COVID 19 : ಇಂದಿನಿಂದಲೇ ಖಾಸಗಿ ಶಾಲೆಗಳಲ್ಲಿ ಕರೊನಾ ರೂಲ್ಸ್ ಜಾರಿ…
ಚೀನಾ ಜಪಾನ್ ಅಮೇರಿಕಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿಕೋವಿಡ್ ಹೆಚ್ಚಾಗುತ್ತಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ನಮ್ಮ ದೇಶದಲ್ಲೂ ಅಲರ್ಟ್ ಮಾಡಲಾಗಿದೆ. ಈಗಾಗಲೇ ಸರ್ಕಾರಗಳು ಕೆಲವೊಂದು ಮುನ್ನೆಚ್ಚರಿಕೆ ಸಂದೇಶಗಳನ್ನ ಪ್ರಕಟಿಸಿದ್ದು, ಮತ್ತೆ ಕೋವಿಡ್ ನಿಯಮಗಳನ್ನ ಕಟ್ಟು ನಿಟ್ಟಾಗಿ ಪಾಲಿಸುವಂತೆ ಆದೇಶಿಸಿದೆ.
ಶಾಲಾ ಕಾಲೇಜುಗಳು ಸಹ ಇದೀಗ ಮುನ್ನೆಚ್ಚರಿಕೆಗಳಿಗೆ ಮುಂದಾಗಿದೆ. ಹೀಗಾಗಿ ರುಪ್ಸಾ ಅಧೀನದಲ್ಲಿ ಬರುವ ಎಲ್ಲಾ ಖಾಸಗಿ ಶಾಲೆಗಳ ಜೊತೆ ಸಭೆ ನಡೆಸಿದ್ದು ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಕರೋನಾ ಮುಂಜಾಗೃತ ಕ್ರಮಗಳನ್ನ ಕೈಗೊಳ್ಳಲು ಅನುಸರಿಸ ಬೇಕಾದ ಕ್ರಮಗಳ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಇಂದಿನಿಂದಲೇ ಈ ಎಲ್ಲಾ ಕ್ರಮಗಳು ಜಾರಿಗೆ ಬರಲಿವೆ.
ಶಾಲೆಗೆ ಬರುವ ಎಲ್ಲಾ ವಿದ್ಯಾರ್ಥಿಗಲೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ನೆಗಡಿ ಕೆಮ್ಮು ಜ್ವರ ಇದ್ದರೆ ಪೋಷಕರಿಗೆ ತಿಳಿಸಬೇಕು . ನೆಗಡಿ ಕೆಮ್ಮು ಜ್ವರ ಇರುವ ವಿದ್ಯಾರ್ಥಿಗಳಿಗೆ ಶಾಲೆಯಿಂದ ರಜೆ ನೀಡುವುದು. ಶಿಕ್ಷಕರು ಸಿಬ್ಬಂಧಿಗಳು ಮಾಸ್ಕ್ ಧರಿಸಬೇಕು ಮತ್ತು ಬೂಸ್ಟರ್ ಡೋಸ್ ಹಾಕಿಸಿಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮತ್ತು ನಿತ್ಯ ಮಕ್ಕಳ ಟೆಂಪರೇಚರ್ ಚೆಕ್ ಅಪ್ ಸೇರಿದಂತೆ ಇನ್ನಿತರ ಕ್ರಮಗಳನ್ನ ರುಪ್ಸಾ ಪ್ರಕಟಿಸಿದೆ.
COVID 19: Corona Rules implemented in private schools from today…








