನ್ ಆಗಿದ್ದು, 9 ಪ್ರಥಮ ದರ್ಜೆಯ ಪಂದ್ಯಗಳನ್ನು ಆಡಿದ್ದಾರೆ. 1939ರಲ್ಲಿ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ ಪರ ಮೊದಲ ಪ್ರಥಮ ದರ್ಜೆಯ ಪಂದ್ಯವನ್ನು ಕೇಂದ್ರ ಪ್ರಾಂತಿಯ ವಿರುದ್ಧ ಆಡಿದ್ದರು. ನಾಗ್ಪುರದಲ್ಲಿ ನಡೆದ ಆ ಪಂದ್ಯದಲ್ಲಿ ರೈಜಿ ಅವರು ಡಕೌಟ್ ಆಗಿದ್ದರು. ಹಾಗೇ ಎರಡನೇ ಇನಿಂಗ್ಸ್ ನಲ್ಲಿ ಒಂದು ರನ್ ಗಳಿಸಿದ್ದರು. ಆದಾದ ನಂತರ ರೈಜಿ ಅವರು ಕ್ರಿಕೆಟ್ ಆಟವನ್ನು ಗಂಭೀರವಾಗಿ ಪರಿಗಣಿಸಿದ್ದರು.
ಪರಿಣಾಮ, 1941ರಲ್ಲಿ ಮುಂಬೈ (ಆಗೀನ ಬಾಂಬೆ) ತಂಡದ ಪರ ಹಾಗೂ 1944ರಲ್ಲಿ ಬರೋಡಾ ತಂಡದ ಪರ ಆಡಿದ್ದರು. 9 ಪಂದ್ಯಗಳಲ್ಲಿ ಅವರು 277 ರನ್ ಗಳಿಸಿದ್ದರು. ಇದ್ರಲ್ಲಿ ಎರಡು ಅರ್ಧಶತಗಳಿವೆ. 1944ರಲ್ಲಿ ಮಹಾರಾಷ್ಟ್ರ ವಿರುದ್ಧ ಆಕರ್ಷಕ 68 ರನ್ ಗಳಿಸಿ ಬರೋಡಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಷ್ಟೇ ಅಲ್ಲ, ಲಾಲ್ ಅಮರನಾಥ್, ವಿಜಯ್ ಮರ್ಚೆಂಟ್, ಸಿ.ಕೆ. ನಾಯ್ಡು, ವಿಜಯ ಹಜಾರೆ ಮೊದಲಾದ ಅಪ್ರತಿಮ ಕ್ರಿಕೆಟಿಗರ ಜೊತೆಗೂ ಆಡಿದ್ದರು.

Related posts

Curaçao's Football team

444 ಕಿ.ಮೀ ವಿಸ್ತೀರ್ಣ, 1.5 ಲಕ್ಷ ಜನಸಂಖ್ಯೆ.. ಫಿಫಾ ವಿಶ್ವಕಪ್‍ಗೆ ಅರ್ಹತೆ ಪಡೆದ ಪುಟ್ಟ ದೇಶದ ರೋಚಕ ಫುಟ್‍ಬಾಲ್ ಸಾಧನೆಯ ಸ್ಟೋರಿ..!

June 17, 2026
Iran's 33-year-old goalkeeper Alireza Beirand

ಅಂದು ಕುರಿಗಾಯಿ ಬಾಲಕ.. ಇಂದು ವಿಶ್ವದ ಶ್ರೇಷ್ಠ ಗೋಲು ಕೀಪರ್..!

June 17, 2026

ಪ್ರಥಮ ದರ್ಜೆಯ ಕ್ರಿಕೆಟ್ ನಿವೃತ್ತಿಯ ಬಳಿಕ ಬ್ಯಾಟ್ ಬದಲು ಕೈಯಲ್ಲಿ ಪೆನ್ನು ಹಿಡಿದಿದ್ದ ವಸಂತ್ ರೈಜಿ ಅವರು ಅನೇಕ ಲೇಖನಗಳು, ಪುಸ್ತಕಗಳನ್ನು ಬರೆದಿದ್ದಾರೆ. ವೃತ್ತಿಯಲ್ಲಿ ಚಾರ್ಟೆಡ್ ಆಕೌಟೆಂಟ್ ಕೂಡ ಆಗಿರುವ ರೈಜಿ ಅವರಿಗೆ ಕ್ರಿಕೆಟ್ ಮೇಲೆ ಅಪಾರವಾದ ಪ್ರೀತಿ ಇತ್ತು. ಹೀಗಾಗಿ ಕ್ರಿಕೆಟ್‍ಗೆ ಸಂಬಂಧಪಟ್ಟಂತಹ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಸಿ.ಕೆ. ನಾಯ್ಡು, ವಿಕ್ಟರ್ ಟ್ರಂಪರ್, ಎಲ್.ಪಿ. ಜೈ ಮೊದಲಾದ ಕ್ರಿಕೆಟಿಗರ ಬಗ್ಗೆ ಪುಸ್ತಕಗಳು ಇವರ ಬರವಣಿಗೆಯಲ್ಲಿ ಮೂಡಿ ಬಂದಿವೆ.
ಜಾಲಿ ಕ್ರಿಕೆಟ್ ಕ್ಲಬ್ ನ ಸ್ಥಾಪಕ ಸದಸ್ಯರಾಗಿದ್ದ ವಸಂತ್ ರೈಜಿ ಅವರು ಟಿವಿಯಲ್ಲಿ ಇಳಿ ವಯಸ್ಸಿನಲ್ಲೂ ಪಂದ್ಯಗಳನ್ನು ನೋಡ್ತಾ ಇದ್ದರು.
2020ರ ಜನವರಿ 20ರಂದು ತನ್ನ ನೂರನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಮತ್ತು ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಸ್ಟೀವ್ ವಾ ಅವರು ಭೇಟಿ ಮಾಡಿದ್ದರು. ಕ್ರಿಕೆಟ್ ಇತಿಹಾಸಕಾರನೂ ಆಗಿರುವ ವಸಂತ್ ರೈಜಿ ಅವರಿಗೆ ಸಿ,ಕೆ. ನಾಯ್ಡು ನೆಚ್ಚಿನ ಕ್ರಿಕೆಟಿಗರಾಗಿದ್ದರು.

ShareTweetSendShare
Join us on:

Related Posts

Curaçao's Football team

444 ಕಿ.ಮೀ ವಿಸ್ತೀರ್ಣ, 1.5 ಲಕ್ಷ ಜನಸಂಖ್ಯೆ.. ಫಿಫಾ ವಿಶ್ವಕಪ್‍ಗೆ ಅರ್ಹತೆ ಪಡೆದ ಪುಟ್ಟ ದೇಶದ ರೋಚಕ ಫುಟ್‍ಬಾಲ್ ಸಾಧನೆಯ ಸ್ಟೋರಿ..!

by admin
June 17, 2026
0

ಕ್ಯುರಾಸಾವೋ.. ಬಹುತೇಕರಿಗೆ ಈ ಹೆಸರಿನ ಒಂದು ರಾಷ್ಟ್ರವಿದೆ ಅಂತ ಗೊತ್ತಿರಲಿಕ್ಕಿಲ್ಲ. ಆದ್ರೆ ಈ ದೇಶ ಈಗ 2026ರ ಫಿಫಾ ವಿಶ್ವಕಪ್ ಟೂರ್ನಿಯಿಂದ ಚಾಲ್ತಿಗೆ ಬಂದಿದೆ. ಹೌದು. ಕ್ಯುರಾಸಾವೋ...

Iran's 33-year-old goalkeeper Alireza Beirand

ಅಂದು ಕುರಿಗಾಯಿ ಬಾಲಕ.. ಇಂದು ವಿಶ್ವದ ಶ್ರೇಷ್ಠ ಗೋಲು ಕೀಪರ್..!

by admin
June 17, 2026
0

ಅಂದು ಕುರಿಗಾಯಿ ಬಾಲಕ.. ಇಂದು ವಿಶ್ವದ ಶ್ರೇಷ್ಠ ಗೋಲು ಕೀಪರ್..! ಸರಿ ಸುಮಾರು 20 ವರ್ಷಗಳ ಹಿಂದೆ ಆತ ಕುರಿಗಾಯಿ ಬಾಲಕ. ಅಲೆಮಾರಿ ಕುಟುಂಬದ ಈ ಹುಡುಗನಿಗೆ...

ಆರ್‌ಎಸ್‌ಎಸ್‌ ಹಿಂದೂ ಧರ್ಮದ ಸ್ವತ್ತಲ್ಲ, ಮೋಹನ್‌ ಭಾಗವತ್‌ ವಿರುದ್ಧ ಬಿ ಕೆ ಹರಿಪ್ರಸಾದ್‌ ಕೆಂಡಾಮಂಡಲ: ಸಂಘದ ನೋಂದಣಿ ವಿಚಾರವಾಗಿ ಕಾವೇರಿದ ರಾಜಕೀಯ ಜಟಾಪಟಿ

ಆರ್‌ಎಸ್‌ಎಸ್‌ ಹಿಂದೂ ಧರ್ಮದ ಸ್ವತ್ತಲ್ಲ, ಮೋಹನ್‌ ಭಾಗವತ್‌ ವಿರುದ್ಧ ಬಿ ಕೆ ಹರಿಪ್ರಸಾದ್‌ ಕೆಂಡಾಮಂಡಲ: ಸಂಘದ ನೋಂದಣಿ ವಿಚಾರವಾಗಿ ಕಾವೇರಿದ ರಾಜಕೀಯ ಜಟಾಪಟಿ

by Shwetha
June 17, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ನೋಂದಣಿ ವಿಚಾರವಾಗಿ ದೇಶಾದ್ಯಂತ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಸಂಘಟನೆಯನ್ನು ಹಿಂದೂ ಧರ್ಮಕ್ಕೆ ಹೋಲಿಸಿ...

66 ರೌಡಿಶೀಟರ್‌ಗಳ ಹೆಸರು ಕೈಬಿಟ್ಟ ವಿಚಾರ; ಸೀಮಂತ್ ಕುಮಾರ್ ಸಿಂಗ್ ಸ್ಪಷ್ಟನೆ

66 ರೌಡಿಶೀಟರ್‌ಗಳ ಹೆಸರು ಕೈಬಿಟ್ಟ ವಿಚಾರ; ಸೀಮಂತ್ ಕುಮಾರ್ ಸಿಂಗ್ ಸ್ಪಷ್ಟನೆ

by Shwetha
June 17, 2026
0

ರೌಡಿಪಟ್ಟಿಯಿಂದ 66 ರೌಡಿಶೀಟರ್‌ಗಳ ಹೆಸರನ್ನು ಕೈಬಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಪೊಲೀಸ್...

ನೀಟ್ ಮರುಪರೀಕ್ಷೆಗೆ ಮಿಲಿಟರಿ ಸರ್ಪಗಾವಲು: ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ಅಣ್ಣಾಮಲೈ; ವಿದ್ಯಾರ್ಥಿಗಳ ಒತ್ತಡಕ್ಕೆ ಹೊಣೆ ಯಾರು ಎಂದು ಗುಡುಗಿದ ತಮಿಳುನಾಡಿನ ಸಿಂಗಂ

ನೀಟ್ ಮರುಪರೀಕ್ಷೆಗೆ ಮಿಲಿಟರಿ ಸರ್ಪಗಾವಲು: ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದ ಅಣ್ಣಾಮಲೈ; ವಿದ್ಯಾರ್ಥಿಗಳ ಒತ್ತಡಕ್ಕೆ ಹೊಣೆ ಯಾರು ಎಂದು ಗುಡುಗಿದ ತಮಿಳುನಾಡಿನ ಸಿಂಗಂ

by Shwetha
June 17, 2026
0

ಚೆನ್ನೈ: ಮುಂಬರುವ ನೀಟ್ ಯುಜಿ ಮರುಪರೀಕ್ಷೆಗೆ ಕೇಂದ್ರ ಶಿಕ್ಷಣ ಸಚಿವಾಲಯ ಹಾಗೂ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಕೈಗೊಂಡಿರುವ ಅತಿಯಾದ ಭದ್ರತಾ ಕ್ರಮಗಳ ವಿರುದ್ಧ ತಮಿಳುನಾಡಿನ ಪ್ರಭಾವಿ ನಾಯಕ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram